ಕಾಶಿ ಯಾತ್ರೆ ಮಾಡುವ ಭಕ್ತರಿಗೆ ಸಂತಸದ ಸುದ್ದಿ ವಿಶ್ವನಾಥನ ದರ್ಶನಕ್ಕೆ ಸರ್ಕಾರ ನೀಡುತ್ತೆ 5,000 ಸಹಾಧನ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದಂತೆ ಕಾಶಿ ಯಾತ್ರೆಗೆ ರೂ 5000 ಸಹಾಯಧನ ನೀಡುವುದಾಗಿ ಘೋಷಿಸಿದೆ. 2022-23ರ ಬಜೆಟ್ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಈ ಘೋಷಣೆ ಮಾಡಿದ್ದರು. ಆ ಘೋಷಣೆಯನ್ನು ಅನುಷ್ಠಾನ ಕೈಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೆ 5000 ರೂಪಾಯಿ ಸಹಾಯಧನ ನೀಡಲು ತಾತ್ವಿಕ ಅನುಮೋದನೆಯ ಪ್ರಕಾರ ಆದೇಶ ಹೊರಡಿಸಿದೆ.

ಕಾಶಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ಕಾಶಿ ಯಾತ್ರೆ ಕೈಗೊಳ್ಳುವ ಮನಸ್ಸಿರುವವರು ತಮ್ಮ ಕಾಶಿ ಯಾತ್ರೆಯನ್ನು ಪೂರ್ಣಗೊಳಿಸಲು ಈ ಮೊತ್ತವನ್ನು ಬಳಸಬಹುದಾಗಿದೆ. ಮಾಹಿತಿಯ ಪ್ರಕಾರ ಪ್ರತಿ ವರ್ಷ 30,000 ಯಾತ್ರಾರ್ಥಿಗಳು ಮುಜರಾಯಿ, ಹಜ್ ಮತ್ತು ವಕ್ಫ್ ಸಬ್ಸಿಡಿ ಪಡೆಯುತ್ತಾರೆ.

READ ALSO

ಕಾಶಿ ಯಾತ್ರಾ ಸಬ್ಸಿಡಿ ಯೋಜನೆಗೆ ಅರ್ಹತೆಯ ಮಾನದಂಡಗಳು:
ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅರ್ಹ ಭಕ್ತರಿಗೆ ಕಾಶಿ ಯಾತ್ರೆಗೆ 5000 ರೂ. ಈ ಮೊತ್ತವನ್ನು ಕಾಶಿ ಯಾತ್ರೆಯ ವೆಚ್ಚವಾಗಿ ಬಳಸಬಹುದು. ಪ್ರಯೋಜನಗಳನ್ನು ಪಡೆಯಲು ಅಧಿಕೃತ ಪ್ರಕಟಣೆಯ ನಂತರ ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು.

ಅಗತ್ಯವಿರುವ ದಾಖಲೆಗಳು:
ಕಾಶಿ ಯಾತ್ರಾ ಸಬ್ಸಿಡಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೆಲವು ದಾಖಲೆಗಳು ಬೇಕಾಗುತ್ತವೆ.
•ಆಧಾರ್ ಕಾರ್ಡ್
•ಮತದಾರರ ಗುರುತಿನ ಚೀಟಿ
•ಶಾಶ್ವತ ನಿವಾಸ ಪುರಾವೆ
•ಮೊಬೈಲ್ ನಂಬರ್
•ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಕಾಶಿ ಯಾತ್ರೆಯ ಸಬ್ಸಿಡಿ ಕರ್ನಾಟಕ 2022 ಆನ್ಲೈನ್ ನೋಂದಣಿಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಕಾಶಿ ಯಾತ್ರೆಯ ಸಬ್ಸಿಡಿ ಯೋಜನೆಗಾಗಿ ತಮ್ಮ ನೋಂದಣಿಯನ್ನು ಮಾಡಿಕೊಳ್ಳಲು ಹಲವರು ಈಗಾಗಲೇ ಬಯಸಿದ್ದಾರೆ. ಆದರೆ ಇದೀಗ ಸರ್ಕಾರ ಕಾಶಿ ಯಾತ್ರೆಯ ಸಹಾಯಧನದ ಆದೇಶ ಹೊರಡಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತ ಅರ್ಜಿ ನಮೂನೆ ಬಿಡುಗಡೆಯಾಗಲಿದೆ. ಕಾಶಿ ಯಾತ್ರೆ ಸಹಾಯಧನದ ಅರ್ಜಿ ಬಿಡುಗಡೆಯ ಕುರಿತು ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ ಗಮನಿಸುತ್ತಿರಬೇಕು.

ಕಾಶಿ ಯಾತ್ರೆಗೆ ಹೋಗುವುದು ಅಂದರೆ ಸಕಲ ಹಿಂದೂ ಜನರಿಗೆ ಜೀವಮಾನದ ಕನಸು ಆಗಿರುತ್ತದೆ. ಹೀಗಾಗಿ ಸಾಯೋದ್ರೊಳಗೆ ಒಮ್ಮೆಯಾದರೂ ಕಾಶಿ ಯಾತ್ರೆಗೆ ಹೋಗಲು ಬಹುತೇಕ ಆಸ್ತಿಕ ಭಕ್ತರು ಇಚ್ಛೆ ಹೊಂದಿರುತ್ತಾರೆ. ಸರ್ಕಾರಗಳು ಹಜ್ ಯಾತ್ರೆಗೆ ಹೋಗಲು ಮುಸ್ಲಿಂ ಸಮುದಾಯಕ್ಕೆ ನೆರವು ನೀಡುವ ಸಂಪ್ರದಾಯವಿದೆ. ಅದೇ ರೀತಿ ಕರ್ನಾಟಕ ಸರ್ಕಾರವು ಉತ್ತರ ಪ್ರದೇಶದ ಕಾಶಿ ಅಥವಾ ಆಧುನಿಕ ವಾರಣಾಸಿಯಯ ದರ್ಶನ ಪಡೆಯಲು ಬಯಸುವ ಯಾತ್ರಾರ್ಥಿಗಳಿಗೆ ಎಂದೇ ಹೊಸ ಯೋಜನೆಯನ್ನು ಬಜೆಟ್​ನಲ್ಲಿ ಘೋಷಣೆ ಮಾಡಿತ್ತು.

ಹೀಗೆ ಮೂಲಭೂತ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಹಿಂದೂ ಯಾತ್ರಾರ್ಥಿಗಳು ಕರ್ನಾಟಕ ಸರ್ಕಾರ ಘೋಷಿಸಿರುವ ಕಾಶಿ ಯಾತ್ರೆಯ ಸಹಾಯ ಧನವನ್ನು ಪಡೆಯಬಹುದಾಗಿದೆ.

ಈ ಯೋಜನೆಯ ಬಗ್ಗೆ ಸಮಾಜದಲ್ಲಿ ಧನಾತ್ಮಕ ಪ್ರತಿಕ್ರಿಯೆ ಕೇಳಿಬಂದಿತ್ತು. ವಾರಣಾಸಿ ಅಥವಾ ಕಾಶಿ ಯಾತ್ರೆಗೆ ಹೋಗಲು ಸಬ್ಸಿಡಿ ಪಡೆಯಲು ಬಹುತೇಕರು ಉತ್ಸುಕರಾಗಿದ್ದಾರೆ.