ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ ಮಾದರಿ “ಗ್ರಾಮ ಚಾವಡಿ”

ಕಡಿರುದ್ಯಾವರ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಡಿರುದ್ಯಾವರ ಗ್ರಾ.ಪಂ.ಗೆ 48 ಲಕ್ಷ ರೂ ಅನುದಾನದಲ್ಲಿ ಎಪ್ರಿಲ್ 2021ರಲ್ಲಿ ಶಿಲಾನ್ಯಾಸಗೊಂಡ ನೂತನ ಗ್ರಾಮ ಚಾವಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಇದೀಗ ಫೆ. 4ರಂದು ಉದ್ಘಾಟನೆಗೆ ಸಜ್ಜಾಗಿದೆ.ಮಿತ್ತಬಾಗಿಲು ಗ್ರಾ.ಪಂ.ಗೆ ಒಳಪಟ್ಟಿದ್ದ ಕಡಿರುದ್ಯಾವರ ಗ್ರಾ.ಪಂ.ಗೆ 2018-19ನೇ ಸಾಲಿನ ದೀನ್ ದಯಾಳ್‌ ಉಪಾಧ್ಯಾಯ ಪಂಚಾಯತ್ ಯೋಜನೆಯಲ್ಲಿ 20 ಲಕ್ಷ ರೂ. ಹಾಗೂ ಎಂಎನ್‌ಆರ್‌ಜಿ 28 ಲಕ್ಷ ರೂ. ಸೇರಿ 48 ಲಕ್ಷ ರೂ. ಅನುದಾನದಡಿ ಹಳೆ ಗ್ರಾ.ಪಂ. ಸನಿಹದ 1.37 ಎಕ್ಕರೆ ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಾಣವಾಗಿದೆ.

ಫೆ.4ರಂದು ಪಂಚಾಯತ್ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು (ರಾಜ್ಯಸಭಾ ಸದಸ್ಯರು) ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಉಡುಪಿ ಜಿಲ್ಲಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್‌, ಹರೀಶ್‌ ಕುಮಾರ್, ಮಂಜುನಾಥ ಭಂಡಾರಿ, ಹರಿಕೃಷ್ಣ ಬಂಟ್ವಾಳ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಜಿಲ್ಲಾ ಉಪಕಾರ್ಯದರ್ಶಿ ಕೆ.ಆನಂದ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ತಾಲೂಕಿನ ತಹಶೀಲ್ದಾರ್ ಹಾಗೂ ಕಾರ್ಯಪಾಲಕ ಅಭಿಯಂತರರು ನಿತಿನ್ ಕುಮಾರ್ ನಾಯಕ್‌ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಗ್ರಾಮ ಪಂಚಾಯತ್ ಗಳು, ಸ್ವತಂತ್ರವಾಗಿ ಅಭಿವೃದ್ಧಿಯತ್ತ ಮುನ್ನಡೆ ಸಾಗುತ್ತಿರುವುದು ಗ್ರಾಮದ ಅಭಿವೃದ್ಧಿಯ ಸೂಚನೆಯಾಗಿದೆ. ಇತ್ತೀಚೆಗೆ ಹೊಸ ಗ್ರಾಮ ಪಂಚಾಯತ್‌ಗಳು ರಚನೆ ಆದಾಗ ಕುಗ್ರಾಮ ಎಂದೇ ಗುರುತಿಸಲ್ಪಟ್ಟ ದಿಡುಪೆಯ ರಸ್ತೆಯ ಪಕ್ಕದಲ್ಲಿ ಎದ್ದು ನಿಂತು ಬಹಳ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ಪುಟ್ಟ ಗ್ರಾಮ ಕಡಿರುದ್ಯಾವರ.

ಸುಮಾರು 48ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ವಿಶಾಲವಾದ ಸಭಾಭವನ ಗ್ರಾಮದ ಸಣ್ಣ ಮಟ್ಟದ ಸಭೆ ಸಮಾರಂಭಕ್ಕೆ ಉಪಯೋಗಿಸಬಹುದು. ಮೀಟಿಂಗ್ ಹಾಲ್‌, ಅಧ್ಯಕ್ಷ, ಉಪಾಧ್ಯಕ್ಷರ ಪ್ರತ್ಯೇಕ ಕಛೇರಿಗಳು. ಅಭಿವೃದ್ಧಿ ಅಧಿಕಾರಿ ಕಛೇರಿ, ಕಂಪ್ಯೂಟರ್ ರೂಮ್‌ಗಳು ಹಾಗೂ ಸಿಬ್ಬಂದಿಗಳ ಕ್ಯಾಬಿನ್ ಗಳು ನಿರ್ಮಾಣಗೊಂಡಿದೆ.

ವಿಶೇಷತೆ: ಹೊರಾಂಗಣದಲ್ಲಿ ಗಾರ್ಡನ್, ಹಣ್ಣಿನ ತೋಟ, ಹೂವಿನ ತೋಟ, ಕುಡಿಯುವ ನೀರಿನ ಸುಂದರ ಬಾವಿ, ಧ್ವಜಸ್ತಂಭ, ಸುತ್ತಲೂ ಕಾಂಕ್ರೀಟ್ ರಸ್ತೆ ಹಾಗೂ ಇಡೀ ಪ್ರಾಂಗಣಕ್ಕೆ ಇಂಟರ್ ಲಾಕ್‌ ಅಳವಡಿಸಲಾಗಿದೆ.

ಪ್ರತ್ಯೇಕ ಘನತ್ಯಾಜ್ಯ ಘಟಕದ ನಿವೇಶನದಲ್ಲಿ 1.87 ಎಕರೆ ವಿಸ್ತೀರ್ಣದಲ್ಲಿ ಉಳಿಕೆ ಜಾಗದಲ್ಲಿ ಪಂಚಾಯತ್‌ನ ವತಿಯಿಂದ 520 ಗೇರು ಗಿಡ ಬೆಳಸಲಾಗಿದೆ.

ಸುಸಜ್ಜಿತವಾದ ಘನ ತ್ಯಾಜ್ಯ ಘಟಕ, ಹಳ್ಳಿಗಳ ಪ್ರತಿ ವಾರ್ಡ್‌ಗಳಲ್ಲಿ ಹಂತ-ಹಂತವಾಗಿ ಕಾಂಕ್ರೀಟ್ ರಸ್ತೆಗಳ ಸರ್ಮಾಣಗೊಂಡಿದೆ. ಕೃಷಿಕರಿಗಾಗಿ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಂಡಿದೆ. ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್‌ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್ ಇವರ ಅನುದಾನಗಳು ಅಭಿವೃದ್ಧಿಗೆ ಸಹಕಾರಿಯಾಗಿದೆ.

ಒಂಬತ್ತು ಸದಸ್ಯರನ್ನು ಹೊಂದಿರುವ ಕಡಿರುದ್ಯಾವರ ಪಂಚಾಯತ್‌ನಲ್ಲಿ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿಯಲ್ಲಿ ಉಳಿದ ಸದಸ್ಯರು ಸಾಥ್ ನೀಡುತ್ತಿದ್ದಾರೆ. ಅಭಿವೃದ್ಧಿ ಅಧಿಕಾರಿಯಾಗಿ ಜಯಕೀರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ.

Spread the love
  • Related Posts

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕಾಲೇಜಿನಲ್ಲಿ ಫಲಿತಾಂಶ ತಡವಾಗಿ ಪ್ರಕಟಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ. ವಿಶ್ವವಿದ್ಯಾಲಯದ ಫಲಿತಾಂಶಗಳು ತಡವಾಗಿ ಬರುತ್ತಿರುವುದರಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಮೊದಲ ಸೆಮಿಸ್ಟರ್ ನಿಂದ ಆರನೇ…

    Spread the love

    ಗ್ರಾಮಾಭಿವೃದ್ಧಿ ಮೂಲಕ ಕಲ್ಯಾಣ ಕರ್ನಾಟಕದಲ್ಲೂ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಸುರೇಶ್ ಅಪ್ಪಣ್ಣ ಸವದಿ

    ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ದೇವದುರ್ಗ ತಾಲೂಕಿನ ವತಿಯಿಂದ ಮುರಿಗೆಪ್ಪ ಖೇಣೇದ್ ಫಂಕ್ಷನ್ ಹಾಲ್ ನಲ್ಲಿ ದಿನಾಂಕ 28/09/2024 ಶನಿವಾರದಂದು ತಾಲೂಕು ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು…

    Spread the love

    You Missed

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    • By admin
    • October 7, 2024
    • 18 views
    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    • By admin
    • October 2, 2024
    • 27 views
    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    • By admin
    • October 1, 2024
    • 404 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    ಗ್ರಾಮಾಭಿವೃದ್ಧಿ ಮೂಲಕ ಕಲ್ಯಾಣ ಕರ್ನಾಟಕದಲ್ಲೂ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಸುರೇಶ್ ಅಪ್ಪಣ್ಣ ಸವದಿ

    • By admin
    • September 29, 2024
    • 38 views
    ಗ್ರಾಮಾಭಿವೃದ್ಧಿ ಮೂಲಕ ಕಲ್ಯಾಣ ಕರ್ನಾಟಕದಲ್ಲೂ ರೈತ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುವ ಹೆಗ್ಗಡೆಯವರ ಕಾರ್ಯ ಶ್ಲಾಘನೀಯ: ನ್ಯಾಯಾಧೀಶ ಸುರೇಶ್ ಅಪ್ಪಣ್ಣ ಸವದಿ

    ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

    • By admin
    • September 24, 2024
    • 121 views
    ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

    ಮುಡಾ ಹಗರಣದಲ್ಲಿ ಸಿ.ಎಂ ವಿರುದ್ಧ ತನಿಖೆಗೆ ಅಸ್ತು ರಾಜ್ಯಪಾಲರ ತನಿಖೆ ಆದೇಶ ಎತ್ತಿಹಿಡಿದ ಹೈಕೋರ್ಟ್

    • By admin
    • September 24, 2024
    • 93 views
    ಮುಡಾ ಹಗರಣದಲ್ಲಿ ಸಿ.ಎಂ ವಿರುದ್ಧ ತನಿಖೆಗೆ ಅಸ್ತು ರಾಜ್ಯಪಾಲರ ತನಿಖೆ ಆದೇಶ ಎತ್ತಿಹಿಡಿದ ಹೈಕೋರ್ಟ್