ಅಕ್ರಮ ಗೋ ಸಾಗಾಟಗಾರರಿಂದ ಹಲ್ಲೆಗೊಳಗಾದವರನ್ನು ಭೇಟಿ ಮಾಡಿ ದೈರ್ಯ ತುಂಬಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಇಂದು ಮುಂಜಾನೆಯ ವೇಳೆಯಲ್ಲಿ ನಡೆದ ಘಟನೆಯಲ್ಲಿ covid19 ತುರ್ತು ಸೇವೆಯ ಹೆಸರಲ್ಲಿ ಪಾಸ್ ಪಡೆದು ಅಕ್ರಮವಾಗಿ ಗೋ ಸಾಗಾಟ ಮಾಡುತಿದ್ದವರನ್ನು ತಡೆಯಲೆತ್ನಿಸಿದ ಶ್ರೀ ಗುರು ಹಾಗೂ ಶ್ರೀ ನಿತೀಶ್ ರವರಿಗೆ ಮಾರಣಾಂತಿಕ ಹಲ್ಲೆಯನ್ನು ಗೋ ಕಳ್ಳರು ನಡೆಸಿದ್ದು ಈ ಹಿನ್ನೆಲೆಯಲ್ಲಿ ಗಾಯಾಳುಗಳನ್ನು ಬೆಳ್ತಂಗಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಪಡಿಸಿದ್ದು, ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಯೋಗ ಕ್ಷೇಮ ವಿಚಾರಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ನೀಡಿದರು.

ಈ ವೇಳೆ ವಿಶ್ವಹಿಂದೂ ಪರಿಷತ್ ಭಜರಂಗದಳ ಪ್ರಖಂಡ ಸಂಚಾಲಕರು,ಹಿಂದೂ ಮುಖಂಡರುಗಳು ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸದಸ್ಯರು ಉಪಸ್ಥಿತರಿದ್ದರು.

READ ALSO