ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ಧಿ : SBI ನಲ್ಲಿ 5237 ಹುದ್ದೆಗಳಿಗೆ ನೇಮಕಾತಿ – ಅರ್ಜಿ ಆಹ್ವಾನ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ 18 ವಿವಿಧ ವಲಯಗಳಲ್ಲಿ ಕ್ಲರಿಕಲ್ ಕೇಡರ್ʼನಲ್ಲಿ ಜೂನಿಯರ್ ಅಸೋಸಿಯೇಟ್ಸ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ನೇಮಕಾತಿಗೆ ಅರ್ಜಿಗಳನ್ನ ಆಹ್ವಾನಿಸಿದೆ. ಒಟ್ಟು 5000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಎಸ್ ಬಿಐನ ಅಧಿಕೃತ ವೆಬ್ ಸೈಟ್ sbi.co.in ಗೆ ತೆರಳಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ: ಏಪ್ರಿಲ್ 27, 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 17, 2021

READ ALSO

‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಲರಿಕಲ್ ಕೇಡರ್ʼನಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಆಗಿ ನೇಮಕ ಮಾಡಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಖಾಲಿ ಹುದ್ದೆಗಳಿಗೆ ಒಂದು ರಾಜ್ಯದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಯೋಜನೆಯ ಅಡಿಯಲ್ಲಿ ಅಭ್ಯರ್ಥಿಗಳು ಒಮ್ಮೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಒಂದು ನಿರ್ದಿಷ್ಟ ರಾಜ್ಯದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆ ರಾಜ್ಯ/ಕೇಂದ್ರಾಡಳಿತ ಪ್ರದೇಶ/ವಿಶೇಷ ಪ್ರದೇಶದ ನಿರ್ದಿಷ್ಟ ಆಯ್ಕೆ ಮಾಡಿದ ಸ್ಥಳೀಯ ಭಾಷೆಯಲ್ಲಿ (ಪ್ರತಿ ರಾಜ್ಯದ ವಿರುದ್ಧ ನೀಡಲಾದ ಖಾಲಿ ಹುದ್ದೆಯ ಕೋಷ್ಟಕದಲ್ಲಿ ಉಲ್ಲೇಖಿಸಲಾಗಿದೆ) ಪರಿಣತಿ (ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು) ಇರಬೇಕು’ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.

ಪ್ರಾಥಮಿಕ ಪರೀಕ್ಷೆಯನ್ನ ಜೂನ್ʼನಲ್ಲಿ ನಡೆಸಲಾಗುತ್ತದೆ ಮತ್ತು ಮುಖ್ಯ ಪರೀಕ್ಷೆಯನ್ನ ಜುಲೈ 31, 2021ರಂದು ನಡೆಸಲಾಗುತ್ತದೆ ಎನ್ನುವ ತಾತ್ಕಾಲಿಕ ದಿನಾಂಕಗಳನ್ನ ಪ್ರಕಟಿಸಲಾಗಿದೆ.

ಎಸ್ಬಿಐ ನೇಮಕಾತಿ 2021 – ಅಭ್ಯರ್ಥಿಯ ವಯಸ್ಸಿನ ಮಿತಿ: ಅಭ್ಯರ್ಥಿಯು 01.04.2021 ರಂತೆ 20 ವರ್ಷಕ್ಕಿಂತ ಕಡಿಮೆ ಇರಬಾರದು ಮತ್ತು 28 ವರ್ಷಗಳಿಗಿಂತ ಮೇಲ್ಪಟ್ಟವರು ಆಗಿಬಾರದು. ಅಂದ್ರೆ, ಅಭ್ಯರ್ಥಿಯು 02.04.1993 ಕ್ಕಿಂತ ಮುಂಚಿತವಾಗಿ ಜನಿಸಿರಬೇಕು ಮತ್ತು 01.04.2001 ಕ್ಕಿಂತ ತಡವಾಗಿರಬಾರದು (ಎರಡೂ ದಿನಗಳನ್ನು ಒಳಗೊಂಡಂತೆ).

ವಯಸ್ಸಿನ ಮಿತಿಯಲ್ಲಿನ ಸಡಿಲಿಕೆಯು ಸರ್ಕಾರದ ನಿಯಮಗಳ ಪ್ರಕಾರ ಅನ್ವಯಿಸುತ್ತದೆ.

ಎಸ್ಬಿಐ ನೇಮಕಾತಿ 2021 – ಅಗತ್ಯ ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ತತ್ಸಮಾನ ಅರ್ಹತೆಯನ್ನ ಹೊಂದಿರಬೇಕು. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಐಡಿಡಿಯನ್ನು ಉತ್ತೀರ್ಣಗೊಳಿಸುವ ದಿನಾಂಕ 16.08.2021 ರಂದು ಅಥವಾ ಅದಕ್ಕೂ ಮೊದಲು ಇದೆ ಎಂದು ಖಚಿತಪಡಿಸಿಕೊಳ್ಳಬೇಕು.