ಹಾಕಿ ವಿಶ್ವಕಪ್ ಹೀರೋ ಮೈಕಲ್ ಕಿಂಡೊ ಇನ್ನಿಲ್ಲ

ಭುವನೇಶ್ವರ: ವಿಶ್ವಕಪ್ ಮತ್ತು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ತಂಡದಲ್ಲಿದ್ದ ಭಾರತದ ಹಾಕಿ ಪಟು ಮೈಕೆಲ್ ಕಿಂಡೊ (73) ಗುರುವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಫುಲ್‌ ಬ್ಯಾಕ್ ಆಟಗಾರ ಆಗಿದ್ದ ಮೈಕೆಲ್ 1972ರಲ್ಲಿ ಮ್ಯೂನಿಚ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಮತ್ತು 1975ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡದಲ್ಲಿ ಇದ್ದರು. ಅವರಿಗೆ ಅರ್ಜುನ ಪ್ರಶಸ್ತಿಯೂ ಸಂದಿದೆ.

READ ALSO