ಪತಂಜಲಿ ಸಂಸ್ಥೆಯಿಂದ ಕೊರೋನಾ ನಿಗ್ರಹಕ್ಕೆ ‘ಕೊರೊನಿಲ್’‌ ಔಷಧ ಅಭಿವೃದ್ಧಿ!

ನವದೆಹಲಿ: ಕೊರೊನಾ ವೈರಸ್ ನಿಗ್ರಹಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್‌ ಸಂಸ್ಥಾನದ ಪತಂಜಲಿ ಸಂಸ್ಥೆ ಕೊರೊನಿಲ್‌ ಔಷಧಿಯನ್ನ ಅಭಿವೃದ್ಧಿ ಪಡೆಸಿದ್ದು, ಇಂದು ಬಿಡುಗಡೆ ಮಾಡಲಾಯ್ತು.

ಶುಕ್ರವಾರ ದೆಹಲಿಯ ಕನ್ಸ್‌ಟ್ಯೂಷನ್‌ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಮದೇವ್ ಈ ಘೋಷಣೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.‌

READ ALSO

ಔಷಧ ಬಿಡುಗಡೆಯ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮದೇವ್, ‘ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಕೋವಿಡ್ ಸೋಂಕನ್ನ ಗುಣಪಡಿಸುತ್ತದೆ.

ಆಯುಷ್ ಸಚಿವಾಲಯವು ಕರೋನಿಲ್ ಮಾತ್ರೆಗಳನ್ನು ಸಹಾಯಕ ಔಷಧಿಯಾಗಿ ಸ್ವೀಕರಿಸಿದೆ. ಇಂದು ನಿಜಕ್ಕೂ ಐತಿಹಾಸಿಕ ದಿನ. ಈ ಔಷಧಿ WHO-GMP ಪ್ರಮಾಣಿತವಾಗಿದೆ ಎಂದು ರಾಮದೇವ್ ಹೇಳಿದರು.

ಕೊರೊನಿಕ್ ಟ್ಯಾಬ್ಲೆಟ್ ಕೇವಲ ರೋಗನಿರೋಧಕ ಎಂದು ಕರೆಯಲಾಗುತ್ತಿತ್ತು. ಆದ್ರೆ, ಮೂರು ದಿನಗಳಲ್ಲಿ 70 ಪ್ರತಿಶತದಷ್ಟು ರೋಗಿಗಳು ಈ ಔಷಧಿ ಗುಣಮುಖರಾಗಿದ್ದಾರೆ ಎಂದು ಪತಂಜಲಿ ಹೇಳಿದೆ.