ಮಹಿಳೆಯರಿಗಾಗಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಯೂಟ್ಯೂಬ್‌ ಚಾನೆಲ್ ಲೋಕಾರ್ಪಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಹಿಳೆಯರಿಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳ ‘ಜ್ಞಾನವಿಕಾಸ ಯೂ ಟ್ಯೂಬ್‌’ ಚಾನೆಲನ್ನು
ಗೆಳತಿ ಜ್ಞಾನ ಕೇಂದ್ರದ ಅಧ್ಯಕ್ಷರಾದ ಶ್ರದ್ಧಾ ಅಮಿತ್‌ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಪ್ರಾರಂಭಿಸಲಾದ ಜ್ಞಾನ ವಿಕಾಸ ಯೂ ಟ್ಯೂಬ್‌ ಚಾನೆಲ್‌ನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಲೋಕಾರ್ಪಣೆಗೊಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಡೆಸುತ್ತಿರುವ ಅನೇಕ ಸಂಸ್ಥೆಗಳಲ್ಲಿ ಇರುವ ಮಾಹಿತಿ, ಸಂಪನ್ಮೂಲಗಳನ್ನು ಸದಸ್ಯರಿಗೆ ತಲುಪಿಸುವುದಕ್ಕಾಗಿ ಹಾಗೂ ಮಹಿಳೆಯರ ದೈನಂದಿನ ಜೀವನ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ, ಸರಕಾರಿ ಯೋಜನೆಗಳ ಮಾಹಿತಿ, ಸ್ವ-ಉದ್ಯೋಗಕ್ಕೆ ಇರುವ ಅವಕಾಶಗಳು ಮತ್ತು ಕಾನೂನಿನ ಅರಿವು, ಆಪ್ತ ಸಮಾಲೋಚನೆ, ಮಕ್ಕಳ ಮಾನಸಿಕ ಬೆಳವಣಿಗೆಗಳು ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಲಾಗುತಿದೆ.

ಮನೆಯಲ್ಲಿತರಕಾರಿ ಬೆಳೆಯುವ ವಿಧಾನ, ಕೈತೋಟ ರಚನೆ, ಟೆರೇಸ್‌ ಗಾರ್ಡನ್‌, ಮನೆಯ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿ, ಮನೆ ನಿರ್ವಹಣೆ ಕುರಿತು ಮಾಹಿತಿ, ಯೋಗಾಸನಗಳ ಕುರಿತು ಕಿರುಚಿತ್ರ, ಕೋವಿಡ್‌-19 ಸಂದರ್ಭ ಸ್ವಚ್ಛತೆ, ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸಾಮಾಜಿಕ ಅಂತರದ ಮಹತ್ವ, ಸರಕಾರಿ ಯೋಜನೆಗಳನ್ನು ಪಡೆದುಕೊಳ್ಳುವ ಕುರಿತು ಮಾಹಿತಿ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಕುರಿತು ಮಾಹಿತಿ, ಮಕ್ಕಳಿಗಾಗಿ ಸುಭಾಷಿತ, ಮೌಲ್ಯಧರಿತ ಕಥೆಗಳು, ಮಹಿಳೆಯರು ಓದಬಹುದಾದ ಪುಸ್ತಕಗಳ ಕುರಿತು ಮಾಹಿತಿ ಹೀಗೆ ಹಲವಾರು ವಿಷಯಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಕ್ರೋಡೀಕರಣ ಮತ್ತು ಗ್ರಾಮೀಣ ಭಾಗಕ್ಕೆ ತಲುಪಿಸುವ ನಿಟ್ಟಿನಲ್ಲಿಜ್ಞಾನವಿಕಾಸ ಯೂಟ್ಯೂಬ್‌ ಚಾನೆಲ್‌ ಮಹತ್ವಪೂರ್ಣವಾಗಿದೆ.

ಜ್ಞಾನವಿಕಾಸ ಯೂಟ್ಯೂಬ್ ಚಾನಲ್ ಬಿಡುಗಡೆ ವೇಳೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯೂಟ್ಯೂಬ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ👇🏼👇🏼👇🏼👇🏼👇🏼

https://www.youtube.com/channel/UCI8SB5NsAtv5GtTUFEaUQnQ

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ, ಕುಂದಾಪುರದ ಯೋಧ ಅನೂಪ್‌ ಹುತಾತ್ಮ

    • By admin
    • December 25, 2024
    • 84 views
    ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ, ಕುಂದಾಪುರದ ಯೋಧ ಅನೂಪ್‌ ಹುತಾತ್ಮ

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 98 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 59 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 60 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 144 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 83 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ