ಚಳಿಗಾಲದ ನಂತರ ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ! : ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞರಿಂದ ಎಚ್ಚರಿಕೆ!

ಬೆಂಗಳೂರು: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಸಂಖ್ಯೆ ಕಡಿಮೆಯಾದಂತೆ ಚಳಿಗಾಲದ ನಂತರ ಸೋಂಕಿನ ಎರಡನೇ ಅಲೆ ಕಾಣಿಸಿಕೊಳ್ಳಬಹುದೆಂದು ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆದಾಗ್ಯೂ, ಎರಡನೇ ಅಲೆಯನ್ನು ಪ್ರತಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ನೋಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾದರೂ ಎಲ್ಲ ರಾಜ್ಯಗಳಲ್ಲಿ ಇದೇ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗದು. ಕರ್ನಾಟಕದಲ್ಲಿ ಮೊದಲ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವಾಗ ಎರಡನೇ ಅಲೆ ಬಗ್ಗೆ ಹೇಳಲಾಗದು ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಕೋವಿಡ್ ನಿರ್ವಹಣೆ ಸಲಹೆಗಾರ ಡಾ. ಡಾ.ಗಿರಿಧರ ಬಾಬು ಹೇಳಿದ್ದಾರೆ.

ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೀತಿ ಆಯೋಗ ಇತ್ತೀಚಿಗೆ ಉಲ್ಲೇಖಿಸಿತ್ತು.

ಆದಾಗ್ಯೂ, ದೇಶಾದ್ಯಂತ ನೋಡಿದಾಗ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೆಚ್ಚಾಗಿದ ಸೋಂಕು, ಇದೀಗ ಇಳಿಕೆಯಾಗಿದೆ. ಈ ಸಂಖ್ಯೆಯನ್ನು ಎಲ್ಲಾ ರಾಜ್ಯಗಳಲ್ಲೂ ಒಟ್ಟುಗೂಡಿಸಿ ಯೋಚಿಸಬೇಕಾಗಿದೆ ಎಂದು ಐಸಿಎಂಆರ್ ಸದಸ್ಯ ಹಾಗೂ ವೆಲ್ಲೂರಿನ ಕ್ರಿಸ್ಟಿಯನ್ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ. ಜಾಕಬ್ ಜಾನ್ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಿಲ್ಲದ ಜಿಲ್ಲೆಗಳು ಮತ್ತು ವಲಯಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅಲ್ಲಿಯೂ ಸಹ ನಿಧಾನಗತಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದೆ ಎಂದು ಡಾ. ಗಿರಿಧರ್ ಬಾಬು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಮಧ್ಯೆ ಮೊದಲ ಅಲೆ ಡಿಸೆಂಬರ್ ಮಾಸಾಂತ್ಯದವರೆಗೂ ಇರಲಿದೆ ಅನಿಸುತ್ತಿದೆ. ಡಿಸೆಂಬರ್ ನಂತರ ಇದು ಕಡಿಮೆಯಾಗಲು ಆರಂಭಿಸಲಿದೆ. ಈ ಕುಸಿತ ಕಂಡುಬರುವ ಹೊತ್ತಿಗೆ, ಎರಡನೇ ಅಲೆ ಬೀಸಿದ್ದರೂ ಸಹ, ಇದು ಹೆಚ್ಚು ಸಮಸ್ಯೆಗೆ ಕಾರಣವಾಗುವುದಿಲ್ಲ, ಮರಣ ಪ್ರಮಾಣ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಕನಿಷ್ಠ ಪ್ರಮಾಣದಲ್ಲಿ ಹೆಚ್ಚಳ ಆಗಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ

Spread the love
  • Related Posts

    ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ

    ಮಂಗಳೂರು: ಕಾವೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖೆಯ ಸುವರ್ಣ ಮಹೋತ್ಸವ, ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಹಾಗೂ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ…

    Spread the love

    ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

    ಉಜಿರೆ: ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ವರ್ಷದ ಲಾಂಛನವನ್ನು ಆಸ್ಪತ್ರೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸೇವೆಯನ್ನು ನೀಡುತ್ತಾ ಬೆಳೆದ ಬೆನಕ ಆಸ್ಪತ್ರೆ ಇನ್ನಷ್ಟು ಬೆಳೆದು ಜನಹಿತ ಕೆಲಸ ಮಾಡುವಂತಾಗಲಿ ರಜತಸಂಭ್ರಮ ಲಾಂಛನವು ಬೆನಕ ಆಸ್ಪತ್ರೆಯ ನಿಷ್ಕಲ್ಮಶ, ಗುಣಮಟ್ಟದ…

    Spread the love

    You Missed

    ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ

    • By admin
    • January 2, 2025
    • 25 views
    ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಮತ್ತು ರಜತ ತುಲಾಭಾರ

    ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ

    • By admin
    • January 2, 2025
    • 66 views
    ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ  ಪೂರ್ವಭಾವಿ ಸಮಾಲೋಚನೆ ಸಭೆ

    ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

    • By admin
    • January 2, 2025
    • 27 views
    ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

    ಬೆಂಗಳೂರು-ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ-ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಆಯೋಜನೆ

    • By admin
    • January 1, 2025
    • 16 views
    ಬೆಂಗಳೂರು-ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ-ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಆಯೋಜನೆ

    ಪ್ರಯಾಣಿಕರ ಅನುಕೂಲಕ್ಕಾಗಿ ದೇವದುರ್ಗ-ಧರ್ಮಸ್ಥಳ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ

    • By admin
    • January 1, 2025
    • 35 views
    ಪ್ರಯಾಣಿಕರ ಅನುಕೂಲಕ್ಕಾಗಿ ದೇವದುರ್ಗ-ಧರ್ಮಸ್ಥಳ ಬಸ್ ಸಂಚಾರಕ್ಕೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ

    ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2025ರ ಸಂಭ್ರಮಕ್ಕೆ ವಿವಿಧ ಹೂ ಹಣ್ಣು ಗಳಿಂದ ವಿಶೇಷ ಅಲಂಕಾರ

    • By admin
    • January 1, 2025
    • 40 views
    ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2025ರ ಸಂಭ್ರಮಕ್ಕೆ ವಿವಿಧ ಹೂ ಹಣ್ಣು ಗಳಿಂದ ವಿಶೇಷ ಅಲಂಕಾರ