SDM ಕಾಲೇಜು ವಿದ್ಯಾರ್ಥಿ ಜಯಪ್ರಕಾಶ್ ಗೌಡ ಕೊಂದೋಡಿ ಭಾರತೀಯ ವಾಯುಸೇನೆಗೆ ಆಯ್ಕೆ

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಜಯಪ್ರಕಾಶ್ ಗೌಡ ಕೊಂದೋಡಿ ಯವರು ಭಾರತೀಯ ವಾಯುಸೇನೆಗೆ ಆಯ್ಕೆಯಾಗಿದ್ದಾರೆ.

ಬೆಳಗಾವಿಯಲ್ಲಿ ನಡೆದ ಭಾರತೀಯ ವಾಯುಸೇನೆ ರ‌್ಯಾಲಿಯಲ್ಲಿ  ಆಯ್ಕೆಯಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ರಕ್ತೇಶ್ವರಿ ಪದವು ಗೇರುಕಟ್ಟೆ ಫ್ರೌಢ ಶಿಕ್ಷಣವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ, ಪದವಿಪೂರ್ವ ಶಿಕ್ಷಣವನ್ನು ವಾಣಿ ಪಿ.ಯು.ಕಾಲೇಜು ವಿಜ್ಞಾನ ವಿಭಾಗದಲ್ಲಿ, ಹಾಗೂ ಪ್ರಸ್ತುತ SDM ಕಾಲೇಜು ಉಜಿರೆಯಲ್ಲಿ ದ್ವಿತೀಯ ವರ್ಷದ ಪದವಿ(B.SC) ವ್ಯಾಸಾಂಗ ಮಾಡುತ್ತಿದ್ದಾರೆ.

READ ALSO

ಇವರು ಕಡಿರುದ್ಯಾವರ ಗ್ರಾಮದ ಕೊಂದೋಡಿ ನಿವಾಸಿ ಶ್ರೀಯುತ ಧರ್ಣಪ್ಪ ಗೌಡ ಮತ್ತು ಶ್ರೀಮತಿ ಭಾರತಿ ಧರ್ಣಪ್ಪ ಗೌಡ ಇವರ ದ್ವಿತೀಯ ಪುತ್ರರಾಗಿರುತ್ತಾರೆ.