ರಾಷ್ಟ್ರಧ್ವಜದ ‘ಮಾಸ್ಕ್’ ಮಾರಾಟ ಮಾಡುವ ಅಮೇಝಾನ, ಫ್ಲಿಪ್‌ಕಾರ್ಟ್ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ! – ಸುರಾಜ್ಯ ಅಭಿಯಾನ

ಮಂಗಳೂರು: ‘ಭಾರತೀಯ ರಾಷ್ಟ್ರಧ್ವಜ’ವು ಕೋಟಿಗಟ್ಟಲೆ ಭಾರತೀಯರಿಗೆ ಸ್ವಾಭಿಮಾನದ ವಿಷಯವಾಗಿದೆ; ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅದನ್ನು ಇತರ ಯಾವುದಕ್ಕೂ ಉಪಯೋಗಿಸುವುದು ಕಾನೂನಿಗನುಸಾರ ದಾಖಲಾರ್ಹ ಹಾಗೂ ಜಾಮೀನುರಹಿತ ಅಪರಾಧವಾಗಿದೆ. ಹೀಗಿದ್ದರೂ, ಇಂತಹ ಸಂವೇದನಾಶೀಲ ವಿಷಯಗಳ ಬಗ್ಗೆ ಗಾಂಭೀರ್ಯತೆಯನ್ನಿಡದೇ ಅಮೇಝಾನ್, ಇಂಡಿಯಾಮಾರ್ಟ್, ಫೇಮಸ್‌ಶಾಪ್, ಮೀಂತ್ರಾ, ಸ್ನ್ಯಾಪಡೀಲ್, ಫ್ಲಿಪ್‌ಕಾರ್ಟ್‌ನಂತಹ ‘ಈ-ಕಾಮರ್ಸ್’ ಜಾಲತಾಣಗಳಲ್ಲಿ ಕೊರೋನಾ ಸೋಂಕನ್ನು ತಡೆಗಟ್ಟಲು ಆಗಸ್ಟ್ ೧೫ ರ ನಿಮಿತ್ತ ಭಾರತೀಯ ರಾಷ್ಟ್ರಧ್ವಜದ ಬಣ್ಣಗಳಿರುವ ‘ಮಾಸ್ಕ್’ ನಿರ್ಮಿಸಿ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಅದೇರೀತಿ ಇಂತಹ ಮಾಸ್ಕ್‌ಗಳ ಮಾರಾಟ, ಉತ್ಪಾದನೆ ಹಾಗೂ ವಿತರಣೆಯಾಗಬಾರದು ಈ ದೃಷ್ಟಿಯಿಂದ ಸರಕಾರವು ಶೀಘ್ರದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು, ಎಂದು ‘ಸುರಾಜ್ಯ ಅಭಿಯಾನ’ ಉಪಕ್ರಮದ ಮನವಿಯ ಮಾಧ್ಯಮದಿಂದ ಹಿಂದೂ ಜನಜಾಗೃತಿ ಸಮಿತಿಯು ಮಾನ್ಯ ಪ್ರಧಾನಿ ಹಾಗೂ ಕೇಂದ್ರೀಯ ಗೃಹ ಸಚಿವರಲ್ಲಿ ಆಗ್ರಹಿಸಿದೆ.

ರಾಷ್ಟ್ರಧ್ವಜ ಇದು ಶೃಂಗಾರದ ಮಾಧ್ಯಮವಲ್ಲ. ಈ ರೀತಿಯ ಮಾಸ್ಕ್ ಉಪಯೋಗಿಸಿದರೆ ಸೀನುವುದು, ಅದಕ್ಕೆ ಉಗುಳು ತಾಗುವುದು, ಅದು ಅಸ್ವಚ್ಛವಾಗುವುದು, ಅದೇರೀತಿ ಉಪಯೋಗಿಸಿದ ನಂತರ ಕಸದಲ್ಲಿ ಬಿಸಾಡುವುದು ಇತ್ಯಾದಿಗಳಿಂದಾಗಿ ರಾಷ್ಟ್ರಧ್ವಜದ ಅವಮಾನವಾಗುತ್ತದೆ ಹಾಗೂ ಹೀಗೆ ಮಾಡುವುದೆಂದರೆ ಇದು ‘ರಾಷ್ಟ್ರೀಯ ಚಿಹ್ನೆಯ ದುರುಪಯೋಗ ತಡೆ ಕಾನೂನು ೧೯೫೦’, ಕಲಮ್ ೨ ಹಾಗೂ ೫ ಕ್ಕನುಸಾರ; ಅದೇರೀತಿ ‘ರಾಷ್ಟ್ರದ ಘನತೆಯ ಅವಮಾನ ಪ್ರತಿಬಂಧಕ ಅಧಿನಿಯಮ ೧೯೭೧’ರ ಕಲಂ ೨ ಕ್ಕನುಸಾರ ಹಾಗೂ ‘ಬೋಧಚಿಹ್ನೆ ಹಾಗೂ ಹೆಸರು (ದುರುಪಯೋಗ ನಿರ್ಬಂಧ) ಅಧಿನಿಯಮ ೧೯೫೦’ ಈ ಮೂರೂ ಕಾನೂನುಗಳಿಗನುಸಾರ ದಂಡನೀಯ ಅಪರಾಧವಾಗಿದೆ. ಆದ್ದರಿಂದ ಸರಕಾರ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಎಂದು ನಮ್ಮ ಬೇಡಿಕೆಯಾಗಿದೆ.

READ ALSO