
ನವದೆಹಲಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಖಾಸಗಿ ಸುದ್ದಿ ಮಾಧ್ಯಮಗಳಿಗೆ ಸಲಹೆ- ಸೂಚನೆಯನ್ನ ನೀಡಿದ್ದು ಚ್ಯಾನೆಲ್‌ಗಳಲ್ಲಿ ರಾಷ್ಟ್ರೀಯ ಸಹಾಯವಾಣಿಯ ದೂರವಾಣಿ ಸಂಖ್ಯೆಯನ್ನು ಪ್ರಕಟಿಸುವುದರ ಮೂಲಕ ಕೊರೊನಾ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ.
ಕೊರೊನಾ ಪ್ರಕರಣದ ಸಂಖ್ಯೆ ಇಳಿಮುಖವಾಗಿದ್ದರೂ, ದೇಶದಲ್ಲಿ ಕೊರೊನಾ ಸೋಂಕು ಅಧಿಕವಾಗಿಯೇ ಇದೆ, ಹೀಗಾಗಿ ಮಾಧ್ಯಮಗಳಲ್ಲಿ ರಾಷ್ಟ್ರೀಯ ಸಹಾಯವಾಣಿಯ ಸಂಖ್ಯೆಯನ್ನು ಪ್ರಕಟಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ. ಈಗಾಗಲೇ ಸರ್ಕಾರ ಟಿವಿ, ಮುದ್ರಣ ಮಾಧ್ಯಮ, ರೇಡಿಯೋ, ಸಾಮಾಜಿಕ ಜಾಲತಾಣದ ಮೂಲಕ ಕೊರೊನಾಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಜೊತೆಗೆ ರಾಷ್ಟ್ರೀಯ ಸಹಾಯವಾಣಿ ಬಗ್ಗೆಯೂ ಮಾಹಿತಿಯನ್ನ ಬಿತ್ತರಿಸಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಸಹಾಯವಾಣಿ ದೂರವಾಣಿ ಸಂಖ್ಯೆ ಇಲ್ಲಿದೆ:
1075 ( ಕುಟುಂಬ ಮತ್ತು ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ)
1098 (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ದೂರವಾಣಿ ಸಂಖ್ಯೆ)
14567 (ಸಾಮಾಜಿಕ ನ್ಯಾಯ ಮತ್ತು ಸಬಲೀಕರ ಸಚಿವಾಲಯದ ಹಿರಿಯ ನಾಗರಿಕರ ರಾಷ್ಟ್ರೀಯ ದೂರವಾಣಿ ಸಂಖ್ಯೆ )
08046110007 (ಮನೋಸ್ಥೈರ್ಯ ಸಹಾಯಕ್ಕೆ ನಿಮ್ಹಾನ್ಸ್ ಸಹಾಯವಾಣಿ ಸಂಖ್ಯೆ)
ಖಾಸಗಿ ಮಾಧ್ಯಮಗಳು ಚ್ಯಾನೆಲ್‌ಗಳಲ್ಲಿ ಈ ಸಹಾಯವಾಣಿಯನ್ನು ಪ್ರಕಟಿಸುವಂತೆ ಸಚಿವಾಲಯ ಸಲಹೆ ನೀಡಿದೆ. ಮಾರ್ಚ್ ತಿಂಗಳಿನಲ್ಲಿ ಟಿವಿ ಮಾಧ್ಯಮಗಳ ಜೊತೆ ಸಂವಾದ ನಡೆಸಿದ ಪಿಎಂ ಮೋದಿ ವೈಜ್ಞಾನಿಕ ವರದಿಗಳನ್ನು ಪ್ರಟಿಸುವ ಮೂಲಕ, ಜನರ ಜೊತೆ ಸಂವಾದ ನಡೆಸುವ ಮೂಲಕ ಕೊರೊನಾ ಸಾಂಕ್ರಾಮಿಕ ಎದುರಿಸಲು ಕೈ ಜೋಡಿಸಬೇಕು ಎಂದು ತಿಳಿಸಿದ್ದರು.