ಹೈದರಾಬಾದ್ : ರಷ್ಯಾದ ಕೊರೊನಾ ವೈರಸ್ ಲಸಿಕೆ ಸ್ಪುಟ್ನಿಕ್ ವಿ ಯ ಆಮದು ಡೋಸ್ ಗಳಿಗೆ ರೂ.948 ಮತ್ತು ಶೇಕಡಾ 5 ಜಿಎಸ್ಟಿ (ರೂ.995.40) ವೆಚ್ಚವಾಗಲಿದೆ ಎಂದು ಡಾ.ರೆಡ್ಡಿಸ್ ಲ್ಯಾಬೊರೋಟರಿಯಿಂದ ಶುಕ್ರವಾರ ಘೋಷಿಸಿದೆ.
ಈ ಕುರಿತಂತೆ ಮಾಹಿತಿ ಬಿಡುಡಗೆಡ ಮಾಡಿರುವಂತ ರೆಡ್ಡೀಸ್ ಲ್ಯಾಬ್, ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಮಾರುಕಟ್ಟೆಗೆ ಶುಕ್ರವಾರ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಡೋಸ್ ಲಸಿಕೆ ದರ ರೂ.948 ನಿಗದಿ ಪಡಿಸಲಾಗಿದೆ. ಇದಕ್ಕೆ ಶೇ.5 ರಷ್ಟು ಜಿಎಸ್ಟಿ ದರ ಸೇರಿ ಲಸಿಕೆಯ ಪ್ರತಿ ಡೋಸ್ ರೂ.995.40ಕ್ಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ ಕೊರೋನಾ ಸೋಂಕಿನ ವಿರುದ್ಧ ಹೋರಾಡುವಂತ ಲಸಿಕೆಯಾಗಿದೆ. ಇಂತಹ ಲಸಿಕೆಯ ಮೊದಲ ಬಿಡುಗಡೆ ಶುಕ್ರವಾರ ನಡೆಯಲಿದೆ. ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಡೋಸ್ ಗಳ ಸರಕುಗಳನ್ನು ನಿರೀಕ್ಷಿಸಲಾಗಿದೆ ಎಂದು ಕಂಪನಿ ಹೇಳಿದೆ.