ಸೇವಾ ಭಾರತಿ ಮತ್ತು ಗಿಫ್ಟ್ ಎಬಲ್ಡ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ವಿಶೇಷ ಚೇತನರು ಹಾಗೂ ಪೋಷಕರಿಗೆ ಉಚಿತ ಜೇನು ಕೃಷಿ ಕಾರ್ಯಗಾರ

ಬೆಳ್ತಂಗಡಿ: ಸೇವಭಾರತಿ ಕನ್ಯಾಡಿ ಇದರ ಆಶ್ರಯದಲ್ಲಿ ಗಿಫ್ಟ್ ಎಬಲ್ಡ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದೊಂದಿಗೆ ಜ.31 ರಂದು ಸೇವಾ ಭಾರತಿ ಪ್ರಧಾನ ಕಚೇರಿಯಾದ ಸೇವಾನಿಕೇತಾನದಲ್ಲಿ ಸೇವಾ ಧಾಮದ ಮೂಲಕ ಗುರುತಿಸಲ್ಪಟ್ಟ ಬೆನ್ನು ಮೂಳೆ ಮುರಿತಕ್ಕೊಳಗಾದ ವಿಶೇಷ ಚೇತನರು ಹಾಗೂ ಪೋಷಕರಿಗೆ ಉಚಿತ ಜೇನು ಕೃಷಿ ಕಾರ್ಯಗಾರ ನಡೆಯಿತು. ಜೇನು ಕೃಷಿ ತರಬೇತುದಾರರಾದ ಶಶಿಧರ್ ರಾವ್ ಮತ್ತಿಲ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಸುಸ್ಥಿರತೆ, ಹಾಗೂ ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು, ಜೇನು ಎಂದರೇನು ? ಅದರ ಪ್ರಭೇದಗಳು, ಪ್ರಾಮುಖ್ಯತೆ ಅದನ್ನು ಹೇಗೆ ಸಂರಕ್ಷಣೆ ಮತ್ತು ಮಾರಾಟ ಮಾಡಬೇಕು ಎಂದು ಸಂಪೂರ್ಣ ಮಾಹಿತಿ ನೀಡಿದರು. ಸೇವಾಭಾರತಿ ಮ್ಯಾನೇಜರ್ ಆದ ಮೋಹನ್ ಎಸ್ ಅವರು ಮಾತನಾಡಿ ವಿಶೇಷ ಚೇತನರು ಸ್ವ-ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬಿಯಾಗಬೇಕು ಹಾಗೂ ಅದರ ಪ್ರಯೋಜನವನ್ನು ತಿಳಿಸಿದರು. ತರಬೇತಿಯಲ್ಲಿ ೧೩ ಜನ ಬೆನ್ನು ಮೂಳೆ ಮೂರಿತಕ್ಕೊಳಗಾದ ವಿಶೇಷ ಚೇತನ ಫಲಾನುಭವಿಗಳು ಹಾಗೂ ಸೇವಾಭಾರತಿಯ ಸಿಬ್ಬಂದಿಗಳಾದ ಅಖಿಲೇಶ್ ಎ, ಚರಣ್ ಕುಮಾರ್ ಹಾಗೂ ಮನು ಆರ್ ಭಾಗವಹಿಸಿದ್ದರು. ಸ್ವ-ಉದ್ಯೋಗ ಕಾರ್ಯಕ್ರಮ ಸಂಯೋಜಕ ಅಖಿಲೇಶ್ ಎಸ್ ಅವರು ಕಾರ್ಯಕ್ರಮವನ್ನು ನಿರೂಪಸಿಕೊಟ್ಟರು.

READ ALSO