ರಾಜ್ಯಾದ್ಯಂತ 30 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ

ಬೆಂಗಳೂರು: ಇಂದು ರಾಜ್ಯದ್ಯಾಂತ ಬೆಳ್ಳಂ ಬೆಳಗ್ಗೆ ಎಸಿಬಿ ತಂಡ ರಾಜ್ಯದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ್ದು , 7 ಸರ್ಕಾರಿ ಅಧಿಕಾರಿಗಳಿಗೆ ಗಾಳ ಹಾಕಿದೆ.

ಬೆಂಗಳೂರು ನಗರ , ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ , ಚಿತ್ರದುರ್ಗ ಮತ್ತು ಕಲ್ಬುರ್ಗಿಯಲ್ಲಿ ಬೆಳಗ್ಗೆ 6 ಗಂಟೆಗೆ ಏಕ ಕಾಲದಲ್ಲಿ ಜಿಲ್ಲಾ ಎಸ್ಪಿಗಳ ನೇತೃತ್ವದಲ್ಲಿ ಸುಮಾರು 30 ಕಡೆ ಎಸಿಬಿ ದಾಳಿ ನಡೆಸಿದೆ.

READ ALSO

ಬಲೆಗೆ ಬಿದ್ದ ಅಧಿಕಾರಿಗಳನ್ನು ಧಾರವಾಡದ ಸಿಂಗಾವಿ ಸಣ್ಣ ನೀರಾವರಿ ಕಾರ್ಯಕಾರಿ ಅಭಿಯಂತರ (ಇಇ) ದೇವರಾಜ್ ಕಲೀಶ್, ಬೆಂಗಳೂರು ಸಹಕಾರಿ ಇಲಾಖೆಯ ವಲಯ ಜಂಟಿ ರಿಜಿಸ್ಟ್ರಾರ್ ಪಾಂಡುರಂಗ ಗಾರ್ಗರ್, ಮಂಗಳೂರು ಮಹಾನಗರ ಪಾಲಿಕೆ ನಗರ ಯೋಜನೆಯ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್, ಕೋಲಾರದ ಆರೋಗ್ಯ ಇಲಾಖೆ ಡಿಎಚ್‍ಒ ಡಾ.ಎಸ್.ಎನ್.ವಿಜಯಕುಮಾರ್, ಕೊಪ್ಪಳದ ಕೆಐಎಂಎಸ್ ಆಸ್ಪತ್ರೆಯ ಪ್ರಾಮೋಲಜಿ ವಿಭಾಗದ ಎಚ್‍ಒಡಿ ಡಾ.ಶ್ರೀನಿವಾಸ್, ಮಾಗಡಿ ಉಪ ವಲಯದ ಜಂಟಿ ಜೂನಿಯರ್ ಇಂಜಿನಿಯರ್ ಚನ್ನಬಸವಪ್ಪ ಮತ್ತು ಧಾರವಾಡದ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.

ಈ ವರ್ಷದ ಪ್ರಾರಂಭದಲ್ಲೇ ಎಸಿಬಿ ದೊಡ್ಡ ದಾಳಿ ನಡೆಸಿದ್ದು , ಇವರ ಬಗ್ಗೆ ಬಂದಿದ್ದ ದೂರುಗಳನ್ನು ಆದರಿಸಿ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.