ವೈರಲ್ ವೈರಸ್ ಗೆ ರಾಜ್ಯ ರಾಜಧಾನಿಯೇ ಟಾರ್ಗೆಟ್ ! ದಿಡೀರ್ ಏರಿಕೆಯಾಯಿತು ಸೋಂಕಿತರ ಸಂಖ್ಯೆ! ಬೆಂಗಳೂರಿಗರಿಗೆ ಕೊರೋನ ತಂದ ಆಪತ್ತು!

ಬೆಂಗಳೂರು: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಯಂತ್ರಣವಿಲ್ಲದೆ ಗಣನೀಯವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಬಳ್ಳಾರಿ, ಕಲಬುರ್ಗಿ, ವಿಜಯಪುರ, ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕಿತರ ಪತ್ತೆಯಾಗುತ್ತಿದ್ದು ನಿರ್ಲಕ್ಷ್ಯ ವಹಿಸಿದರೆ ಅಪಾಯ ಎದುರಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಕರ್ನಾಟಕದಲ್ಲಿಂದು 453 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ.

READ ALSO

453 ಸೋಂಕಿತರ ಪೈಕಿ 74 ಮಂದಿ ವಿದೇಶ ಹಾಗೂ ಹೊರರಾಜ್ಯಗಳಿಂದ ಪ್ರಯಾಣ ಬೆಳೆಸಿದವರಾಗಿರುತ್ತಾರೆ.

ಕೊರೋನಾ ಮಹಾಮಾರಿ ಆರ್ಭಟಕ್ಕೆ 05 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ137ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಇಂದು ಒಂದೇ ದಿನ ಮೂವರನ್ನು ಕೊರೋನಾ ಹೆಮ್ಮಾರಿ ಬಲಿ ಪಡೆದಿದ್ದು ಜಿಲ್ಲೆಯ 62 ವರ್ಷದ ಪುರುಷ, 55 ವರ್ಷದ ಪುರುಷ ಮತ್ತು 53 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆಯಲ್ಲಿ 70 ಮತ್ತು 46 ವರ್ಷದ ಪುರುಷರಿಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 196
ಬಳ್ಳಾರಿ 40
ಕಲಬುರ್ಗಿ 39
ವಿಜಯಪುರ 39
ಮೈಸೂರು 18
ಗದಗ 18
ಧಾರವಾಡ 15
ಬಾಗಲಕೋಟೆ 14
ಬೀದರ್ 13
ದಾವಣಗೆರೆ 08
ಉತ್ತರಕನ್ನಡ 08
ಕೋಲಾರ 08
ದಕ್ಷಿಣಕನ್ನಡ 07
ಮಂಡ್ಯ 05
ಹಾಸನ 05
ತುಮಕೂರು 04
ಯಾದಗಿರಿ 03
ಚಿಕ್ಕಬಳ್ಳಾಪುರ 03
ಹಾವೇರಿ 03
ರಾಯಚೂರು 02
ಶಿವಮೊಗ್ಗ 02
ರಾಮನಗರ 02
ಚಿಕ್ಕಮಗಳೂರು 01