ಇನ್ಮುಂದೆ JEE ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬರೆಯಬಹುದು

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) 2021ರ ಸಾಲಿನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತಿಳಿಸಿದೆ.

ಕನ್ನಡ, ಹಿಂದಿ, ಇಂಗ್ಲಿಷ್‌, ಗುಜರಾತಿ, ಮಲೆಯಾಳಂ, ಮರಾಠಿ, ಒಡಿಯಾ, ಬಂಗಾಳಿ, ಅಸ್ಸಾಂ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ನಡೆಯಲಿದೆ ಎಂದು ಅದು ತಿಳಿಸಿದೆ.

READ ALSO

ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಸೆಷನ್ -1 ಪರೀಕ್ಷೆಯು ಫೆಬ್ರವರಿ 23 ರಿಂದ ಫೆಬ್ರವರಿ 26, 2021 ರವರೆಗೆ, ಸೆಷನ್ -2 ಮಾರ್ಚ್ 15 ರಿಂದ ಮಾರ್ಚ್ 18, 2021 ರವರೆಗೆ, ಸೆಷನ್ -3 ಏಪ್ರಿಲ್ 27 ರಿಂದ ಏಪ್ರಿಲ್ 30 ರವರೆಗೆ, 2021 ಮತ್ತು ಸೆಷನ್- IV ಮೇ 24 ರಿಂದ ಮೇ 28, 2021 ರವರೆಗೆ ನಡೆಯಲಿದೆ