ಮಂಗಳೂರು: ಮಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಸುಗೂಸನ್ನು ಮಾರಾಟ ಮಾಡುವ ಜಾಲ ಇದಾಗಿದೆ. ಇದೀಗ ಎನ್ ಜಿಒ ಸಂಸ್ಥೆಯೊಂದರ ಸಹಾಯದಿಂದ ಪೊಲೀಸರು ಇದನ್ನು ಬೇಧಿಸಿದ್ದಾರೆ.
ಮಾರಾಟದ ಜಾಲವನ್ನು ಒಡನಾಡಿ ಸಂಸ್ಥೆಯ ಸಹಾಯದಿಂದ ಪತ್ತೆ ಹಚ್ಚಲಾಗಿದೆ. ಒಡನಾಡಿ ಮೈಸೂರು ಮೂಲದ ಎನ್ ಜಿಒ ಸಂಸ್ಥೆ ಯಾಗಿದೆ. ಈಗಾಗಲೇ ಸಾಕಷ್ಟು ಸಮಾಜಮುಖಿ ಕೆಲಸದಿಂದ ಪ್ರಸಿದ್ಧವಾಗಿದೆ.
ಗಂಡು ಮಗುವಿಗೆ 6 ಲಕ್ಷ ಹಾಗೂ ಹೆಣ್ಣು ಮಗುವಿಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣವನ್ನು ಇದೀಗ ಪತ್ತೆ ಹಚ್ಚಲಾಗಿದೆ. ಹಾಸನದಲ್ಲಿ ಮಗುವನ್ನ ಖರೀದಿ ಮಾಡಿ ಕಾರ್ಕಳದಲ್ಲಿ ಮಾರಾಟ ಮಾಡಲಾಗಿದೆ. ಐದು ತಿಂಗಳ ಹೆಣ್ಣು ಮಗುವನ್ನ ಮಾರಾಟ ಮಾಡಲಾಗಿದೆ. ಕಾರ್ಕಳದ ಮಹಿಳೆಯೊಬ್ಬರಿಗೆ ಹೆಣ್ಣು ಮಗು ಮಾರಾಟ ಮಾಡಲಾಗಿದೆ. ಮಕ್ಕಳು ಇಲ್ಲದವರಿಗೆ ಮಗು ಮಾರಾಟ ಮಾಡುವ ಬೃಹತ್ ಜಾಲ ಇದಾಗಿದೆ.
ಮಾನವ ಕಳ್ಳಸಾಗಟನೆ ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.