TRENDING
Next
Prev

ಸೇವಾಧಾಮ ಸಂಸ್ಥಾಪಕರ ಹುಟ್ಟುಹಬ್ಬ ಆಚರಣೆ

ಸೌತಡ್ಕ : ಸೇವಾಭಾರತಿ ಇದರ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಸಂಸ್ಥಾಪಕ ಶ್ರೀ ಕೆ. ವಿನಾಯಕ ರಾವ್ ರವರ 51ನೇ ವರ್ಷದ ಹುಟ್ಟುಹಬ್ಬ ಆಚರಣೆಯನ್ನು ಜು.29 ರಂದು ಹಣ್ಣಿನ ಗಿಡ ನೆಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

READ ALSO

ಕೆ. ವಿನಾಯಕ ರಾವ್ ರವರು ಮಾತನಾಡಿ, ಸ್ವತ: ಬೆನ್ನುಮೂಳೆ ಮುರಿತಗೊಂಡು ಜೀವನದ ನೋವುಗಳನ್ನು ಮೆಲುಕು ಹಾಕುತ್ತ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ರವರು ಸೇವಾಧಾಮಕ್ಕೆ ನೀಡುತ್ತಿರುವ ನಿರಂತರ ಸಹಕಾರವನ್ನು ಸ್ಮರಿಸಿದರು. ಸೇವಾಧಾಮದಲ್ಲಿ ಹುಟ್ಟುಹಬ್ಬ ಆಚರಿಸುವ ಪರಿಣಾಮ ದಿವ್ಯಾಂಗರ ಕಷ್ಟನಷ್ಟದ ಜೀವನವನ್ನು ಹತ್ತಿರದಿಂದ ಗಮನಿಸುವುದಲ್ಲದೆ, ಅವರೊಂದಿಗೆ ಬೆರೆತು ಹುಟ್ಟುಹಬ್ಬ ಆಚರಿಸುವುದು ಅರ್ಥಪೂರ್ಣ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.ನಂತರ ತಮ್ಮ ನಾಲ್ಕು ಚಕ್ರದ ಸ್ಕೂಟರ್ ಅನ್ನು ಸೇವಾಧಾಮದ ಫಲಾನುಭವಿಗಳ ಉಪಯೋಗಕ್ಕಾಗಿ ಸಮರ್ಪಿಸಿದರು.

ಈ ಸಂದರ್ಭ ಸೇವಾಧಾಮದ ಸಂಚಾಲಕರಾದ ಶ್ರೀ ಕೆ.ಪುರಂದರ ರಾವ್ ಹಾಗೂ ಮೆಂಟರ್ ಬಾಲಕೃಷ್ಣರವರು ಉಪಸ್ಥಿತರಿದ್ದರು. ಕೃಷ್ಣ ಭಟ್ ರವರು ಸಂಸ್ಥೆಯ ಕಾರ್ಯವೈಖರಿಯನ್ನು ಮೆಚ್ಚಿ, ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಅವರ ಪೋಷಕರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೇವಾಧಾಮದ ಉಸ್ತುವಾರಿ ಕೇಶವ. ಎಮ್, ಕನ್ಯಾಡಿ ಸ್ವಾಗತಿಸಿ, ನಿರೂಪಿಸಿದರು. ಸಂಚಾಲಕರಾದ ಕೆ. ಪುರಂದರ ರಾವ್ ವಂದಿಸಿದರು.