ಹಲವು ವರ್ಷಗಳ ಬಳಿಕ ಇಂದು ಸುದೀರ್ಘ ಚಂದ್ರಗ್ರಹಣ

ಹಲವು ವರ್ಷಗಳ ಬಳಿಕ ಇಂದು ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಈ ಭಾಗಶಃ ಚಂದ್ರಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡುಗಳು. ಇದಕ್ಕೂ ಮೊದಲು 18 ಫೆಬ್ರವರಿ 1440 ರಂದು ಅಂತಹ ದೀರ್ಘ ಚಂದ್ರಗ್ರಹಣ ಸಂಭವಿಸಿದೆ. ಅಂದರೆ, ಇಷ್ಟು ದೀರ್ಘಾವಧಿಯ ಈ ಭಾಗಶಃ ಚಂದ್ರಗ್ರಹಣವು 580 ವರ್ಷಗಳ ನಂತರ ಸಂಭವಿಸುತ್ತಿದೆ.

ಇದು 2021 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಿದೆ. ಈ ಹಿಂದೆ ಮೇ 26ರಂದು ಚಂದ್ರಗ್ರಹಣ ಸಂಭವಿಸಿತ್ತು. ಇದು ಸಂಪೂರ್ಣವಾಗಿ ಕೆಂಪು ಬಣ್ಣದ್ದಾಗಿತ್ತು, ಆದ್ದರಿಂದ ಇದನ್ನು ಸೂಪರ್ ಮೂನ್ ಥ ಅಥವಾ ರೆಡ್ ಬ್ಲಡ್ ಮೂನ್ ಎಂದೂ ಕರೆಯುತ್ತಾರೆ. ಈ ಭಾಗಶಃ ಚಂದ್ರಗ್ರಹಣದ ನಂತರ 15 ದಿನಗಳ ನಂತರ ಅಂದರೆ ಡಿಸೆಂಬರ್ 4 ರಂದು ಸಂಪೂರ್ಣ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ರಾಹು ದೇವರು ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ರಾಕ್ಷಸ ದೇವರನ್ನು ಒಳಗೊಂಡಿರುವುದರಿಂದ, ಗ್ರಹಣ ವೇಳೆ ಬಹಳಷ್ಟು ನಕಾರಾತ್ಮಕತೆಯನ್ನು ಹೊರಸೂಸುತ್ತದೆ ಎನ್ನಲಾಗಿದೆ.

READ ALSO

ಎಲ್ಲೆಲ್ಲಿ ಚಂದ್ರಗ್ರಹಣ ಗೋಚರ

ಈ ಚಂದ್ರಗ್ರಹಣವು ಭಾರತೀಯ ಕಾಲಮಾನ 10:59 ಕ್ಕೆ ಸಂಭವಿಸಲಿದೆ. ಸುಮಾರು 3 ಗಂಟೆ 28 ನಿಮಿಷ 24 ಸೆಕೆಂಡುಗಳ ಕಾಲ ನಡೆಯಲಿರುವ ಈ ಭಾಗಶಃ ಚಂದ್ರಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಭಾರತದಲ್ಲಿ ಇದು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಸ್ವಲ್ಪ ಸಮಯದವರೆಗೆ ಮಾತ್ರ ಗೋಚರಿಸುತ್ತದೆ.