ಲಾಲ್ ಬಹಾದ್ದೂರ್ ಶಾಸ್ತ್ರಿ ಜೀವನ ಚರಿತ್ರೆಯ ಪ್ರಮುಖಾಂಶಗಳು

ಲಾಲ್ ಬಹಾದ್ದೂರ್ ಶಾಸ್ತ್ರಿ

ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಅಕ್ಟೋಬರ್ ೨ರಂದು ಜನಿಸಿದರು. ಇವರ ತಂದೆ ಶಾರದಾ ಪ್ರಸಾದ ಹಾಗೂ ತಾಯಿ ದುಲಾರಿದೇವಿ. ಇವರು ವಾರಣಾಸಿ ಹಾಗೂ ರಾಮನಗರದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ತಿಲಕರು ವಾರಣಾಸಿಗೆ ಭೇಟಿ ನೀಡಿ ಸ್ವಾತಂತ್ರ್ಯಕ್ಕೆ ಕರೆ ಕೊಟ್ಟು, ‘ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು, ನಾವು ಅದನ್ನು ಪಡೆದೇ ತೀರುತ್ತೇವೆ’ ಎಂದು ಮಾಡಿದ ಪ್ರತಿಜ್ಞೆಯನ್ನು ಕೇಳಿ ಇವರಲ್ಲಿ ದೇಶಪ್ರೇಮದ ಭಾವನೆ ಪುಟಿದು ಎದ್ದಿತು.

೧೯೨೧ರಲ್ಲಿ ವಾರಣಾಸಿಯಲ್ಲಿ ಗಾಂಧೀಜಿಯವರನ್ನು ಕಂಡು ಹಾಗೂ ಅವರ ಭಾಷಣಗಳನ್ನು ಕೇಳಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಆಚಾರ್ಯ ಕೃಪಲಾನಿ, ಆಚಾರ್ಯ ನರೇಂದ್ರ ದೇವ್, ಶ್ರೀ ಪ್ರಕಾಶ, ಡಾ. ಸಂಪೂರ್ಣಾನಂದ, ಡಾ. ಭಗವಾನ್ ದಾಸ ಇವರೆಲ್ಲರೂ ವಾರಣಾಸಿಯಲ್ಲಿ ಇವರ ಗುರುಗಳಾಗಿದ್ದರು. ಇವರೆಲ್ಲರ ಭಾಷಣ ಹಾಗೂ ಉಪದೇಶ ಇವರನ್ನು ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ಎಳೆತಂದಿತು. ತಮ್ಮ ೨೩ನೇ ವಯಸ್ಸಿನಲ್ಲಿಯೇ ಗಾಂಧೀಜಿಯವರೊಡಗೂಡಿ ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಮತ್ತು ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. ೧೯೪೨ರಲ್ಲಿ ಗಾಂಧೀಜಿಯವರೊಡಗೂಡಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮುಖ್ಯ ಪಾತ್ರವಹಿಸಿದ್ದರು.

READ ALSO

ಅಲಹಾಬಾದ ಜಿಲ್ಲೆ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಇವರು ೧೯೪೭ರಲ್ಲಿ ಉತ್ತರಪ್ರದೇಶ ಸಾರಿಗೆ ಸಚಿವರಾದರು. ೧೯೬೨ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಇವರು ಚಾಣಾಕ್ಷತನದಿಂದ ಸಮಸ್ಯೆಯನ್ನು ಪರಿಹರಿಸಿದರು. ಇವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ೧೮ ತಿಂಗಳಕಾಲ ಪ್ರಧಾನಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದರು. ಆಗ ತಾನೆ ಸ್ವಾತಂತ್ರ್ಯಗಳಿಸಿದ್ದರಿಂದ, ಹಾಗೂ ಚೀನಾದ ಆಕ್ರಮಣದಿಂದ ದೇಶದ ಆರ್ಥಿಕ ಸ್ಥಿತಿ ಆಷ್ಟಾಗಿ ಚೆನ್ನಾಗಿರಲಿಲ್ಲ. ಆಗ ಇವರು ಬ್ರಿಟನ್, ಕೆನಡಾ, ಈಜಿಪ್ಟ್, ರಶಿಯ ಮೊದಲಾದ ಅಲಿಪ್ತ ರಾಷ್ಟ್ರಗಳಿಗೆ ಭೇಟಿ ನೀಡಿ, ಭಾರತದ ಆರ್ಥಿಕ ಸ್ಥಿತಿಯನ್ನು ವಿವರಿಸಿ, ಸ್ನೇಹಹಸ್ತ ಚಾಚಿ ಪರಿಸ್ಥತಿಯನ್ನು ನಿಭಾಯಿಸಿದರು. ೧೯೬೫ರ ಭಾರತ ಪಾಕಿಸ್ತಾನ ಯುದ್ಧವನ್ನು ಅತೀ ಚಾಣಾಕ್ಷತನದಿಂದ ನಿಭಾಯಿಸಿದರು. ನಂತರ ರಷಿಯಾದ ಮಧ್ಯಸ್ತಿಕೆಯಲ್ಲಿ ಭಾರತ ಪಾಕಿಸ್ತಾನದ ನಡುವೆ ಒಪ್ಪಂದಕ್ಕಾಗಿ ರಷಿಯಾದ ತಾಷ್ಕೆಂಟ್‌ಗೆ ಹೋದ ಇವರು ೧೯೬೬ರ ಜನೆವರಿ ೧೧ ರಂದು ಸಹಿ ಹಾಕಿದ ರಾತ್ರಿ ಹೃದಯಾಘಾತದಿಂದ ಅಲ್ಲಿಯೇ ಮರಣಹೊಂದಿದರು.

ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜೀವನದ ಕೆಲವು ಮುಖ್ಯ ಘಟನೆಗಳ ಅವಲೋಕನ

ವರ್ಷ ೧೯೬೫ ರ ಭಾರತ – ಪಾಕ ಯುಧ್ಧ ಮತ್ತು ತತ್ಕಾಲೀನ ಪ್ರಧಾನ ಮಂತ್ರಿ ಶಾಸ್ತ್ರಿ ಇವರ ದೂರದೃಷ್ಟಿ !

ಅ. ಪ್ರಧಾನ ಮಂತ್ರಿ ಪದಕ್ಕೆ ನಿಯುಕ್ತ ಆದ ನಂತರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡು ಸೈನಿಕರನ್ನು ವಿಶ್ವಾಸದಲ್ಲಿ ತೆಗೆದುಕೊಳ್ಳುವದು : ಪ್ರಧಾನ ಮಂತ್ರಿ ಪದಕ್ಕೆ ನಿಯುಕ್ತ ಆದ ನಂತರ ಲಾಲ ಬಹಾದ್ದೂರ ಶಾಸ್ತ್ರಿ ಇವರು ನೇಹರು ಇವರ ಕಾರ್ಯಕಾಲದಲ್ಲಿ ಸೀಮೆರೇಖೆಯಿಂದ ಹಿಂದಿರುಗಿಸಲಾದ ಸೈನಿಕರನ್ನು ಪುನಃ ಸೀಮೆಗೆ ಕಳುಹಿಸಿದರು. ಮದ್ದು ಗುಂಡು ಉದ್ಯೋಗಾಲಯವನ್ನು ಪುನಃ ಪ್ರಾರಂಭ ಮಾಡಿದರು. ಭಾರತಿಯ ಸೈನಿಕರನ್ನು ಭೇಟಿಯಾಗಿ ಅವರಿಗೆ ಧೈರ್ಯ ಹೇಳಿದರು. ‘ಯುಧ್ಧಜನ್ಯ ಪರಿಸ್ಥಿತಿಯ ಬಗ್ಗೆ ಸ್ವಲ್ಪವಾದರೂ ಶಂಕೆ ಬಂದರೆ, ನನ್ನ ಆದೇಶದ ದಾರಿ ನೋಡದೆ ತ್ವರಿತವಾಗಿ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿರಿ’ ಎಂದು ಹೇಳಿದರು.

ಆ. ಶಾಸ್ತ್ರಿಯವರಂತಹ ಪ್ರಧಾನ ಮಂತ್ರಿಯ ಬೆಂಬಲದಿಂದ ಸೈನಿಕರು ಪಾಕ ಸೈನ್ಯಕ್ಕೆ ಲಾಹೋರದ ತನಕ ಹಿಮ್ಮೆಟ್ಟುವ ಸಾಹಸ ಮಾಡಿದರು : ಶಾಸ್ತ್ರಿಯವರು ಒಮ್ಮೆ ಪಾಕಕ್ಕೆ ಹೋದರು. ಆ ಕಾಲದ ಪಾಕದ ಪ್ರಧಾನ ಮಂತ್ರಿ ಆಯುಬಖಾನ ಶಾಸ್ತ್ರಿಯವರನ್ನು ನೋಡಿ ಅವರ ಸಚಿವರಿಗೆ ಅಂದರು, ‘ಇವರನ್ನು ನಾನು ನಿರಾಯಾಸವಾಗಿ ಸೋಲಿಸುತ್ತೇನೆ’, ಆಯುಬಖಾನರು ಮುಂದೆ ೧೯೬೫ರಲ್ಲಿ ಜಮ್ಮು-ಕಾಶ್ಮಿರದ ಮೇಲೆ ಆಕ್ರಮಣ ಮಾಡಿದರು. ಭಾರತಿಯ ಸೈನಿಕರ ರಕ್ತವು ಕುದಿಯುತ್ತಿತ್ತು. ಭಾರತಿಯ ಸೈನ್ಯವು ಪಾಕ ಸೈನ್ಯದ ಮೇಲೆ ಏರಿ ಹೋಯಿತು ಮತ್ತು ಅವರಿಗೆ ಲಾಹೋರದ ತನಕ ಹಿಮ್ಮೆಟ್ಟುವ ಸಾಹಸ ಮಾಡಿತು. ಎರಡು ತಿಂಗಳವರೆಗೆ ಯುಧ್ಧ ನಡೆಯಿತು. ಪಾಕಿಸ್ತಾನಿ ಸೈನ್ಯ ನಿಷ್ಕ್ರಿಯವಾಯಿತು. ಇನ್ನೂ ೪-೫ ದಿವಸ ಯುಧ್ಧ ನಡೆಯುತ್ತಿದ್ದರೆ ಬಹುಶಃ ಸೈನ್ಯ ಮುಂದೆ ಎಂದಿಗೂ ಆಕ್ರಮಣ ಮಾಡಲು ಪ್ರಯತ್ನ ಮಾಡುತ್ತಿರಲಿಲ್ಲ.

ಪರರಾಷ್ಟ್ರ ಧೋರಣೆ ತಪ್ಪದೆ ಸಂಭಾಳಿಸುವ ಶಾಸ್ತ್ರಿಯವರು !

ಪಾಕ ವಿರೋಧವಾಗಿ ನಡೆಯುತ್ತಿದ್ದ ಯುಧ್ಧ ನಿಲ್ಲಿಸಲು ಒತ್ತಡ ತರುವ ಅಮೇರಿಕೆಯನ್ನು ಕಠೋರವಾದ ಶಬ್ದದಲ್ಲಿ ಖಂಡಿಸುವುದು :೧೯೬೫ರ ಯುಧ್ಧಕಾಲದಲ್ಲಿ ಅಮೇರಿಕೆಯು ಲಾಲ ಬಹಾದ್ದೂರ ಶಾಸ್ತ್ರಿಯವರಿಗೆ ತೊಂದರೆ ಕೊಡಲು ಪ್ರಾರಂಭ ಮಾಡಿತು, ‘ನಾವು ಭಾರತಕ್ಕೆ ಗೋಧಿ ಪೂರೈಕೆಯನ್ನು ನಿಲ್ಲಿಸುತ್ತೇವೆ’ ಎಂದು. ಆಗ ಶಾಸ್ತ್ರಿಯವರು ‘ಒಳ್ಳೆಯದಾಯಿತು, ನಿಲ್ಲಿಸಿ. ಆ ಗೋಧಿಯನ್ನು ಪ್ರಾಣಿಗಳು ತಿನ್ನುವದಿಲ್ಲ, ಅಂತಹ ಗೋಧಿಗೆ ನಾವು ಹೆಚ್ಚು ಹಣ ಕೊಟ್ಟು ಏಕೆ ಕೊಂಡುಕೊಳ್ಳಬೇಕು ?’ ಅನಂತರ ಅಮೇರಿಕೆಯು ಪುನಃ ಗದ್ದಲ ಮಾಡಿ, ‘ನಾವು ಗೋಧಿ ಕಳುಹಿಸದಿದ್ದರೆ ಭಾರತಿಯ ಜನತೆ ಹಸಿವಿನಿಂದ ಸಾಯುತ್ತದೆ’ ಎಂದು ಹೇಳಿತು. ಆಗಲೂ ಶಾಸ್ತ್ರಿಯವರು ಹೇಳಿದರು ,’ ನಾವು ಹಸಿವಿನಿಂದ ಸಾಯುತ್ತೇವೆ ಅಥವಾ ಊಟ ಮಾಡಿ ಸಾಯುತ್ತೇವೆ, ಆ ವಿಷಯ ನಿಮಗೆ ಏಕೆ ಬೇಕು ?’ ಎಂದು ತಿರುಗೇಟು ನೀಡಿದರು.

ಯುಧ್ಧ ಕಾಲದಲ್ಲಿ ಜನತೆ ಕಡೆಯಿಂದ ತ್ಯಾಗ ಮಾಡಿಸಿಕೊಳ್ಳುವ ಹಾಗೂ ಅವರಿಗೆ ವಿಶ್ವಾಸದಲ್ಲಿ ತೆಗೆದುಕೊಳ್ಳುವ ಶಾಸ್ತ್ರಿಯವರು!

ಅನ್ನ ಧಾನ್ಯದ ಕೊರತೆ ತುಂಬಿ ತಗೆಯಲು ದೇಶದ ಪ್ರಜೆಗಳಿಗೆ ಉಪವಾಸ ಮಾಡಳು ವಿನಂತಿಸುವುದು : ಶಾಸ್ತ್ರಿಯವರು ಏನು ತಿಳಿದುಕೊಂಡರು ಅಂದರೆ ಅಮೇರಿಕೆಯ ಈ ಧೋರಣೆ ಜನತೆಗೆ ತಿಳಿದರೆ ಭಾರತದ ತುಂಬ ಅಂಜಿಕೆ ಮತ್ತು ಕ್ಷೋಭ ಪಸರಿಸಬಹುದು. ಆದುದರಿಂದ ಶಾಸ್ತ್ರಿಯವರು ದೆಹಲಿಯಲ್ಲಿ ಒಂದು ಸಭೆ ಕರೆದು ಅಲ್ಲಿಗೆ ಪತ್ರಕರ್ತರನ್ನು ನಿಮಂತ್ರಿಸಿದರು. ಈ ಸಭೆಯಲ್ಲಿ ಶಾಸ್ತ್ರಿಯವರು ಅಮೇರಿಕೆಯ ಗೋಧಿ ಕೆಳದರ್ಜೆಯದು ಇರುವುದರಿಂದ ನಾವು ಗೋಧಿಯ ಆಮದು ನಿಲ್ಲಿಸಿದ್ದೇವೆ ಆದುದರಿಂದ ಭಾರತಕ್ಕೆ ೬ ತಿಂಗಳಾದರು ಗೋಧಿಯ ಕೊರತೆ ಆಗಬಹುದು. ಅದಕ್ಕೆ ನಾವೆಲ್ಲರೂ ಈ ಗೋಧಿಯ ಕೊರತೆ ನೀಗಿಸಲು ವಾರದಲ್ಲಿ ಒಂದು ದಿನ ಉಪವಾಸ ಮಾಡಿ ರಾಷ್ಟ್ರಪ್ರೇಮ ನಿಭಾಯಿಸೋಣ, ಎಂದು ಆಹ್ವಾನವನ್ನು ಮಾಡಿದರು. ಶಾಸ್ತ್ರಿಯವರ ಈ ಭಾಷಣದ ನಂತರ ಭಾರತದ ಕೋಟ್ಯಾವಧಿ ಜನರು ಸೋಮವಾರದ ಉಪವಾಸ ಹಿಡಿದರು. ಶಾಸ್ತ್ರಿಯವರ ಭಾಷಣದ ಕೆಲವು ಮಹತ್ವದ ಸೂತ್ರಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡಲಾಯಿತು. ಶಾಸ್ತ್ರಿಯವರ ಈ ಸಂದೇಶ ಹಳ್ಳಿಗಳ ವರೆಗೆ ಮುಟ್ಟಿತು ಮತ್ತು ಎಲ್ಲರೂ ಉಪವಾಸ ಪ್ರಾರಂಭ ಮಾಡಿದರು .

ಜನರಿಗೆ ದುಂದು ವೆಚ್ಚ ಕಡಿಮೆ ಮಾಡುವ ಆಹ್ವಾನ ಮಾಡಿ ಸ್ವತಃ ಅದರ ಪ್ರಾರಂಭ ಮಾಡುವದು : ಯುಧ್ಧಕಾಲದಲ್ಲಿ ಶಾಸ್ತ್ರಿಯವರು ಭಾರತಿಯರಿಗೆ ಮತ್ತೊಂದು ಆಹ್ವಾನ ಮಾಡಿದರು, ನೀವು ನಿಮ್ಮ ನಿರರ್ಥಕ ವ್ಯಯವನ್ನು ಅಲ್ಪ ಮಾಡಿ ಹಾಗೂ ಆ ಪ್ರಕಾರ ಅವರು ಸ್ವಂತ ನಿರರ್ಥಕ ವ್ಯಯ ಅಲ್ಪ ಮಾಡಿದರು. ಪ್ರಧಾನಮಂತ್ರಿಯವರ ಮನೆಯಲ್ಲಿ ಕೆಲಸದಾಕೆ ಇದ್ದಳು. ಅವಳಿಗೆ ಕೆಲಸದ ಮೇಲೆ ಬರಬೇಡ ಎಂದು ಹೇಳಿದರು. ಅವರ ಮಗನಿಗೆ ಆಂಗ್ಲ ಭಾಷೆಯ ಜ್ಞಾನ ಕಡಿಮೆ ಇದ್ದುದರಿಂದ ತರಬೇತಿ ವರ್ಗಕ್ಕೆ ಹಚ್ಚಿದ್ದರು, ಆ ಶಿಕ್ಷಕರಿಗೆ ‘ಇನ್ನು ಮುಂದೆ ಬರಬೇಡಿ’, ಎಂದು ಹೇಳಿದರು. ಆಗ ಆ ಶಿಕ್ಷಕರು, ‘ನಿಮ್ಮ ಮಗ ಆಂಗ್ಲಭಾಷೆಯಲ್ಲಿ ಅನುತ್ತಿರ್ಣ ಆಗಬಹುದು’ ಎಂದು ಹೇಳಿದಕ್ಕೆ ಶಾಸ್ತ್ರಿಯವರು ‘ಭಾರತದ ಸಹಸ್ರಾರು ಹುಡುಗರು ಆಂಗ್ಲದಲ್ಲಿ ಅನುತ್ತಿರ್ಣ ಆಗುತ್ತಾರೆ, ಹಾಗೆಯೆ ನನ್ನ ಮಗನು ಆಗಬಹುದು’ ಎಂದಿದ್ದರು.

ತಾಶ್ಕಂದ (ತಾಷ್ಕೆಂಟ್) ಕರಾರ ಮತ್ತು ಶಾಸ್ತ್ರಿಯವರ ಭೂಮಿಕೆ !

ಅಮೇರಿಕೆಯು ರಷಿಯಾದ ಮಾಧ್ಯಮದಿಂದ ಭಾರತದ ಮೇಲೆಒತ್ತಡ ತಂದು ತಾಶ್ಕಂದ ಕರಾರ ಮಾಡುವ ವ್ಯೂಹ ರಚಿಸುವದು : ಶಾಸ್ತ್ರಿಯವರು ತೆಗೆದುಕೊಂಡ ದೃಢ ನಿರ್ಧಾರದಿಂದ ಅಮೇರಿಕೆಯು ಪೇಚಿಗೆ ಈಡಾಯಿತು. ಆದುದರಿಂದ ರಷಿಯಾದ ಮೇಲೆ ಒತ್ತಡ ತಂದಿತು ಹಾಗೂ “ಭಾರತಕ್ಕೆ ಯುಧ್ಧ ವಿರಾಮ ಮಾಡಲು ಹೇಳಿ” ಎಂದು ಹೇಳಿತು.

ಶಾಸ್ತ್ರಿಗಳಿಗೆ ರಷಿಯಾ ಯುಧ್ಧವಿರಾಮ ಮಾಡಲು ಹೇಳಿದಾಗ ಅವರಿಗೆ ಆಶ್ಚರ್ಯವಾಯಿತು. ರಷಿಯಾ ತಮ್ಮ ಮಿತ್ರರಾಷ್ಟ್ರ ಇರುವದರಿಂದ ಅವರು ತಮ್ಮ ಮನಸ್ಸಿನ ವಿರುಧ್ಧವೇ ಯುಧ್ಧ ನಿಲ್ಲಿಸುವ ಆದೇಶ ನಿಡಿದರು; “ಆದರೆ ಈ ವಿಷಯ ಭಾರತ ಮತ್ತು ಪಾಕ ತಮ್ಮಲ್ಲಿಯೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುವರು”, ಹೀಗೆ ರಷಿಯಾಕ್ಕೆ ಹೇಳಿದರು ಮತ್ತು ತಾಶ್ಕಂದದಲ್ಲಿ ಠರಾವು ಮಾಡಲು ನಿಶ್ಚಯಿಸಿದರು .

ಪ್ರಥಮವೇ ಪರದೇಶಕ್ಕೆ ಹೋಗುತ್ತಿರುವದರಿಂದ ಹೊಸ ವಸ್ತ್ರಗಳನ್ನು ಹೊಲಿಸಿಕೊಳ್ಳದೆ ರಾಷ್ಟ್ರದ ಬಗ್ಗೆ ಗೌರವ ತೊರಿಸುವದು : ೧೦.೧.೧೯೬೬. ಈ ದಿನ ತಾಶ್ಕಂದ ಠರಾವು ಇತ್ತು, ಆಗ ಅವರ ಪತ್ನಿ ಅವರಿಗೆ ‘ನೀವು ಈಗ ಮೊದಲನೆ ಸಲ ಪರದೇಶಕ್ಕೆ ಹೋಗುತ್ತಿರುವಿರಿ, ಅದಕ್ಕೆ ಹೊಸ ವಸ್ತ್ರ ಹೊಲಿಸಿಕೊಳ್ಳಿ’ ಎಂದು ಹೇಳಿದರು. ಆಗ ಶಾಸ್ತ್ರಿಯವರ ಕಡೆ ಕೇವಲ ಎರಡು ಜೊತೆ ವಸ್ತ್ರಗಳು ಇದ್ದವು, ಮತ್ತು ಇದ್ದ ಪಂಚೆ ಕೂಡ ಕೆಲವು ಕಡೆ ಹರಿದಿತ್ತು. ಆಗ ಶಾಸ್ತ್ರಿಯವರು ‘ನಾನು ಶ್ರೀಮಂತ ದೇಶದ ಪ್ರಧಾನ ಮಂತ್ರಿ ಅಲ್ಲ’ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಭೂಭಾಗ ಕೊಡುವಾಗ ಚೀನದ ಕಡೆ ಇರುವ ಭಾರತದ ಭಾಗ ತಮಗೆ ಕೊಡಬೇಕು ಎಂಬ ಮನಸ್ಸಿನಿಂದ ತಾಶ್ಕಂದಕ್ಕೆ ಹೋದ ಶಾಸ್ತ್ರಿಯವರಿಗೆ ಕಾಗದ ಪತ್ರಗಳು ಮೊದಲೆ ಸಿಧ್ಧವಾಗಿದ್ದನ್ನು ನೋಡಿ ಅದರ ಮೇಲೆ ಹಸ್ತಾಕ್ಷರವನ್ನು ಮಾಡಲು ನಿರಾಕರಿಸುವುದು : ಲಾಲ ಬಹಾದ್ದೂರ ಶಾಸ್ತ್ರಿಯವರೊಂದಿಗೆ ೬ ಮಂತ್ರಿ ತಾಶ್ಕಂದಕ್ಕೆ ಹೋದರು . ಶಾಸ್ತ್ರಿಯವರ ಮನದಲ್ಲಿ ಪಾಕಿಸ್ತಾನದ ಗೆದ್ದ ಭಾಗ ಅವರಿಗೆ ತಿರುಗಿ ಕೊಡುವ ಮೊದಲು ಚೀನವು ಗೆದ್ದ ಭಾರತದ ಭಾಗವನ್ನು ಮರಳಿ ಕೊಡಲು ಒತ್ತಡ ತರುವುದು ಎಂದು ಇತ್ತು. ಆದರೆ ಶಾಸ್ತ್ರಿಯವರಿಗೆ ಯಾವ ವಿಷಯದ ಬಗ್ಗೆ ಚರ್ಚೆ ಮಾಡುವುದು, ಅದರ ಬಗ್ಗೆ ಎಲ್ಲ ಕಾಗದ ಪತ್ರಗಳು ಸಿಧ್ಧ ಇದ್ದವು ಎನ್ನುವದು ದೃಷ್ಟಿಗೆ ಬಿದ್ದಿತು ಹಾಗೂ ಅವರು ಕರಡು ಸಿಧ್ಧ ಮಾಡಿಯೆ ಇಟ್ಟಿದ್ದರು. ಈ ವಿಷಯ ಶಾಸ್ತ್ರಿಯವರಿಗೆ ಇಷ್ಟವಾಗಲಿಲ್ಲ. ಅವರು ಹಸ್ತಾಕ್ಷರ ಮಾಡಲು ನಿರಾಕರಿಸಿದರು. ಮುಂದೆ ಚರ್ಚೆ ನಡೆದು ಭಾರತ – ಪಾಕಿಸ್ತಾನದ ನಡುವೆ ಒಪ್ಪಂದಕ್ಕೆ ಶಾಸ್ತ್ರಿಯವರು ತಮ್ಮ ಅಂಕಿತ ನೀಡಿದರು.

(ಸಂಗ್ರಹ: ಸನಾತನ ಧರ್ಮ ಗ್ರಂಥ)