ಬೆಂಗಳೂರು: ಇಂದಿನಿಂದ ಹಲವು ಷರತ್ತುಗಳೊಂದಿಗೆ ಶ್ರದ್ಧಾಕೇಂದ್ರಗಳನ್ನು ಶ್ರದ್ಧೆ ಭಕ್ತಿಯಿಂದ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ದೇವಾಲಯ, ಪ್ರಾರ್ಥನಾ ಮಂದಿರ ತೆರೆಯಲು ಹಲವು ಶರತ್ತುಬದ್ಧ ಮಾರ್ಗಸೂಚಿಗಳು ಈ ಕೆಳಗಿನಂತಿದೆ.
ಉಸಿರಾಟದ ತೊಂದರೆ ಜ್ವರ, ಕೆಮ್ಮು, ನೆಗಡಿ, ಅಂತಹ ರೋಗ ಲಕ್ಷಣಗಳನ್ನು ಹೊಂದಿರುವವರು ಶ್ರದ್ಧಾಕೇಂದ್ರಗಳ ಪ್ರದೇಶಕ್ಕೆ ಕಡ್ಡಾಯವಾಗಿ ಬರುವಂತಿಲ್ಲ.
ಸ್ಮಾರ್ಟ್ ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅಳವಡಿಸಿಕೊಳ್ಳುವುದು.
ದೇವಾಲಯಗಳ ಮಾರ್ಗಸೂಚಿಗಳು:
● ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಪ್ರತಿ ದಿನ ದೇವಾಲಯದ ಒಳ ಮತ್ತು ಹೊರ ಆವರಣಗಳನ್ನು ಕೋವಿಡ್ ವೈರಾಣು ತಡೆಗಟ್ಟಲು ಡಿಸ್ ಇನ್ಪೆಕ್ಟೆಂಟ್ ಗಳನ್ನು ಸಿಂಪಡಿಸುವುದು.
● ದೇವಾಲಯಗಳಿಗೆ ಹೆಚ್ಚುವರಿ ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ, ದೇವಾಲಯದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ನೇಮಿಸಿಕೊಳ್ಳುವುದು ಹಾಗೂ ಹೆಚ್ಚುವರಿ ಸೆಕ್ಯೂರಿಟಿ ಗಾರ್ಡ್ ಗಳ ವ್ಯವಸ್ಥೆಗೆ ತಗುಲುವ ವೆಚ್ಚವನ್ನು ದೇವಾಲಯದ ನಿಧಿಯಿಂದ ಭರಿಸುವುದು.
● ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ದೇವಾಲಯಕ್ಕೆ ಪ್ರವೇಶಿಸುವ ದ್ವಾರಗಳಲ್ಲಿ ಕಡ್ಡಾಯವಾಗಿ ದೇಹದ ಉಷ್ಣತೆಯನ್ನು ತಪಾಸಣೆ ಮಾಡುವುದು ಹಾಗೂ ಕೈಗಳಿಗೆ ಸ್ಯಾನಿಟೈಸರ್ ನೀಡುವುದು.
● ಭಕ್ತಾಧಿಗಳಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಯು ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವಂತಿಲ್ಲ.
● ಭಕ್ತಾಧಿಗಳು ಮಾಸ್ಕ್ ಗಳನ್ನು ಅಥವಾ ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಕರವಸ್ತ್ರಗಳನ್ನು ಕಡ್ಡಾಯವಾಗಿ ಧರಿಸಿರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸುವುದು.
● ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡು ನಿಟ್ಟಿನಲ್ಲಿ ದೇವಾಲಯದಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
● ದೇವಾಲದಯ ಶೌಚಾಲಯಗಳನ್ನು ಆಗಿಂದ್ದಾಗ್ಗೆ ಸ್ವಚ್ಛಗೊಳಿಸುವುದು ಮತ್ತು ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನುಕೈಗೊಳ್ಳುವುದು.
● ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ದರ್ಶನಕ್ಕೆ ಬರುವವರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರುವಂತಿಲ್ಲ.
● 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಕರಿಗೆ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ಪ್ರವೇಶ ಮಾಡುವಂತಿಲ್ಲ.
● ಭಕ್ತಾದಿಗಳು ಪಾದರಕ್ಷೆಯನ್ನು ತಮ್ಮ ವಾಹನದಲ್ಲೇ ಬಿಟ್ಟು ಬರುವುದು, ದೇವಸ್ಥಾನದ ಆವರಣದಲ್ಲಿ ಉಗುಳುವಂತಿಲ್ಲ.
ಮಸೀದಿಗಳಲ್ಲಿ ಮಾರ್ಗಸೂಚಿಗಳು:
● ಮುಸಲ್ಮಾನರು ನಮಾಜ್ ಗೆ ತಮ್ಮದೇ ಸ್ವಂತ ಮ್ಯಾಟ್ ತರಬೇಕು.
● ಮಸೀದಿಗಳ ಮುಂಭಾಗದಲ್ಲಿ ಕೊರೋನಾ ನಿಯಮಗಳಿರುವ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
● ನಮಾಜ್ ಗೂ ಮುನ್ನ ಮೈಕ್‌ಗಳಲ್ಲಿ ಕೊರೋನಾ ಜಾಗೃತಿ ಬಗ್ಗೆ ಅನೌನ್ಸಮೆಂಟ್ ಮಾಡಬೇಕು.
● ರಾತ್ರಿ ಕೊನೆಯ ನಮಾಜ್ ಮಾಡಿದ ಬಳಿಕ , ನಮಾಜ್ ಮಾಡಿದ ಸ್ಥಳವನ್ನ ಕಡ್ಡಾಯವಗಿ ಸ್ವಚ್ಛತೆ ಮಾಡಬೇಕು.
● ಮಸೀದಿಗಳಲ್ಲಿ ನಮಾಜ್ ವೇಳೆ ಸಾಮಾಜಿಕ ಅಂತರ ಕಡ್ಡಾಯ 6 ಅಡಿ ಅಂತರದಲ್ಲಿ ನಮಾಜ್, ನಮಾಜ್ ಮಾಡುವ ಜಾಗವನ್ನ ಸಾಮಾಜಿಕ ಅಂತರದಲ್ಲಿ ಮಾರ್ಕ್ ಮಾಡಬೇಕು.
● ಮಸೀದಿ ಹೊರಗೆ ಚಪ್ಪಲಿಗಳನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆ.
● ನಮಾಜ್ ಮಾಡಿವ ಸ್ಥಳ ಭರ್ತಿಯಾದ ತಕ್ಷಣ ಗೇಟ್ ಕ್ಲೋಜ್ ಮಾಡಬೇಕು.
● ಶುಕ್ರವಾರ ಹೆಚ್ಚು ಜನ ಇರೋದ್ರಿಂದ ಮೂರು ಸಲ ಪ್ರಾರ್ಥನೆ ಮಾಡಲು ಸೂಚನೆ(ಪ್ರತಿ ನಮಾಜ್ ಗೂ ಅರ್ಥ ಗಂಟೆ ಮಿಸಲು)
● ಮಸೀದಿಗಳಲ್ಲಿ ಮುಂದಿನ ಆದೇಶದವರೆಗೂ ಮದ್ರಸಾ ನಡೆಸುವಂತಿಲ್ಲ
● ಮಸೀದಿಯಲ್ಲಿ ಖುರಾನ್ ಸೇರಿದಂತೆ ಧಾರ್ಮಿಕ ಪುಸ್ತಕಗಳನ್ನು ಒದುವಂತಿಲ್ಲ.
● ಮಸೀದಿಗಳಲ್ಲಿ ನಿಕಾ(ಮದುವೆಗಳಿಗೆ) ವ್ಯವಸ್ಥೆಗೆ ನಿರ್ಬಂಧ, ಪರಸ್ಪರ ಹ್ಯಾಂಡ್ ಶೇಕ್, ಆಲಿಂಗನ ಮಾಡಿಕೊಳ್ಳಲು ಅವಕಾಶವಿಲ್ಲ.
ದರ್ಗಾಗಳಿಗೆ ಮಾರ್ಗಸೂಚಿಗಳು:
● ದರ್ಗಾಗಳನ್ನು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಮಾತ್ರ ತೆರೆಯಬೇಕು.
● ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಿರಬೇಕು.
● ಅಡಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ.
● ದರ್ಗಾಗಳಲ್ಲಿ ಮಾಲಾರ್ಪಣೆ, ಹೂ ಹಾಕುವುದು ನಿಷೇಧ
ದರ್ಗಾದಲ್ಲಿ ಹರಕೆಗಳನ್ನ ತೀರಿಸಲು ಮಾತ್ರ ಅವಕಾಶ.
● ದರ್ಗಾದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುರಕ್ಷತೆಯಲ್ಲಿರಬೇಕು.
● ದರ್ಗಾಗಳಲ್ಲಿ ಹಸಿರು ಧ್ವಜ ಕಟ್ಟಲು ನಿರ್ಬಂಧ.
ಚರ್ಚ್ ಗಳಲ್ಲಿ ಮಾರ್ಗಸೂಚಿಗಳು:
● ಭಾನುವಾರದ ವಿಶೇಷ ಪ್ರಾರ್ಥನೆಯನ್ನು ಶನಿವಾರದಿಂದ ಆರಂಭಿಸಬೇಕು.
● ಭಾನುವಾರದ ವಿಶೇಷ ಪ್ರಾರ್ಥನೆಗಳನ್ನು ಜನ ಜಾಸ್ತಿ ಇದ್ರೆ ವಾರದ ದಿನಗಳಲ್ಲೂ ವಿಸ್ತರಣೆಗೆ ಮಾಡುವಂತೆ ಸೂಚನೆ.
● ಚರ್ಚ್ ಗಳ ಒಳಗೆ ಪ್ರೇಯರ್ ಗೆ ಕೂರಲು 6 ಅಡಿ ಸಾಮಾಜಿಕ ಅಂತರ ಕಡ್ಡಾಯ.
● ಚರ್ಚ್ ಗಳಲ್ಲಿ ಕೊರೋನಾ ಮಾರ್ಗಸೂಚಿಗಳ ಫಲಕಗಳ ಪ್ರದರ್ಶನ ಮಾಡಬೇಕು.
● ಚರ್ಚ್ ನಲ್ಲಿ ಗಂಟೆಗಳನ್ನು ಮತ್ತು ಇನ್ನಿತರೆ ವಸ್ತುಗಳನ್ನ ಮುಟ್ಟುವುದಕ್ಕೆ ನಿರ್ಬಂಧ.
● ಚರ್ಚ್ ನಲ್ಲಿ ಕ್ರೈಸ್ತ ಪ್ರಾರ್ಥನಾ ಗೀತೆಗಳಿಗೆ ಎಲ್ ಸಿಡಿ ಪ್ರೊಜೆಕ್ಟರ್ ಬಳಸಿ.
● ಚರ್ಚ್ ಗಳಲ್ಲಿನ ಪ್ರಾರ್ಥನೆಯನ್ನ ಲೈವ್ ಸ್ಟ್ರಿಮಿಂಗ್ ಮಾಡಿ ಮನೆಯಲ್ಲಿ ವೀಕ್ಷಣೆ ಮಾಡುವಂತೆ ಮಾಡುವುದು.
ಸಿಖ್ಖರ ಗುರುದ್ವಾರಗಳಿಗೆ ಮಾರ್ಗಸೂಚಿಗಳು:
● ಭಾನುವಾರದಂದು ಗುರುದ್ವಾರಗಳನ್ನು ತೆರೆಯಲು ಸಮಯ ನಿಗದಿ.
● ಭಾನುವಾರದ ಪ್ರಾರ್ಥನೆಗಳಿಗೆ ದಿನದ ಮೂರು ಹೊತ್ತಿನಲ್ಲಿ ಪ್ರಾರ್ಥನೆಗೆ ಅವಕಾಶ.
● ಭಾನುವಾರದ ಬೆಳಗ್ಗೆ 8 ರಿಂದ 9, ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30, ಸಂಜೆ 6.30 ರಿಂದ 7.30 ವರೆಗೆ ಪ್ರಾರ್ಥನೆಗೆ ಸಮಯ ನಿಗದಿ.
● ಗುರುದ್ವಾರಗಳಲ್ಲಿ ಪವಿತ್ರ ಗ್ರಂಥಗಳ ಪಠಣೆಗೆ ನಿರ್ಬಂಧ
ಗುರುದ್ವಾರಗಳ ಒಳಗೆ ಸಾಮಾಜಿಕ ಅಂತರದಲ್ಲಿ ಪ್ರಾರ್ಥನೆ ಮಾಡಬೇಕು.
● ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ.
ಜೈನ ಬಸದಿಗಳಲ್ಲಿ ಮಾರ್ಗಸೂಚಿಗಳು:
● ಜೈನ ಬಸದಿಗಳಲ್ಲಿ ನಿತ್ಯದ ಪ್ರಾರ್ಥನೆಗೆ ಸಮಯ ನಿಗದಿ
ಬೆಳಗ್ಗೆ 7 ರಿಂದ 9 ರೊಳಗೆ ಪ್ರಾರ್ಥನೆ, ಪ್ರಾರ್ಥನೆ ಗಳ ಆನ್ ಲೈನ್ ನೇರ ಪ್ರಸಾರಕ್ಕೆ ಸೂಚನೆ.
● ಜೈನಬಸದಿಗಳಲ್ಲಿ ಎಲ್ಲ ಕೊರೋನಾ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯ.
● ಭಕ್ತಾದಿಗಳು ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ಸ್ ಕೊಡಬಾರದು.
● ಪವಿತ್ರ ಗ್ರಂಥಗಳನ್ನ ಸುರಕ್ಷಿತವಾಗಿ ಇಡಬೇಕಾಗುತ್ತದೆ.