ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟ ಸಂಭವಿಸಿದ್ದು ಇಂದು 115 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಕರಾವಳಿಗೆ ಕೊರೋನಾ ಆತಂಕವನ್ನು ತಂದೊಡ್ಡಿದ್ದು, ಉಡುಪಿ ಜಿಲ್ಲೆಯಲ್ಲಿ 29 ಮಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ರಾಜ್ಯದ 12 ಜಿಲ್ಲೆಗಳಲ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು ಇಂದು ರಾಜ್ಯದಾದ್ಯಂತ 115 ಮಂದಿಗೆ ಸೋಂಕು ದೃಢಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆಯಾಗಿದೆ.
115 ಸೋಂಕಿತರ ಪೈಕಿ 97 ಜನ ವಿದೇಶ ಹಾಗೂ ಹೊರರಾಜ್ಯದಿಂದ ಪ್ರಯಾಣಬೆಳೆಸಿದವರಾಗಿರುತ್ತಾರೆ.
ಜಿಲ್ಲಾವಾರು ಸೋಂಕಿತ ಪ್ರಕರಣಗಳ ವಿವರ:-
ಉಡುಪಿ 29
ದಕ್ಷಿಣಕನ್ನಡ 24
ಹಾಸನ 13
ಬೀದರ್ 12
ಬೆಂಗಳೂರು 09
ಯಾದಗಿರಿ 07
ಚಿತ್ರದುರ್ಗ 06
ಕಲಬುರ್ಗಿ 05
ಹಾವೇರಿ 04
ಚಿಕ್ಕಮಗಳೂರು 03
ವಿಜಯಪುರ 02
ರಾಯಚೂರು 01