ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ಸಹಕಾರ ಸಚಿವರ ಸೂಚನೆ !

ಬೆಂಗಳೂರು : ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆಶಾ ಕಾರ್ಯಕರ್ತೆಯರಿಗಾಗಿ ಜಿಲ್ಲಾವಾರು ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೂಚಿಸಿದ್ದಾರೆ.

ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಅವರಿಗೆ ಪ್ರೋತ್ಸಾಹ ನೀಡಲು 3 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗಿದೆ. ಇದರ ಜೊತೆಗೆ ಅವರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುವಂತೆ ಜಿಲ್ಲಾವಾರು ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಇಲಾಖೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸಹಕಾರ ಇಲಾಖೆಯ ರಿಜಿಸ್ಟಾರ್ ಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 40,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ಗುರುತಿಸಿ, ಅವರಿಗೆ ನೈತಿಕವಾಗಿ ಆತ್ಮಸ್ಥೈರ್ಯ ತುಂಬಲು ಹಾಗೂ ಆರ್ಥಿಕ ಸದೃಢತೆ ಹೊಂದಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಸಲುವಾಗಿ, ಆಯಾ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಈ ಬಗ್ಗೆ ಅರಿವು ಮೂಡಿಸಿ, ಅವರುಗಳಿಗೆ ಆರ್ಥಿಕವಾಗಿ ಸಬಲತೆ ಹೊಂದಲು, ಪ್ರತಿ ಜಿಲ್ಲೆಯಲ್ಲಿಯೂ ಆಶಾ ಕಾರ್ಯಕರ್ತೆಯರ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲು ಸಂಬಂಧಪಟ್ಟ ಪ್ರಾಂತೀಯ ಜಂಟಿ ನಿಬಂಧಕರು, ಉಪನಿಬಂಧಕರು ಹಾಗೂ ಸಹಾಯಕ ನಿಬಂಧಕರುಗಳಿಗೆ ನಿರ್ದೇಶನ ನೀಡಿ, ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ಕೈಗೊಂಡಕ್ರಮದ ಬಗ್ಗೆ 15 ದಿನಗಳೊಳಗಾಗಿ ಈ ಕಛೇರಿಗೆ ವರದಿ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

Spread the love
  • Related Posts

    ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ

    ಮಂಗಳೂರು: ಕಾವೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖೆಯ ಸುವರ್ಣ ಮಹೋತ್ಸವ, ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಹಾಗೂ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ…

    Spread the love

    ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

    ಉಜಿರೆ: ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ವರ್ಷದ ಲಾಂಛನವನ್ನು ಆಸ್ಪತ್ರೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸೇವೆಯನ್ನು ನೀಡುತ್ತಾ ಬೆಳೆದ ಬೆನಕ ಆಸ್ಪತ್ರೆ ಇನ್ನಷ್ಟು ಬೆಳೆದು ಜನಹಿತ ಕೆಲಸ ಮಾಡುವಂತಾಗಲಿ ರಜತಸಂಭ್ರಮ ಲಾಂಛನವು ಬೆನಕ ಆಸ್ಪತ್ರೆಯ ನಿಷ್ಕಲ್ಮಶ, ಗುಣಮಟ್ಟದ…

    Spread the love

    You Missed

    ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ

    • By admin
    • January 2, 2025
    • 21 views
    ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ

    ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ

    • By admin
    • January 2, 2025
    • 60 views
    ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ  ಪೂರ್ವಭಾವಿ ಸಮಾಲೋಚನೆ ಸಭೆ

    ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

    • By admin
    • January 2, 2025
    • 25 views
    ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

    ಬೆಂಗಳೂರು-ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ-ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಆಯೋಜನೆ

    • By admin
    • January 1, 2025
    • 16 views
    ಬೆಂಗಳೂರು-ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ-ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಆಯೋಜನೆ

    ಪ್ರಯಾಣಿಕರ ಅನುಕೂಲಕ್ಕಾಗಿ ದೇವದುರ್ಗ-ಧರ್ಮಸ್ಥಳ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ

    • By admin
    • January 1, 2025
    • 34 views
    ಪ್ರಯಾಣಿಕರ ಅನುಕೂಲಕ್ಕಾಗಿ ದೇವದುರ್ಗ-ಧರ್ಮಸ್ಥಳ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ

    ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2025ರ ಸಂಭ್ರಮಕ್ಕೆ ವಿವಿಧ ಹೂ ಹಣ್ಣು ಗಳಿಂದ ವಿಶೇಷ ಅಲಂಕಾರ

    • By admin
    • January 1, 2025
    • 39 views
    ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2025ರ ಸಂಭ್ರಮಕ್ಕೆ ವಿವಿಧ ಹೂ ಹಣ್ಣು ಗಳಿಂದ ವಿಶೇಷ ಅಲಂಕಾರ