ಯಕ್ಷ ಕಲಾವಿದರಿಗೆ ಗೌರವ ಸಮರ್ಪಣೆಯ ಜೊತೆ ಅಗತ್ಯ ವಸ್ತುಗಳ ಕಿಟ್ ವಿತರಣೆ

ಬೆಳ್ತಂಗಡಿ: ಯಕ್ಷಗಾನ ಕರಾವಳಿ ಭಾಗದ ಮಣ್ಣಿನ ಸಾಂಪ್ರದಾಯಿಕ ಕಲೆ ಕೊರೊನಾ ಮಹಾ ಮಾರಿಯಿಂದ ಯಕ್ಷಗಾನ ಕಲೆಯನ್ನೇ ಜೀವನಾಧಾರವನ್ನಾಗಿಸಿದ ಕಲಾವಿದರಿಗೆ ದಿಕ್ಕು ತೋಚದ ಸ್ಥಿತಿ ಉಂಟಾಗಿದ್ದು ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ 10 ಯಕ್ಷಗಾನ ಕಲಾವಿದರನ್ನು ಗುರುತಿಸಿ ಅಗತ್ಯ ವಸ್ತುಗಳ ಕಿಟ್ ಹಾಗೂ ಗೌರವ ಸಮರ್ಪಿಸಲಾಯಿತು.

ದಿನಾಂಕ-29-04-2020ನೇ ಬುಧವಾರ ಅಂತರರಾಷ್ಟ್ರೀಯ ನೃತ್ಯ ದಿನದಂದು  ರೋಟರಿ ಕ್ಲಬ್  ಬೆಳ್ತಂಗಡಿ ಇದರ ವತಿಯಿಂದ ತಾಲೂಕಿನ ಹತ್ತು ಮಂದಿ ಯಕ್ಷಗಾನ ಕಲಾವಿದರನ್ನು ಗುರುತಿಸಿ ಒಟ್ಟು ರೂಪಾಯಿ ಹತ್ತು ಸಾವಿರ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಆಹಾರದ ಕಿಟ್ ಗಳ ಪ್ರಾಯೋಜಕತ್ವವನ್ನು ಬೆಂಗಳೂರಿನ ಶ್ರೀಮತಿ ಮತ್ತು ಶ್ರೀ ಅನೀಶ್, ರೋ ಕೆ.ಪಿ ಪ್ರಸಾದ್ ,ಬಿ.ಕೆ ಗೋಪಾಲ್ ರಾವ್ ಹಾಗೂ ಬಿ.ಕೆ ವಿಘ್ನೇಶ್ ಕುಮಾರ್ ಕಿಲ್ಲೂರು ವಹಿಸಿದ್ದರು. ಗೌರವಾರ್ಪಣೆಯ ಪ್ರಾಯೋಜನೆಯನ್ನು ಯೋಗೀಶ್ ಭಿಡೆ ಹಾಗೂ ಅನೆಟ್ ಅನುಷಾ ಮಚ್ಚಿಮಲೆ ನೀಡಿದ್ದರು.

ಈ ಪ್ರಶಂಸನೀಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ರೋ. ಕೆ. ಪಿ ಪ್ರಸಾದ್, ರೋ ಪ್ರಕಾಶ್ ಪ್ರಭು, ರೋ. ಶ್ರೀಧರ್ ಕೆ.ವಿ, ರೋ ಶಶಿಕಾಂತ್ ಡೋಂಗ್ರೆ, ರೋ. ಬಿ. ಕೆ ಧನಂಜಯ್ ರಾವ್, ಶ್ರೀಮತಿ ರಾಜಶ್ರೀ, ಶ್ರೀಮತಿ ಗಾಯತ್ರಿ ಶ್ರೀಧರ್, ವಿಷ್ಣುಮೂರ್ತಿ ಭಟ್ ಹಾಗೂ ಯಕ್ಷ ಭಾರತಿಯ ಪ್ರತಿನಿಧಿಯಾಗಿ ಸಂಚಾಲಕ ಮಹೇಶ್ ಕನ್ಯಾಡಿ ಭಾಗವಹಿಸಿದ್ದರು.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15ರಿಂದ 19ರವರೆಗೆ ಲಕ್ಷದೀಪೋತ್ಸವ ಸಂಭ್ರಮ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 15ರಿಂದ 19ರವರೆಗೆ ಲಕ್ಷದೀಪೋತ್ಸವ ನಡೆಯಲಿದೆ. 93ನೇ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ ನಡೆಯಲಿದೆ. ವಸ್ತು ಪ್ರದರ್ಶನ ಮಂಟಪದಲ್ಲಿ ದಿನಾಂಕ 15/11/2025ನೇ ಶನಿವಾರ ಬೆಳಿಗ್ಗೆ 9.30ಕ್ಕೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ರಾಜ್ಯಮಟ್ಟದ ವಸ್ತು…

    Spread the love

    ಇತಿಹಾಸ ನಿರ್ಮಾಣ!ಭಾರತೀಯ ಮಹಿಳಾ ಕ್ರಿಕೆಟಿಗರ ಮಡಿಲಿಗೆ ವಿಶ್ವಕಪ್🏆ಭಾರತದ ವನಿತೆಯರ ಮಡಿಲಿಗೆ ಏಕದಿನ ಕ್ರಿಕೆಟ್ ವಿಶ್ವಕಪ್‌

    ಬಹುನಿರೀಕ್ಷಿತ ಐಸಿಸಿ ವುಮೆನ್ಸ್ ಇಂಟರ್ ನ್ಯಾಷನಲ್ ವರ್ಲ್ಡ್ ಕಪ್ ನಲ್ಲಿ ಭಾರತದ ವನಿತೆಯರು ಮೇಲುಗೈ ಸಾಧಿಸಿಯೇ ಬಿಟ್ಟಿದ್ದಾರೆ. ಈ ಮೂಲಕ ಹಿಂದೆ ಫೈನಲ್ ನಲ್ಲಿ ಅನುಭವಿಸಿದ ಎರಡು ಸೋಲುಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ವಿಶ್ವಕಪ್ ನಲ್ಲಿ ಈ ವರ್ಷ ಮೂರನೇ ಬಾರಿಗೆ ಫೈನಲ್…

    Spread the love

    You Missed

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 48 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

    • By admin
    • December 1, 2025
    • 35 views
    ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ  ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

    ಅಳದಂಗಡಿ ಶ್ರೀ ಸತ್ಯ ದೇವತೆ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಭೇಟಿ

    • By admin
    • November 28, 2025
    • 34 views
    ಅಳದಂಗಡಿ ಶ್ರೀ ಸತ್ಯ ದೇವತೆ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಭೇಟಿ

    ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಭೇಟಿ

    • By admin
    • November 28, 2025
    • 31 views
    ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರು ಭೇಟಿ

    ರಾಷ್ಟ್ರ ಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್‌ ಕುಮಾ‌ರ್ ರವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

    • By admin
    • November 28, 2025
    • 40 views
    ರಾಷ್ಟ್ರ ಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್‌ ಕುಮಾ‌ರ್ ರವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ

    ಕಡಲತಡಿ ಕೃಷ್ಣನಗರಿಗೆ ಪ್ರಧಾನಿ ಮೋದಿ ಆಗಮನ

    • By admin
    • November 28, 2025
    • 35 views
    ಕಡಲತಡಿ ಕೃಷ್ಣನಗರಿಗೆ ಪ್ರಧಾನಿ ಮೋದಿ ಆಗಮನ