
ಬೆಂಗಳೂರು: 2020-21ನೇ ಸಾಲಿನ ಕರ್ನಾಟಕ ವಿಧಾನಮಂಡಲದ, ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ, ಅಧ್ಯಕ್ಷರು, ಸದಸ್ಯರುಗಳನ್ನು ನಾಮನಿರ್ದೇಶನ ಮಾಡಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.

ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರನ್ನಾಗಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರನ್ನು ನೇಮಕ ಮಾಡಲಾಗಿದೆ. ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರು, ಸೋಮನಗೌಡ ಬಿ. ಪಾಟೀಲ್, ಹರೀಶ್ ಪೂಂಜ, ಸಂಜೀವ ಮಠಂದೂರು, ಉದಯ ಬಿ. ಗರುಡಾಚಾರ್, ವೆಂಕಟರೆಡ್ಡಿ ಮುದ್ನಾಳ್, ಎಂ.ಬಿ. ಪಾಟೀಲ್, ಎಸ್.ಎನ್. ನಾರಾಯಣಸ್ವಾಮಿ, ಪ್ರಿಯಾಂಕ್ ಖರ್ಗೆ, ಎಸ್.ಎನ್. ಸುಬ್ಬಾರೆಡ್ಡಿ, ಎಸ್. ರಾಮಪ್ಪ, ಡಾ.ಕೆ. ಶ್ರೀನಿವಾಸಮೂರ್ತಿ ಮತ್ತು ರವೀಂದ್ರ ಶ್ರೀಕಂಠಯ್ಯ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಸದನದಲ್ಲಿ ಸರ್ಕಾರ ನೀಡುವ ಭರವಸೆಗಳು ಅನುಷ್ಠಾನಗೊಂಡಿವೆಯೇ ಎಂಬುದನ್ನು ಪರಿಶೀಲಿಸುವುದು ಸಮಿತಿಯ ಹೊಣೆಗಾರಿಕೆ. ಪ್ರತಿ ವಾರ ಸಮಿತಿ ಸದಸ್ಯರು ಸಭೆ ಸೇರಿ, ಚರ್ಚಿಸಿ ಸರ್ಕಾರ ನೀಡಿದ ಭರವಸೆಗಳು ಈಡೇರಿವೆಯೇ, ಯಾವ ಹಂತದಲ್ಲಿವೆ ಎಂಬ ಕುರಿತು ಚರ್ಚೆ ನಡೆಸಲಿದೆ.

ಇನ್ನುಳಿದಂತೆ ಆಯ್ಕೆಯಾಗಿರುವ ಸಮಿತಿಯ ಅಧ್ಯಕ್ಷರ ವಿವರ
- ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರನ್ನಾಗಿ ಎಸ್ ಅಂಗಾರ
- ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷರನ್ನಾಗಿ ರಾಮಲಿಂಗಾರೆಡ್ಡಿ
- ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಅರವಿಂದ ಲಿಂಬಾವಳಿ
- ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಅಧ್ಯಕ್ಷರನ್ನಾಗಿ ದಿನಕರ್ ಕೇಶವ ಶೆಟ್ಟಿ
- ಅಧೀನ ಶಾಸನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಎಸ್ ಕುಮಾರ್ ಬಂಗಾರಪ್ಪ
- ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಗೆ ಅಧ್ಯಕ್ಷರಾಗಿ ಸಾರಾ ಮಹೇಶ್
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆಯನ್ನಾಗಿ ಕೆ.ಪೂರ್ಣಿಮಾ
- ಗ್ರಂಥಾಲಯ ಸಮಿತಿಗೆ ವಿಧಾನ ಪರಿಷತ್ತಿನ ಸಭಾಪತಿಯವರನ್ನು ಅಧ್ಯಕ್ಷರನ್ನಾಗಿ,
- ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಗೆ ಜಿ.ಸೋಮಶೇಖರ ರೆಡ್ಡಿ
- ವಿಧಾನಸಭೆಯ ಸಮಿತಿಗಳಾದಂತ ಅಂದಾಜುಗಳ ಸಮಿತಿಗೆ ಅಭಯ್ ಪಾಟೀಲ್,
- ಹಕ್ಕು ಬಾಧ್ಯತೆಗಳ ಸಮಿತಿಗೆ ಬಸನಗೌಡ ಆರ್ ಪಾಟೀಲ್ ಯತ್ನಾಳ್,
- ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಮತ್ತು ವಸತಿ ಸೌಕರ್ಯ ಸಮಿತಿಗೆ ಆನಂದ್ ಆಲಿಯಾಸ್ ವಿಶ್ವನಾಥ್ ಚಂದ್ರಶೇಖರ ಮಾಮನಿ ಅವರನ್ನು ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.