ಇಂದು ನಾಡಪ್ರಭು ಕೆಂಪೇಗೌಡರ 511ನೇ ಜಯಂತಿ ಮಹೋತ್ಸವ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿ ಮಹೋತ್ಸವವನ್ನು ಇಂದು ರಾಜ್ಯಾಂದ್ಯಂತ ಆಚರಣೆ ಮಾಡಲಾಗುತ್ತಿದೆ.

ಯಲಹಂಕದಲ್ಲಿ ಕ್ರಿ.ಶ.1510 ಜೂನ್ 27ರಂದು ಕೆಂಪೇಗೌಡ ಜನಿಸಿದ್ದರು. ಇವರಿಗೆ ಹಿರಿಯ ಕೆಂಪೇಗೌಡ ಎನ್ನುವ ಹೆಸರು ಕೂಡ ಇದೆ. ಅವರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕದ ಪಾಳೇಗಾರರಾಗಿದ್ದರು. ಕೆಂಪೇಗೌಡರು ದೂರದೃಷ್ಟಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದ್ದರು. ಇದೀಗ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಯ ಮಗನಾಗಿ ಕೆಂಪೇಗೌಡರು ಜನಿಸಿದರು. ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ಈ ಎಲ್ಲಾ ವೈಭವಗಳನ್ನು ತಮ್ಮ ನಾಡಿನಲ್ಲೂ ಪ್ರತಿಷ್ಠಾಪಿಸುವ ಬಯಕೆ ಇತ್ತು. ಇದರಿಂದಾಗಿ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳೆಲ್ಲವನ್ನೂ ಮನದಟ್ಟು ಮಾಡಿಕೊಂಡು ಬಂದಿದ್ದರು.

ನಂತರ ನಗರ ನಿರ್ಮಾಣಕ್ಕೆ ಪ್ರದೇಶದ ಆಯ್ಕೆ ಮಾಡುವ ಜವಾಬ್ದಾರಿಯನ್ನೂ ಕೆಂಪೇಗೌಡರೇ ವಹಿಸಿಕೊಂಡಿದ್ದರು. ಕೆಂಪೇಗೌಡರ ತಾಯಿ ಕೆಂಪಾಂಬೆ ಮತ್ತು ಪತ್ನಿ ಚೆನ್ನಮಾಂಬೆ(ಸೋದರ ಮಾವನ ಮಗಳು) ಇಬ್ಬರೂ ಹಳೆ ಬೆಂಗಳೂರಿನವರು. ಹಾಗಾಗಿ ಇಬ್ಬರ ಪ್ರೀತಿಯ ನೆನಪಿಗಾಗಿ ತಾವು ನಿರ್ಮಿಸಿದ ಪಟ್ಟಣಕ್ಕೆ ಬೆಂಗಳೂರು ಎಂದು ಹೆಸರಿಟ್ಟಿರೆಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಅಲ್ಲದೆ, ಬೆಣಚು ಕಲ್ಲುಗಳಿಂದ ಕೂಡಿದ್ದಕ್ಕೆ ಬೆಂಗಳೂರು ಎನ್ನುವ ಹೆಸರು ಬಂದಿದೆ ಎನ್ನುವ ಮಾತೂಗಳು ಇವೆ. ಅನೇಕ ಅರಸರು ಇದಕ್ಕೆ ಧನ ಸಹಾಯ ಮಾಡಿದ್ದರು.

Spread the love
  • Related Posts

    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ಸದನದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಆಗುವಂತೆ ಕೆಲವು ನಿಯಮಾವಳಿಗಳನ್ನು ತರುವಂತೆ ಆಗ್ರಹಿಸಿದರು ಕೇಂದ್ರ ಸರ್ಕಾರವು ಬಡವರಿಗೋಸ್ಕರ ಯೋಜಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯಲು ಮಂಗಳೂರಿನಲ್ಲಿರುವ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ…

    Spread the love

    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    ಬೆಳ್ತಂಗಡಿ: ಮೆಸ್ಕಾಂ ಎಂದರೆ ದೂರುವರೇ ಹೆಚ್ಚು ದಿನಬೇಳಗಾದ್ರೆ ಮನೆ ಮನೆಗಳಲ್ಲಿ ನಿರಂತರ ಬೆಳಕು ಉರಿಯುತ್ತಲೆ ಇರಬೇಕು ಇಲ್ಲದಿದ್ದರೆ ಮನೆ ಮಾಲೀಕನಿಂದ ಹಿಡಿದು ಕುಟುಂಬದ ಎಲ್ಲಾ ಸದಸ್ಯರು ಹಿಡಿಶಾಪ ಹಾಕೋದು ಮಾತ್ರ ಮೆಸ್ಕಾಂ ಇಲಾಖೆ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆದರೆ ಯಾವತ್ತೂ…

    Spread the love

    You Missed

    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    • By admin
    • July 23, 2024
    • 56 views
    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    • By admin
    • July 22, 2024
    • 147 views
    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

    • By admin
    • July 21, 2024
    • 65 views
    ಶಿರೂರು ಗುಡ್ಡ ಕುಸಿತ  ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ  ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

    ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

    • By admin
    • July 21, 2024
    • 15 views
    ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

    ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

    • By admin
    • July 21, 2024
    • 18 views
    ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

    ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು

    • By admin
    • July 21, 2024
    • 148 views
    ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು