ಮಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಿನಲ್ಲೇ ಬರುತ್ತದೆ ಸಂದೇಶ ಲಿಂಕ್ ಓಪನ್ ಮಾಡಿದರೆ ಮೋಸ ಹೋದಂತೆ ಇಡೀ ಮೊಬೈಲ್‌ನಲ್ಲಿನ ಡಾಟಾ ಕೂಡಾ ಹ್ಯಾಕರ್ ಗಳ ಪಾಲಾಗುತ್ತದೆ ಎಚ್ಚರಿಕೆ ಇರಲಿ.
ತಂತ್ರಜ್ಞಾನ ಬೆಳೆದಂತೆ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು ಸೈಬರ್ ವಂಚಕರು ನಿಮ್ಮ ಮೊಬೈಲ್ ಗೆ ಗೊತ್ತಿಲ್ಲದಂತೆ ಕಳುಹಿಸುವ ವಂಚನೆಯ ಸಂದೇಶ ಹಾಗೂ ಒಂದು APP ಮೂಲಕ ನಿಮ್ಮ ಖಾತೆಯನ್ನು ಹಾಗೂ ಮೊಬೈಲ್ ನಲ್ಲಿ ಇರುವ ಡಾಟಗಳನ್ನು ಹ್ಯಾಕ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆನ್ ಲೈನ್ ವಂಚನೆಯಲ್ಲಿ ಇದು ವೇಗವಾಗಿ ನಡೆಯುತ್ತಿದೆ. ಇದರ ಬಗ್ಗೆ ಜನರು ಜಾಗೃತಗೊಳ್ಳಬೇಕು, ಯಾವುದೇ ಬ್ಯಾಂಕ್ ನ ಹೆಸರಿನಲ್ಲಿ ಯಾವುದೇ ರೀತಿಯ ಸಂದೇಶ ಬಂದರೂ ಅದಕ್ಕೆ ಪ್ರತಿಕ್ರಿಯಿಸದೇ, ನೀವೆ ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ಹೋಗಿ ವಿಚಾರಣೆ ಮಾಡಬೇಕು. ವಾಟ್ಸಾಪ್ ಮೂಲಕ ನಿಮಗೆ ಸಂದೇಶ ಹಾಗೂ ಆಫ್ ರವಾನೆ ಆಗುತ್ತದೆ ಇದನ್ನು ಒಪನ್ ಮಾಡಿದರೆ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಸ್ನೇಹಿತರಿಗೆ ಹಾಗೂ ಇತರೇ ವಾಟ್ಸಾಪ್ ಗ್ರೂಫ್ ಗೆ ಈ ಸಂದೇಶ ರವಾನೆ ಆಗುತ್ತದೆ. ನೀವು ಸ್ಪಂದಿಸದಿದ್ದರೆ ನಿಮ್ಮ ಮೊಬೈಲ್‌ಗೆ ಸ್ಟೀನ್ ಮಾದರಿ ಅವರೇ ಮಾಡಿ, ಒಟಿಪಿ ಕೂಡ ಪಡೆಯುತ್ತಾರೆ. ಆಗ ನಿಮ್ಮ ಖಾತೆಯಲ್ಲಿದ್ದ ಅಷ್ಟೋ ಹಣ ವರ್ಗಾವಣೆಯಾಗುತ್ತದೆ, ಖಾತೆಯಲ್ಲಿದ್ದ ಹಣ ರವಾನೆಯಾಗುತ್ತದೆ.
ನಕಲಿ ಸಂದೇಶದ ಮಾದರಿ
Dear Value Customer, Your SBI NetBanking Reward Points (Rs 9980.00) will expire today! Now Redeem through SBI REWARD App Install & claim your reward by cash deposit in your account.ThankyouTeam -SBI