ಬೆಳ್ತಂಗಡಿ: ಬೆಳ್ತಂಗಡಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮಲವಂತಿಗೆ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಬಂಡೆಯೊಂದು ಉರುಳಿಬಿದ್ದಿದೆ.
ಮಲವಂತಿಗೆ ಗ್ರಾ.ಪಂ ವ್ಯಾಪ್ತಿಯ ದಿಡುಪೆ ಹೆಬ್ಬಾರ್ತಿಕಲ್ ಗುಡ್ಡದಲ್ಲಿ ರವಿವಾರ ಮುಂಜಾನೆಯ ಸಮಯದಲ್ಲಿ ಬಂಡೆ ಕುಸಿದಿದ್ದು, ಬಂಡೆ ಉರುಳಿಬಿದ್ದ ಸದ್ದಿಗೆ ಆತಂಕದಿಂದ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಕಳೆದ ಬಾರಿ ಕೂಡ ಇದೇ ವ್ಯಾಪ್ತಿಯ ತುಲುಪುಲೆ ಬದಿ ಗುಡ್ಡ ಜರಿದು ತೋಟಗಳಿಗೆ ಹಾನಿಯಾಗಿತ್ತು.
ಬಂಡೆ ಬಿದ್ದ ಸ್ಥಳದಲ್ಲಿ ದಟ್ಟ ಹೊಗೆ ಆಡಿದ ವಾತಾವರಣ ಕಂಡಿದ್ದು, ಕಳೆದ ಕೆಲದಿನಗಳಿಂದ ಮಳೆ ಸುರಿದಿದ್ದರಿಂದ ಮಣ್ಣು ಸಡಿಲಗೊಂಡು ಬಂಡೆ ಉರುಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೈದಾಡಿ ಘಾಟಿ ಕೆಳಗಿರುವ ಹೆಬ್ಬರ್ ತಿಕಲ್ ಗುಡ್ಡದಲ್ಲಿ ಈ ಘಟನೆ ಸಂಭವಿಸಿದ್ದು, ಗುಡ್ಡದ 3 ಕಿ.ಮೀ. ದೂರದಲ್ಲಿ 10 ಕ್ಕೂ ಅಧಿಕ ಮನೆಗಳಿವೆ. ಹೀಗಾಗಿ ಸ್ಥಳೀಯ ನಿವಾಸಿಗಳಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ.
ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA