ಬೆಳ್ತಂಗಡಿ: ಶ್ರೀ ಕೃಷ್ಣ ದಂತ ಚಿಕಿತ್ಸಾ ಕೇಂದ್ರ, ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ,ದೇರಳಕಟ್ಟೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರವು ಇಂದು ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಬಾಲಕೃಷ್ಣ ಶೆಟ್ಟಿ ಅಸೋಸಿಯೇಟ್ ಪ್ರೊಫೆಸರ್ ಎಸ್.ಡಿ.ಎಮ್.ಸಿ.ಎನ್.ವೈ ಎಸ್ ಉಜಿರೆ ಇವರು ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ದಂತ ಚಿಕಿತ್ಸಾ ಕೇಂದ್ರವನ್ನು ಪ್ರಾರಂಬಿಸಿದ್ದು ನಿಜಕ್ಕೂ ಪ್ರಶಂಸನೀಯ, ವೈದ್ಯಕೀಯ ಕ್ಷೇತ್ರದ ಸವಾಲುಗಳ ನಡುವೆ ಡಾ ಮುರಳಿಕೃಷ್ಣ ಇರ್ವತ್ರಾಯ ಇವರು ಮಾಡಿದಂತ ಸೇವೆಯು ಅಪಾರವಾದದ್ದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಪ್ರಕಾಶ್ ಶೆಟ್ಟಿ ನೊಚ್ಚ ಅಭಿವೃದ್ಧಿ ಅಧಿಕಾರಿಗಳು ಗ್ರಾ ಪಂ ಚಾರ್ಮಾಡಿ ಇವರು ಮಾತಾಡಿ ಇಂತಹ ಶಿಬಿರವು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಜತೆಗೆ ಆರೋಗ್ಯಪೂರ್ಣ ಸಮಾಜವನ್ನಾಗಿಸಲು ಸಹಕಾರಿಯಾಗುತ್ತದೆ ಎಂದರು,ಮುಂದಿನ ದಿನಗಳಲ್ಲಿ ಗ್ರಾಮಪಂಚಾಯತ್ ವತಿಯಿಂದ ಸಂಪೂರ್ಣವಾಗಿ ಸಹಕರಿಸುವ ಬರವಸೆ ನೀಡಿದರು. ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಸಾದ್ ಕೆ ವಿ ಅಧ್ಯಕ್ಷರು ಗ್ರಾ ಪಂ ಚಾರ್ಮಾಡಿ, ಸಿಸ್ಟರ್ ಮರಿಯಾ ರೆಜಿನಾ ಮುಖ್ಯೊಪದ್ಯಾಯರು ಸೈಂಟ್ ಸಾವಿಯೊ ಶಾಲೆ ಬೆಂದ್ರಾಳ,ಶ್ರೀ ಹೈದರ್ ಮರ್ದಳ ಪ್ರಾಂಶುಪಾಲರು ಮನ್ ಶರ್ ಪ್ಯಾರಮೆಡಿಕಲ್ ಕಾಲೇಜು ಗೇರುಕಟ್ಟೆ,ಡಾ.ಪ್ರಕೃತಿ ಶೆಟ್ಟಿ ದಂತ ವೈದ್ಯರು ಶ್ರೀ ಕೃಷ್ಣ ಆಸ್ಪತ್ರೆ,ಶ್ರೀ ಗಿರೀಶ್ ಕುದ್ರೆಂತಾಯ ಉದ್ಯಮಿ ಗಳು ಧರ್ಮಸ್ಥಳ,ಮೊದಲಾದವರಿದ್ದರು. ಡಾ ಆಲ್ಬಿನ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು. ಡಾ ಪ್ರಕೃತಿ ಶೆಟ್ಟಿ ಸ್ವಾಗತಿಸಿ,ಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾದಿಕಾರಿಗಳಾದ ಡಾ.ವಂದನಾ ಎಂ ಇರ್ವತ್ರಾಯ ಧನ್ಯವಾದವಿತ್ತರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಜಿತ್ ಹರಿ, ಪಿ ಆರ್ ಓ ಗಣೇಶ್,ಹೈದರ್ ಅಲಿ ಸಹಕರಿಸಿದರು.
ಶಿಬಿರದಲ್ಲಿ ಉಚಿತ ದಂತ ತಪಾಸಣೆ ಮತ್ತು ದಂತ ವೈದ್ಯರ ಸಲಹೆ,ಚಿಕಿತ್ಸೆಗೆ ಒಳಪಡದ ಮತ್ತು ಬಹಳ ಕೆಟ್ಟಿರುವ ಹಲ್ಲುಗಳನ್ನು ಕೀಳುವುದು,ಮುಖಾಂಗಕ್ಕೆ ಮತ್ತು ಸೀಳು ತುಟಿಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಸಲಹೆ ಹಾಗೂ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ,ಚಿಕಿತ್ಸೆಗೆ ಒಳಪಡುವ ಹಲ್ಲುಗಳನ್ನು ತುಂಬಿಸುವುದು,ಹಲ್ಲುಗಳ ಶುಚೀಕರಣ,60 ವರ್ಷ ಮೆಲ್ಪಟ್ಟ ನಾಗರಿಕರಿಗೆ ಉಚಿತವಾಗಿ ದಂತಪಂಕ್ತಿ ಅಳವಡಿಸುವಿಕೆ,ಇಂಪ್ಲಾಂಟ್ ಆಧಾರಿತ ದಂತ ಚಿಕಿತ್ಸೆಗೆ ಸಲಹೆ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ,ದಂತ ಭಾಗ್ಯ ಯೋಜನೆಯ ಸೇವೆ.ಮೊದಲಾದ ಚಿಕಿತ್ಸೆಗಳು ನಡೆಯಿತು.
ಸುಮಾರು ನೂರಕ್ಕೂ ಅಧಿಕ ಸಾರ್ವಜನಿಕರು ಬಾಗವಹಿಸಿ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು.