ಶ್ರೀ ಕ್ಷೇತ್ರ ಕಾಟಾಜೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಶ್ರೀ ಕ್ಷೇತ್ರ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ 20/04/2021 ರಿಂದ 29/04/2021ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತವನ್ನು ವೈದಿಕರಾದ ಶ್ರೀ ದಿವಾಕರ ಭಟ್‌ರವರ ನೇತೃತ್ವದಲ್ಲಿ ತಾಲೂಕಿನ ಶಾಸಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅದ್ಯಕ್ಷರಾದ ಶ್ರೀ ಹರೀಶ್ ಪೂಂಜಾರವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂಧರ್ಭದಲ್ಲಿ ಆಡಳಿತ ಮೊಕ್ತೇಸ್ತರರು ಜೀರ್ಣೋದ್ದಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲಾ ಸದಸ್ಯರು, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಸಂತಿ ಉಪಾದ್ಯಕ್ಷೆ ಶ್ರೀಮತಿ ಕುಶಲ ಮತ್ತು ಸದಸ್ಯರಾದ ಸಚಿನ್ ಕೆ ಆರ್, ಶ್ರಿ ದಿನೇಶ್ ನೆಕ್ಕರೆ, ಶ್ರೀ ಬಾಬುಗೌಡ ಪರ್ಪಳ, ಶ್ರೀಮತಿ ಸಜಿತಾ, ಶ್ರೀಮತಿ ಸವಿತಾ ಅಲಂಗಾಯಿ, ಶ್ರೀಮತಿ ಮಾಲತಿ, ಹಾಗೂ ಎಲ್ಲಾ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

READ ALSO