ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿ ಸರಕಾರದ ಮಹತ್ವದ ನಿರ್ಧಾರ, ಪಾಕ್ ಚೀನಾಗೆ ಬಿಗ್ ಶಾಕ್!

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರ್ ಆಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಕ್ಷೇತ್ರದ 101 ಉಪಕರಣಗಳ ಆಮದಿಗೆ ನಿರ್ಬಂಧ ಹೇರಲಾಗುವುದು. ಆರ್ಟಿಲರಿ ಗನ್, ರೈಫಲ್ಸ್, ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ರಾಡಾರ್ ಸೇರಿದಂತೆ 101 ವಸ್ತುಗಳ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

READ ALSO

ರಕ್ಷಣಾ ಕ್ಷೇತ್ರದಲ್ಲಿ ದೇಶಿಯ ಉತ್ಪಾದನೆಗೆ ಒತ್ತು ನೀಡಲಾಗಿದೆ. 1.30 ಲಕ್ಷ ಕೋಟಿ ರೂಪಾಯಿಯನ್ನು ವಾಯುಸೇನಾಪಡೆಗೆ ಶಸ್ತ್ರಾಸ್ತ್ರ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. 1.40 ಲಕ್ಷ ಕೋಟಿ ರೂಪಾಯಿಗಳನ್ನು ನೌಕಾಸೇನೆಯ ಶಸ್ತ್ರಾಸ್ತ್ರ ನಿರ್ಮಾಣಕ್ಕೆ ಮೀಸಲಿಡಲಾಗಿದೆ.

ದೇಶದಲ್ಲಿಯೇ ರಕ್ಷಣಾ ವಲಯದ ಅಗತ್ಯ ವಸ್ತು, ಉತ್ಪಾದನೆ, ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಒತ್ತು ನೀಡಲಿದ್ದು, ದೇಶೀಯ ಕಂಪನಿಗಳಿಗೆ ಹಣಕಾಸು ನೆರವು ನೀಡಲಾಗುವುದು ಎಂದು ಹೇಳಲಾಗಿದೆ.

ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವ ಮತ್ತು ಪಾಕ್ ಕಿಡಿಕಾರುತ್ತಿರುವ ಹೊತ್ತಲ್ಲೇ ಭಾರತ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿರುವುದು ಗಮನಸೆಳೆದಿದೆ.