ಬಿಸಿಲ ಬೇಗೆಗೆ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್! ಗಗನಕ್ಕೇರುತ್ತಿದೆ ನಿಂಬೆಹಣ್ಣಿನ ಬೆಲೆ

ಬೆಂಗಳೂರು: ಉತ್ತರ ಭಾರತದಲ್ಲಿ ನಿಂಬೆ ಬೆಲೆ ಕೇಜಿಗೆ 350 ರು.ಗೆ ಏರಿ ಇತ್ತೀಚೆಗೆ ನಿಂಬೆಹಣ್ಣಿನ ದರೋಡೆ ಉಂಟಾಗಿದ್ದು. ಈಗ ಉತ್ತರ ಭಾರತ ಮಾತ್ರವಲ್ಲ, ರಾಜ್ಯದಲ್ಲಿ ಕೂಡ ನಿಂಬೆಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಉತ್ತಮ ಗಾತ್ರದ ನಿಂಬೆಹಣ್ಣಿನ ದರ ಪ್ರತಿ ಕೆಜಿಗೆ 300 ರು. ತಲುಪಿದೆ. ಕಡಿಮೆಯಾದ ಇಳುವರಿ, ಬೇಡಿಕೆ ಹೆಚ್ಚಿರುವ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿರುವ ಪರಿಣಾಮ ನಿಂಬೆಹಣ್ಣನ್ನು ಖರೀದಿಸಲು ಜನರು ಹಿಂಜರಿಯುವಂತಾಗಿದೆ.

ಈ ಮುಂಚೆ ಕೇಜಿಗೆ 100-150 ರು. ದರದಲ್ಲಿ ಒಂದು ಕೇಜಿ ದೊಡ್ಡ ಗಾತ್ರದ ನಿಂಬೆಹಣ್ಣು ಸಿಗುತ್ತಿತ್ತು. ಈಗ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯಂಥ ಪೇಟೆಯಲ್ಲಿ ಅತ್ಯಂತ ಎಳೆಯ, ಸಣ್ಣ ಗಾತ್ರದ ನಿಂಬೆಹಣ್ಣು ಕೆಜಿಗೆ ಕನಿಷ್ಠ 100 ರು. ಇದೆ. ಇಂಥ ಒಂದು ನಿಂಬೆಹಣ್ಣಿಗೆ 7-8 ರು. ಕೊಟ್ಟು ಖರೀದಿಸಬೇಕಾಗಿದೆ. ಸ್ವಲ್ಪ ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣಿಗೆ 9ರಿಂದ 10 ರು.ವರೆಗೆ ಮಾರಾಟ ಮಾಡಲಾಗುತ್ತದೆ. ಆದರೆ ಹಾಪ್‌ಕಾಮ್ಸ್‌ನಲ್ಲಿ ಮಾತ್ರ ಒಂದು ಕೆಜಿ ನಿಂಬೆಹಣ್ಣಿನ ಬೆಲೆ 84 ರು. ಇದೆ.

ಏರಿಕೆಗೆ ಕಾರಣ ಏನು:

ರಾಜ್ಯಾದ್ಯಾಂತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಬಿದ್ದ ಅಕಾಲಿಕ ಮಳೆಯಿಂದ ನಿಂಬೆ ಹಣ್ಣಿನ ಫಸಲಿನಲ್ಲಿ ಶೇ.40 ರಷ್ಟುಕುಸಿತವಾಗಿದೆ. ಇದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣ. ರಾಜ್ಯದಲ್ಲಿ ಸುಮಾರು 21 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಿಂಬೆ ಬೆಳೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಶೇ.75 ರಷ್ಟುನಿಂಬೆ ಬೆಳೆಯುವ ರೈತರಿದ್ದಾರೆ. ಆದರೆ, ಹೂವು ಬಿಡುವ ತಿಂಗಳಾದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಅಕಾಲಿಕ ಮಳೆ ಬಿದ್ದಿದೆ. ಇದೇ ಕಾರಣದಿಂದ ನಿಂಬೆ ಹೂವು ಶೇ.50 ರಷ್ಟುಉದುರಿ ಹೋಗಿದೆ. ಅಲ್ಲದೆ, 100 ಹಣ್ಣು ಸಿಗುವ ಮರದಲ್ಲಿ ಕೇವಲ 50-60 ಹಣ್ಣು ಮಾತ್ರ ಸಿಗುತ್ತಿದೆ. ಇದು ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ನಿಂಬೆ ಹಣ್ಣಿಗೆ ಕೊಂಚ ಪ್ರಮಾಣದಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಜನರು ಸಹ ಹೆಚ್ಚಿನ ನಿಂಬೆ ಬಳಕೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಹಿನ್ನೆಲೆಯಲ್ಲಿ ಬೆಲೆ ತುಸು ಹೆಚ್ಚಳವಾಗಿದೆ

ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಬೆಂಗಳೂರು ನಗರಕ್ಕೆ ನಿಂಬೆ ಹಣ್ಣು ಪೂರೈಕೆಯಾಗುತ್ತಿದೆ. ಆದರೆ ಈಗ ಬೇಡಿಕೆ ಹೆಚ್ಚು ಬಂದಿರುವ ಕೊಲ್ಲಿ ರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತಿರುವುದರಿಂದ ನಗರಕ್ಕೆ ಸಾಕಷ್ಟುನಿಂಬೆಹಣ್ಣು ಪೂರೈಕೆಯಾಗುತ್ತಿಲ್ಲ. ಚಿಲ್ಲರೆ ಮಾರಾಟದಲ್ಲಿ ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ 7ರಿಂದ 10ರು.ವರೆಗೂ ಮಾರಾಟ ಮಾಡಲಾಗುತ್ತಿದೆ.

ಬೆಲೆ ಭಾರಿ ದುಬಾರಿ ಸಣ್ಣ ನಿಂಬೆಹಣ್ಣು = ಪ್ರತಿ ಹಣ್ಣಿಗೆ 7 ರಿಂದ 8 ರು., ದೊಡ್ಡ ನಿಂಬೆಹಣ್ಣು = ಪ್ರತಿ ಹಣ್ಣಿಗೆ 9 ರಿಂದ 10 ರು., ಮಾರುಕಟ್ಟೆದರ = ಪ್ರತಿ ಕೆ.ಜಿ.ಗೆ 300 ರು.

ನಿಂಬೆ ರಸದ ಬೆಲೆ ಹೆಚ್ಚಳ:

ಸಾಮಾನ್ಯ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ (ಪಾನಕ) ಬೆಲೆಯಲ್ಲಿ 10 ರಿಂದ 15 ರು.ಇರುತ್ತಿತ್ತು. ಆದರೆ, ಈಗ ನಿಂಬೆ ಬೆಲೆ ಹೆಚ್ಚಳದಿಂದ 20ರಿಂದ 25 ರು.ಗಳ ವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಅಂಗಡಿಗಳ ಮಾಲೀಕರು ವಿವರಿಸಿದರು.

Spread the love
  • Related Posts

    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ಸದನದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಆಗುವಂತೆ ಕೆಲವು ನಿಯಮಾವಳಿಗಳನ್ನು ತರುವಂತೆ ಆಗ್ರಹಿಸಿದರು ಕೇಂದ್ರ ಸರ್ಕಾರವು ಬಡವರಿಗೋಸ್ಕರ ಯೋಜಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯಲು ಮಂಗಳೂರಿನಲ್ಲಿರುವ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ…

    Spread the love

    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    ಬೆಳ್ತಂಗಡಿ: ಮೆಸ್ಕಾಂ ಎಂದರೆ ದೂರುವರೇ ಹೆಚ್ಚು ದಿನಬೇಳಗಾದ್ರೆ ಮನೆ ಮನೆಗಳಲ್ಲಿ ನಿರಂತರ ಬೆಳಕು ಉರಿಯುತ್ತಲೆ ಇರಬೇಕು ಇಲ್ಲದಿದ್ದರೆ ಮನೆ ಮಾಲೀಕನಿಂದ ಹಿಡಿದು ಕುಟುಂಬದ ಎಲ್ಲಾ ಸದಸ್ಯರು ಹಿಡಿಶಾಪ ಹಾಕೋದು ಮಾತ್ರ ಮೆಸ್ಕಾಂ ಇಲಾಖೆ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆದರೆ ಯಾವತ್ತೂ…

    Spread the love

    You Missed

    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    • By admin
    • July 23, 2024
    • 56 views
    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    • By admin
    • July 22, 2024
    • 147 views
    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

    • By admin
    • July 21, 2024
    • 65 views
    ಶಿರೂರು ಗುಡ್ಡ ಕುಸಿತ  ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ  ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

    ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

    • By admin
    • July 21, 2024
    • 15 views
    ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

    ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

    • By admin
    • July 21, 2024
    • 18 views
    ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

    ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು

    • By admin
    • July 21, 2024
    • 148 views
    ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು