ನವದೆಹಲಿ: ಕೋವಿಡ್-19 ರೋಗಿಗಳಿಗೆ ಜೀವರಕ್ಷಕ ವಾಗಿರುವ ರೆಮ್ ಡೆಸಿವಿರ್ ನ ಪ್ರತಿ ಇಂಜೆಕ್ಷನ್ ಬೆಲೆಯನ್ನು ಕೇಂದ್ರ ಸರ್ಕಾರ 2000 ರೂಪಾಯಿಯಷ್ಟು ಕಡಿತ ಮಾಡಿದೆ. ಕೇಂದ್ರ ರಾಸಾಯನಿಕ ರಸಗೊಬ್ಬರಗಳ ಸಚಿವಾಲಯ ಔಷಧ ವಿಭಾಗದ ಸದಸ್ಯ ಸಲಹೆಗಾರ ಡಾ. ವಿನೋದ್ ಕೊತ್ವಾಲ್ ಅವರು ಶನಿವಾರ ಈ ಡ್ರಗ್ ಇಂಜೆಕ್ಷನ್ ನ ಬೆಲೆಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಇನ್ನು ಯಾವುದರ ಬೆಲೆ ಎಷ್ಟು?!
ಆ್ಯಂಟಿ ವೈರಲ್ ಔಷಧಿಯನ್ನು 899 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.
ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ REMDAC 2,800 ರೂ.ನಿಂದ 899 ರೂ. ವರೆಗೆ
ಸಿಂಜೀನ್ ಇಂಟರ್ನ್ಯಾಷನಲ್ ಲಿಮಿಟೆಡ್(ಬಯೋಕಾನ್ ಬಯೋಲಾಜಿಕ್ಸ್ ಇಂಡಿಯಾ) ರೆಮೈನ್ 3,950 ರೂ.ನಿಂದ 2,450 ರೂ.
ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ರೆಡಿಎಕ್ಸ್ 5,400 ರೂ.ನಿಂದ 2,700 ರೂ.ಗೆ
ಸಿಪ್ಲಾ ಲಿಮಿಟೆಡ್ ಸಿಪ್ರೆಮಿ 4,000 ರೂ.ನಿಂದ 3,000 ರೂ.ವರೆಗೆ
ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಡೆಸೆಮ್ 4,800 ರೂ.ನಿಂದ 3,400 ರೂ.ವರೆಗೆ
ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ ಜುಬಿ-ಆರ್ 4,700 ರೂ.ನಿಂದ 3,400 ರೂ. ಗೆ
ಹೆಟೆರೊ ಹೆಲ್ತ್ ಕೇರ್ ಲಿಮಿಟೆಡ್ COVIFOR 5,400 ರೂ.ನಿಂದ 3,490 ರೂ.ಗೆ ಇಳಿಕೆಯಾಗಿದೆ.
ದೇಶದಲ್ಲಿ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಹೋರಾಡುತ್ತಿದ್ದಂತೆ ಇಂಜೆಕ್ಷನ್ ತಯಾರಕರು ಆಂಟಿ-ವೈರಲ್ ಡ್ರಗ್ ರೆಮ್ ಡೆಸಿವಿರ್ ಕೊರತೆಯ ಮಧ್ಯೆ ಕೂಡ ಮಾನವೀಯವಾಗಿ ಯೋಚಿಸಿ ಬೆಲೆಯನ್ನು ಕಡಿತಗೊಳಿಸಿದ್ದಾರೆ. ಉತ್ಪಾದನೆ ಮತ್ತು ಪೂರೈಕೆಯ ಹೆಚ್ಚಳ ಮತ್ತು ರೆಮ್ ಡೆಸಿವಿರ್ ಚುಚ್ಚುಮದ್ದಿನ ಬೆಲೆಯನ್ನು ಕಡಿಮೆ ಮಾಡಲು ಚರ್ಚಿಸಲು ಕೇಂದ್ರವು ಅಸ್ತಿತ್ವದಲ್ಲಿರುವ ಎಲ್ಲಾ ಔಷಧ ತಯಾರಕರೊಂದಿಗೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆಂಟಿ-ವೈರಲ್ ಔಷಧ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ. ಕೇಂದ್ರವು ಏಪ್ರಿಲ್ 11 ರಂದು ರೆಮ್ ಡೆಸಿವಿರ್ ಮತ್ತು ಇತರೆ ಸಕ್ರಿಯ ಔಷಧ ಪದಾರ್ಥಗಳ ರಫ್ತು ನಿಷೇಧಿಸಿತ್ತು. ಕೊರೋನಾ ಪರಿಸ್ಥಿತಿ ಸುಧಾರಿಸುವವರೆಗೆ ರೆಮ್ ಡೆಸಿವಿರ್ ಇಂಜೆಕ್ಷನ್ ಮತ್ತು ರೆಮ್ ಡೆಸಿವಿರ್ ಆಕ್ಟಿವ್ ಫಾರ್ಮಾಸ್ಯುಟಿಕಲ್ ಪದಾರ್ಥಗಳ ರಫ್ತು ನಿಷೇಧ ಜಾರಿಯಲ್ಲಿರಲಿದೆ ಎಂದು ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.