ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಒಂಜರೆಬೈಲು ಹರ್ಷ ಭಟ್ ಎಂಬವರ ಮನೆಗೆ ತಡರಾತ್ರಿ ರಾತ್ರಿ ಸುಮಾರು 1.30ರವೇಳೆಯಲ್ಲಿ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ನಡೆಸಿ ನಗ, ನಗದು ದೋಚಿರುವ ಬಗ್ಗೆ ವರದಿಯಾಗಿದೆ.
ಮನೆ ಮಂದಿ ಮಲಗಿರುವ ವೇಳೆಯಲ್ಲಿ ಮುಂಬಾಗಿಲಿನ ಚಿಲಕ ತೆಗೆದು ಒಳ ಪ್ರವೇಶಿಸಿದ ಕಳ್ಳರು ಆರು ಪವನ್ ಚಿನ್ನ ಹಾಗೂ 14 ಸಾವಿರ ರೂಪಾಯಿ ನಗದು ದೋಚಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಮನೆಮಂದಿಗೆ ಎಚ್ಚರವಾದಾಗ ಮುಂಬಾಗಿಲ ಸಮೀಪ ಓರ್ವ ಕಂಡುಬಂದಿದ್ದು ಆಗ ಮನೆಮಂದಿ ಬೊಬ್ಬೆ ಹೊಡೆದಾಗ ಓಡಿ ಹೋಗಿದ್ದಾನೆ. ಮನೆಯಲ್ಲಿ ಒಟ್ಟು 5ಜನ ಇದ್ದು, 2 ಬೆಡ್ರೂಮ್ ಗಳಲ್ಲಿ ಮಲಗಿದ್ದರು. ಇನ್ನೊಂದು ಬೆಡ್ರೂಮಿಗೆ ನುಗ್ಗಿದ ಕಳ್ಳರು ಅದೇ ರೂಮಿನಲ್ಲಿದ್ದ ಕಪಾಟಿನ ಬೀಗದ ಕೈ ಉಪಯೋಗಿಸಿ ನಗ ನಗದು ದೋಚಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.