ಶನಿವಾರದ ದಿನಭವಿಷ್ಯ ಯಾವ ರಾಶಿಯವರಿಗಿದೆ ಶುಭ ಫಲ!

ಮೇಷ ರಾಶಿ:
ನಿಮ್ಮ ಸಂಗಾತಿ ಎಂದಿಗೂ ಇಷ್ಟೊಂದು ಸುಂದರವಾಗಿರಲಿಲ್ಲ ಎಂದು ನಿಮಗೆ ಅರಿವಾಗುತ್ತದೆ. ನಿಮ್ಮ ಹಿತನುಡಿಗಳಿಂದ ಸಂಗಾತಿ ಫುಲ್ ಖುಷಿ. ನೀವು ಸಂಗಾತಿಯೊಡನೆ ದಿನಪೂರ್ತಿ ಕಾಲ ಕಳೆಯಬಹುದು. ಕೆಲಸದಲ್ಲಿ ಸಂಭವಿಸುವ ದೌರ್ಜನ್ಯ ಅದು ನಿಮಗೆ ಮುಂದಿನ ಭವಿಷ್ಯದಲ್ಲಿ ಪ್ರಜ್ವಲ ಶಕ್ತಿ ನೀಡುತ್ತದೆ. ಕುಟುಂಬದಲ್ಲಿ ನೀವೇ ಕೇಂದ್ರ ಬಿಂದುವಾಗಿದ್ದು, ಆಸ್ತಿ ಪಾಲುದಾರಿಕೆ ಪ್ರಸ್ತಾಪ ಬರಲಿದೆ. ಇಂದು ಮಾಡಿದ ಹೂಡಿಕೆ ನಿಮ್ಮ ಅಭಿವೃದ್ಧಿ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಬೆಳ್ಳಿಯ ವಸ್ತುಗಳು ಖರೀದಿಸುವಿರಿ. ವಾಹನ ಚಲಾವಣೆ ಮಾಡುವಾಗ ಜಾಗೃತೆಯಿರಲಿ. ವಾಹನ ಚಲಿಸುವಾಗ ಹತ್ತುವುದು ಇಳಿಯುವುದು ಮಾಡಬೇಡಿ. ರೆಫ್ರಿಜಿರೇಟರ್ ಪರೀಕ್ಷಿಸಿ. ಗ್ಯಾಸ್ ಸಿಲೆಂಡರ್ ಪರೀಕ್ಷಿಸಿ ಮಲಗೋದು ಹವ್ಯಾಸ ಮಾಡಿಕೊಳ್ಳಿ. ಅಳಿಯನ ಭವಿಷ್ಯದ ಚಿಂತನೆ ಕಾಡಲಿದೆ. ಕುಟುಂಬ ಸದಸ್ಯರ ಸಂತಾನದ ಚಿಂತನೆ ಮೂಡಲಿದೆ. ಉದ್ಯೋಗಸ್ಥರಿಗೆ ಧನಲಾಭ. ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ ಕಾಣುವಿರಿ. ಮಕ್ಕಳ ಮದುವೆ ಮಾತುಕತೆ ಬರಲಿದೆ. ಸರಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಶೀಘ್ರ ಸಿಹಿಸುದ್ದಿ.

ವೃಷಭ ರಾಶಿ:
ನಿಮ್ಮ ಮೃದು ಸ್ವಭಾವ ನಿಮಗೆ ಮುಜುಗುರ ಮಾಡಲಿದೆ. ಸಂಗಾತಿಯೊಡನೆ ಆಹ್ಲಾದಕರ ಮನಸ್ಥಿತಿಯಲ್ಲಿ ಕೇಳಿರುತ್ತೀರಿ. ಉದ್ದಿಮೆಗಳು ಯೋಚಿಸಿ ಹಣ ಹೂಡಿಕೆ ಮಾಡುವ ಅಗತ್ಯವಿದೆ. ಪತ್ನಿಯ ವ್ಯವಹಾರಗಳಲ್ಲಿ ನಿಮ್ಮ ಹಸ್ತಕ್ಷೇಪದಿಂದ ತೊಂದರೆ. ನಿಮ್ಮ ವೈವಾಹಿಕ ಜೀವನಕ್ಕೆ ತೊಂದರೆ ಸಂಭವ. ಸಮಾಜಸೇವಕರು ನಿಮ್ಮ ಕೆಲಸಕ್ಕೆ ಜನ ಗುರುತಿಸುತ್ತಾರೆ ಹಾಗೂ ಬೆಂಬಲ ಸಿಗುವುದು. ನೆರೆಹೊರೆಯವರ ಸಹಾಯದಿಂದ ನಿಮ್ಮ ಕಷ್ಟ ದೂರವಾಗಲಿದೆ. ಆತ್ಮೀಯರ ಕಡೆಯಿಂದ ಒಂದು ಸಿಹಿಸುದ್ದಿ ಅದುವೇ ಮದುವೆ ಕಾರ್ಯ ಚರ್ಚೆ. ಹೊಸ ವಾಹನ ಖರೀದಿ ಸದ್ಯಕ್ಕೆ ಬೇಡ. ದಂಪತಿಗಳಿಗೆ ಸಂತಾನದ ಸಿಹಿಸುದ್ದಿ. ಮಾವನ ಮನೆ ಕಡೆಯಿಂದ ಆಸ್ತಿ ಭಾಗ್ಯ. ಹಣಹೂಡಿಕೆ ಸೂಕ್ತ ಸಮಯ. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಆರ್ಥಿಕ ಪ್ರಗತಿ ಕಾಣುವಿರಿ. ಕಲ್ಯಾಣ ಮಂಟಪ ಮಾಲಕರಿಗೆ ಆರ್ಥಿಕದಲ್ಲಿ ಹಿನ್ನಡೆ ಸಂಭವ. ಹೆಲ್ಮೆಟ್ ಧರಿಸಿ ಪ್ರಯಾಣ ಮಾಡಿ. ದುರಹಂಕಾರ ಬುದ್ಧಿ ಎಂದು ತೋರಿಸಬೇಡಿ, ಅದು ನಿಮಗೆ ಪರಿಣಾಮಕಾರಿಯಾಗಿ ಮಾರಕವಾಗುವುದು. ಬಯಸದೇ ಬಂದ ಭಾಗ್ಯ ತಿರಸ್ಕಾರ ಬೇಡ.
ಹರಿಶಿಣ ವರ್ಣದ ಬಟ್ಟೆ ಧರಿಸಿದರೆ ಶುಭ.

ಮಿಥುನ ರಾಶಿ:
ನಿಮ್ಮ ಜಗಳಗಂಟ ನಡುವಳಿಕೆ ನಿಮಗೆ ಶತ್ರು ವಾಗುವುದು. ಚೆಕ್ ಬೌನ್ಸ್ ನಿಂದ ನಿಮಗೆ ತೊಂದರೆ ಕಾಡಲಿದೆ. ಆಕಸ್ಮಿಕ ಸಂಗಾತಿ ಭೇಟಿ ಸಂಭವ ಹಳೆಯ ಸಂತೋಷದ ನೆನಪುಗಳು ಮರು ನೆನಪು ಚಾಲನೆ. ನೀವು ಪ್ರಮುಖ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಿ, ಇದರಿಂದ ನಿಮ್ಮ ವರ್ಚಸ್ಸು ಬೆಳೆಯುವುದು. ಸಂಗೀತ ನಿರ್ದೇಶಕ, ಗಾಯನ ,ನೃತ್ಯ, ನಟನೆ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಲಿದೆ ಮತ್ತು ಒಂದು ಉತ್ತಮವಾದ ವೇದಿಕೆ ಸಿಗಲಿದೆ ಉಪಯೋಗ ಪಡಿಸಿಕೊಳ್ಳಿ. ವಿಲಾಸಿ ಜೀವನಕ್ಕೆ ಆಸೆಪಟ್ಟು ತೊಂದರೆ ಅನುಭವಿಸುವಿರಿ. ನಿಮ್ಮ ಸಂಗಾತಿ ನಿಮಗೆ ಧನ ಸಹಾಯ ಮಾಡಿ ಕಷ್ಟಗಳಿಂದ ಪಾರು ಮಾಡುತ್ತಾಳೆ. ನಿಮ್ಮ ಪಾಲಿಗೆ ಅವಳು ದೇವರು. ನ್ಯಾಯಾಲಯದ ತೀರ್ಪು ನಿಮ್ಮಂತ ಆಗಲಿದೆ. ವಿದೇಶಕ್ಕೆ ಹೋಗಲು ಇಚ್ಛೆಯುಳ್ಳವರು ವೀಸಾದ ಸಮಸ್ಯೆ ಕಾಡಲಿದೆ. ಹಣಕಾಸಿನ ಅಡಚಣೆಯಿಂದ ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವ ಸಂಭವ. ಉದ್ಯೋಗದಲ್ಲಿ ನಷ್ಟ ಸಂಭವ.
ಆಕಾಶ ವರ್ಣದ ಬಟ್ಟೆ ಧರಿಸಿದರೆ ಶುಭ.

ಕರ್ಕಾಟಕ ರಾಶಿ:
ಸದೃಢ ಶರೀರಕ್ಕಾಗಿ ಯೋಗಾಸನ ಮಾಡುವಿರಿ. ನಿಮ್ಮ ಮಕ್ಕಳು ನಿಮ್ಮ ಆಸೆ ಪೂರೈಸಲು ಕಾಲ ಬಂದಿದೆ. ವ್ಯಾಪಾರಸ್ಥರು ಇಂದು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಬೆಟ್ಟಿಂಗ್ ದಿಂದ ಧನಹಾನಿ ಮಾನಹಾನಿ ಸಂಭವ. ಇಂದು ಸಂಗಾತಿಗಾಗಿ ಪ್ರಣಯ ಜೀವನ ದಿನರಾತ್ರಿ ಕಳೆಯಬಹುದು. ನಿಮ್ಮ ಶಾಂತ ನುಡಿ ಸೃಜನಶೀಲತೆ ಪರೀಕ್ಷಿಸಿ ಉನ್ನತ ಪದವಿ ಸಿಗುವ ಭಾಗ್ಯ. ನಿಮ್ಮ ನೆರೆಹೊರೆಯವರು ನಿಮ್ಮ ವೈವಾಹಿಕ ಜೀವನಕ್ಕೆ ಅಡತಡೆ ಮಾಡುವ ಸಂಭವ. ಪ್ರೇಮಿಗಳ ಪರಸ್ಪರ ಸಂಬಂಧ ಬೇರೆ ಮಾಡೋದು ತುಂಬಾ ಕಷ್ಟ.
ಬದಾಮಿ ವರ್ಣದ ಬಟ್ಟೆ ಧರಿಸಿದರೆ ಶುಭವಾಗುವುದು.

ಸಿಂಹ ರಾಶಿ:
ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ. ಪದೇಪದೇ ಎದೆ ನೋವು ಕಾಣಿಸುವುದು. ಕಾಯಿಲೆ ಬಗ್ಗೆ ಹೆಚ್ಚು ಮಾತನಾಡಿದಷ್ಟು ಅದು ಇನ್ನೂ ಉಲ್ಬಣಗೊಳ್ಳುವುದು. ನೀವು ಕೆಲಸದಲ್ಲಿ ತೊಡಗಿದರೆ ಒಳ್ಳೆದು. ಮಧ್ಯಪಾನ ಧೂಮಪಾನ ಮಾಡಿದಷ್ಟು, ಗಳಿಸಿರುವ ಹಣ ಆಸ್ಪತ್ರೆಗೆ ಖರ್ಚು ಭರಿಸುವಿರಿ. ಹಿರಿಯರ ಆಶೀರ್ವಾದದಿಂದ ಹೊಸ ಉದ್ಯೋಗ ಪ್ರಾರಂಭಿಸುವಿರಿ. ನೀವು ಬಹಳ ಹಿಂದೆ ಆರಂಭವಾದ ಒಂದು ಯೋಜನೆ ಇಂದು ಮರುಚಾಲನೆ ಭಾಗ್ಯ ಸಿಗಲಿದೆ. ಪ್ರೇಮಿಯ ಪ್ರೀತಿಯಿಂದ ನಿಮಗೆ ತೃಪ್ತಿ ಸಾಕಷ್ಟು ಸಿಗುತ್ತದೆ. ತುರ್ತುಪರಿಸ್ಥಿತಿ ಸಂಭವ ಹಣಕಾಸಿನ ಬಗ್ಗೆ ಕಾಳಜಿವಹಿಸಿ. ಸಂಬಂಧಿಗಳು ಇಂದು ನಿಮ್ಮ ಮನೆಗೆ ಶುಭ ಸಮಾಚಾರ ತಿಳಿಸಲು ಬರುವರು. ವಿಚ್ಛೇದನ /ವಿಧವೆ ಮಕ್ಕಳ ಮದುವೆ ಚರ್ಚೆ ಸಂಭವ. ಪಕ್ಕದ ಆಸ್ತಿ ಖರೀದಿ ಸಂಭವ. ಬಹುದಿನದ ಕನಸು ಹತ್ತಿರ ಬರಲಿದೆ. ಸುಂದರವಾದ ಮನೆ ಕಟ್ಟುವ ವಿಚಾರ ಪ್ರಸ್ತಾಪ. ಶಿಕ್ಷಕರ ಮಕ್ಕಳ ಮದುವೆ ಚರ್ಚೆ ಪ್ರಸ್ತಾಪ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಅತಂತ್ರ ಸಂಭವ. ದಂಪತಿಗಳಿಗೆ ಸಂತಾನದ ಚಿಂತನೆ ಕಾಡಲಿದೆ.

ಕನ್ಯಾ ರಾಶಿ:
ಸಂಗಾತಿಯೊಡನೆ ರಸದೌತಣ ಸೇವಿಸುವಿರಿ. ಆಕಸ್ಮಿಕವಾಗಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಡನೆ ಜಗಳ ಸಂಭವ, ವಾದವಿವಾದ ಬೇಡ ಮುಂದೆ ಸಾಗಿರಿ. ಸರ್ಕಾರಿ ಉದ್ಯೋಗ ಪಡೆಯುವುದರಲ್ಲಿ ನಿರಾಶೆಉಂಟು ಮಾಡಬಹುದು, ಪುನ: ಪ್ರಯತ್ನಿಸಿ. ನಿಮ್ಮ ಕನಸು ನನಸಾಗಲು ಒಂದು ವೇದಿಕೆ ಸಿಗುವುದು ಅದನ್ನು ಸದುಪಯೋಗಪಡಿಸಿಕೊಳ್ಳಿ. ಸಂಗಾತಿ ಜೊತೆ ಸರಸ-ಸಲ್ಲಾಪ ಗಳಿಂದ ಪ್ರಣಯದಲ್ಲಿ ಹಿನ್ನಡೆ. ನಿಮ್ಮ ಬಾಸ್ ನಿಂದ ನಿಮಗೆ ಕಿರುಕುಳ ಸಂಭವ. ಉದ್ಯೋಗ ಬದಲಾವಣೆ ಬೇಡ ಅಲ್ಲಿಯೇ ಮುಂದುವರೆಯಿರಿ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಅದರ ಜೊತೆಗೆ ಮುಂಬಡ್ತಿ ಭಾಗ್ಯ ಸಿಗಲಿದೆ. ಸಹೋದ್ಯೋಗಿಗಳ ಸಹಕಾರ ಅಸಂಭವ. ಸಾಲ ತೀರಿಸುವ ಕಂತು ಎದುರಾಗಿದೆ. ಸಾರ್ವಜನಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳಿಗೆ ತುಂಬಾ ಕಿರುಕುಳ ಅನುಭವಿಸುವಿರಿ.
ಕುಂಕುಮ ವರ್ಣ ಬಟ್ಟೆ ಧರಿಸಿದರೆ ಶುಭ.

ತುಲಾ ರಾಶಿ:
ಇಂದು ಕಷ್ಟದಲ್ಲಿದ್ದವರಿಗೆ ನೀವು ಸಹಾಯ ಮಾಡಬಹುದು. ಯೋಗಾಸನದಿಂದ ಚೈತನ್ಯ ಬಳಸಿ ಇದರಿಂದ ಜಿಗುಪ್ಸೆ , ಅಲಸ್ಯ, ಅನಾರೋಗ್ಯ ದೂರವಾಗುವುದು. ರಿಯಲ್ ಎಸ್ಟೇಟ್ನಲ್ಲಿ ಹಣ ಹೂಡಿಕೆ ಮಾಡುವಿರಿ. ಆಭರಣ ಖರೀದಿಸುವಿರಿ. ಸಂಗಾತಿಯ ತೀರ್ಮಾನ ಗೊಂದಲದಲ್ಲಿ ಇರುವುದು. ಕೃಷಿಕರು ಕೃಷಿ ಉಪಕರಣಗಳನ್ನು ಖರೀದಿಸುವಿರಿ. ಗುರುಹಿರಿಯರು ಆಧ್ಯಾತ್ಮಿಕ ಪುಸ್ತಕ ಖರೀದಿಸುವಿರಿ. ಅರ್ಧಾಂಗಿಯ ಜೊತೆ ಒಂದು ಸುಂದರ ಸಮಯ ಕಳೆಯುತ್ತೀರಿ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಚರ್ಚೆ ಸಂಭವ. ವ್ಯಾಪಾರಸ್ಥರಿಗೆ ಉತ್ತಮ ಧನಲಾಭ. ಆಸ್ತಿ ಕಲಹಕಾಗಿ ನ್ಯಾಯಾಲದ ಸಲಹೆ ಪಡೆಯುವಿರಿ.
ತಿಳಿ ಹರಿಶಿಣ ವರ್ಣದ ವಸ್ತ್ರ ಧರಿಸಿದರೆ ಶುಭ.

ವೃಶ್ಚಿಕ ರಾಶಿ;
ಅತಿಯಾದ ಕೆಲಸದ ಒತ್ತಡದಿಂದ ಆರೋಗ್ಯ ಏರು-ಪೇರು ಸಂಭವ. ವಿವಾಹಿತ ಜನರಿಗೆ ಅತ್ತೆ ಮಾವನ ಮನೆಯ ಕಡೆಯಿಂದ ಆಸ್ತಿ ಧನ ಸಹಾಯ ಸಿಗಲಿದೆ. ಕೌಟುಂಬಿಕ ಒತ್ತಡದಿಂದ ನಕಾರಾತ್ಮಕ ಚಿಂತನೆ. ಮಾರುಕಟ್ಟೆಯಲ್ಲಿ ನಿಮ್ಮ ಗಮನ ಬೇರೆ ಕಡೆ ಸೆಳೆದು ಹಣ ಕಳೆದುಕೊಳ್ಳುವ ಸಂಭವ. ಏಕಪಕ್ಷೀಯ ನಿರ್ಧಾರದಿಂದ ಕಷ್ಟ ಸಂಭವ. ಪರಸ್ತ್ರೀ ವ್ಯಾಮೋಹ ಹೆಚ್ಚಾಗಲಿದೆ. ನೀವು ರೂಪಿಸಿರುವ ಯೋಜನೆ ಸಹೋದರ ಕಡೆಯಿಂದ ಹಾಳುಮಾಡಬಹುದು. ವಾಹನ ಚಲಿಸುವಾಗ ಜಾಗ್ರತೆ ಇರಲಿ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಹೊಸ ಉದ್ಯಮ ಪ್ರಾರಂಭ ಮಾಡುವವರಿಗೆ ಪೂರ್ವ ತಯಾರಿ ಮಾಡಿಕೊಳ್ಳಿ. ವಿದೇಶ ಉದ್ಯೋಗಕಾಂಕ್ಷಿಗಳಿಗೆ ಅತಂತ್ರ ಸಂಭವ. ಮದುವೆ ವಿಳಂಬ ಸಾಧ್ಯತೆ. ಕಿತ್ತಳೆ ವರ್ಣದ ಬಟ್ಟೆ ಧರಿಸಿದರೆ ಶುಭವಾಗುವುದು.

ಧನಸ್ಸು ರಾಶಿ:
ಆಕಸ್ಮಿಕ ರಸ್ತೆಯಲ್ಲಿ ಹೋಗುವಾಗ ಅನಾಥರಿಗೆ ಅನ್ನ ದಾನ ಮಾಡುವಿರಿ. ಆತ್ಮೀಯ ಮಿತ್ರ ಮದುವೆಗೆ ಧನ ಸಹಾಯ ಕೇಳಲು ಬರುವರು. ನಿಮ್ಮ ಅಮೂಲ್ಯವಾದ ವಸ್ತು ಹುಡುಕಾಟ ನಡೆಸುವಿರಿ. ವ್ಯಾಪಾರಸ್ಥರು ಗಲ್ಲಪೆಟ್ಟಿಗೆ ಪೆಟ್ಟಿಗೆ ಮೇಲೆ ಜಾಗ್ರತೆ ಇರಲಿ. ಕುಟುಂಬ ಸದಸ್ಯರ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಸಫಲವಾಗುವುದು. ಉದ್ಯೋಗ ಅವಕಾಶಗಳಿಗಾಗಿ ಕೈಗೊಂಡ ಪ್ರಯಾಣ ಸಕರಾತ್ಮಕ ವಾಗಬಹುದು. ಕಾಮ ಕ್ರೋಧ ಮೋಹ ನಿಮ್ಮ ಹತೋಟಿಯಲ್ಲಿರಲಿ. ಸಂಗಾತಿ ಜೊತೆ ಶಾಪಿಂಗ್ ಹೋಗುವಿರಿ. ಸಂಗಾತಿಯ ಸ್ಪರ್ಶದಿಂದ ಮೈ ಜುಮ್ಮೆನ್ನುವುದು. ಕೇಸರಿ ವರ್ಣದ ವಸ್ತ್ರ ಧರಿಸಿದರೆ ಶುಭವಾಗುವುದು.

ಮಕರ ರಾಶಿ:
ಮದುವೆ ವಿಚಾರಕ್ಕಾಗಿ ಸಂಗಾತಿಯೊಡನೆ ಜಗಳ ಸಂಭವ. ಅಜಾಗ್ರತೆಯಿಂದ ಅಪಘಾತ ಸಂಭವ. ಹೆಲ್ಮೆಟ್ ಧರಿಸಿ ಪ್ರಯಾಣ ಬೆಳೆಸಿ. ಮನೆ ಬಿಡುವಾಗ ಗ್ಯಾಸ್ ಸಿಲೆಂಡರ್ ಪರೀಕ್ಷಿಸಿ. ಹೊಸ ಉದ್ಯಮ ಪ್ರಾರಂಭಿಸಿದವರು ಆಕರ್ಷಕವಾಗಿದ್ದು ಮತ್ತು ಒಳ್ಳೆಯ ಆದಾಯ ಬರವಸೆ ಕಾಣುತ್ತದೆ. ಮಾನಸಿಕ ಒತ್ತಡದಿಂದ ನಿಯಂತ್ರಣ ತಪ್ಪಬೇಡಿ. ರಾತ್ರಿಯ ವೇಳೆ ಒಳಗಾಗಿ ನಿಮ್ಮ ಮೂಲಕ ಕೊಟ್ಟಿರುವ ಹಣ ನಿಮಗೆ ಮರಳಿ ಸಿಗಬಹುದು. ನಿಮ್ಮ ಪೋಷಕರಿಗೆ ಅಂತರಾಳವನ್ನು ತಿಳಿಸಲು ಸರಿಯಾದ ಸಮಯ. ನಿಮ್ಮ ಪತ್ನಿಯಿಂದ ಸಂಪೂರ್ಣ ಬೆಂಬಲ ಸಿಗುವುದು. ಬ್ಯಾಂಕ್ ದಿಂದ ಹೊರಗಡೆ ಬರುವಾಗ ಹಣದ ಬಗ್ಗೆ ಜಾಗ್ರತೆ ಇರಲಿ. ಆಕಾಶ ವರ್ಣದ ಬಟ್ಟೆ ಧರಿಸಿದರೆ ಸರ್ವ ಕಾರ್ಯ ಯಶಸ್ವಿ.

ಕುಂಭ ರಾಶಿ:
ಕುಟುಂಬದ ಸದಸ್ಯರಿಂದ ಕಠಿಣ ಸವಾಲು ಎದುರಿಸುವ ಪ್ರಸಂಗ ಬಂದಿದೆ ಇದು ನಿಮ್ಮ ಬಾಳಸಂಗಾತಿ ಯಿಂದ ತಿಳಿಗೊಳ್ಳುತ್ತದೆ. ಇಂದು ನಿಮ್ಮ ಸ ಸಂಗಾತಿಗೆ ಬೆಲೆ ಬಾಳುವ ಉಡುಗೊರೆ ಕೊಟ್ಟು ಸಂತೋಷ ಗೊಳಿಸುವಿರಿ. ದಿನಪೂರ್ತಿ ಸಂಗಾತಿಯೊಡನೆ ಸಮಯ ಕಳೆಯಬಹುದು. ಸಹಭಾಗಿತ್ವ ಉದ್ಯಮದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವುದು. ಸ್ತ್ರೀಯರ ತಂಟೆಗೆ ಹೋಗಬೇಡಿ. ದೀರ್ಘಕಾಲದ ಹೂಡಿಕೆ ಮಾಡುವುದರಿಂದ ಲಾಭ. ಪ್ರೀತಿಯೊಡನೆ ಚಲನಚಿತ್ರ ವೀಕ್ಷಿಸಲು ಅವಕಾಶ ಸಿಗುವುದು. ರಂಗಭೂಮಿ ಕಲಾವಿದರಿಗೆ ಬೇಡಿಕೆ ಹೆಚ್ಚಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ಜರಗುವ ಸಂಭವ. ಇಂದು ಶ್ವೇತವರ್ಣದ ವಸ್ತ್ರ ಧರಿಸಿದರೆ ಸರ್ವ ಕಾರ್ಯ ಸಫಲವಾಗುವುದು.

ಮೀನ ರಾಶಿ:
ಪ್ರೀತಿ ಪ್ರೇಮದ ವಿಚಾರದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದೀರಿ. ಸಂಗಾತಿಯೊಡನೆ ಮನಸ್ತಾಪ ಸಂಭವ. ದಿನಪೂರ್ತಿ ಜಿಗುಪ್ಸೆ ಕಾಡಲಿದೆ. ಕಚೇರಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದರು ಕಿರುಕುಳ ಬಿಟ್ಟಿದ್ದಲ್ಲ. ಹಣಕಾಸಿನ ವಿಚಾರದಲ್ಲಿ ದ್ರೋಹ ಮಾಡಬಹುದು. ನಿಮ್ಮ ದೈಹಿಕ ಬಲ ನಿರ್ವಹಿಸಲು ಯೋಗಾಸನ ಶಾಲೆಗೆ ಪ್ರವೇಶ ಪಡೆಯಿರಿ. ಮಕ್ಕಳಿಂದ ಎಲೆಕ್ಟ್ರಾನಿಕ್ ಉಪಕರಣಗಳ ನಷ್ಟ ಸಂಭವ. ಮಕ್ಕಳಿಂದ ಮದುವೆ ಆಮಂತ್ರಣ ತಿರಸ್ಕಾರ ಆಗಬಹುದು. ವಿಧವಾ/ ವಿಚ್ಛೇದನ ಪಡೆದ ಹೆಣ್ಣು ಮಕ್ಕಳ ಮರು ಮರುಮದುವೆ ಸಾಧ್ಯತೆ. ಶಿಕ್ಷಕ ವೃಂದದ ಮಕ್ಕಳಿಗೆ ವಿದೇಶ ಹೊರಡುವ ಭಾಗ್ಯ ಸಿಗಲಿದೆ. ಬದಾಮಿ ವರ್ಣದ ವಸ್ತ್ರ ಧರಿಸಿದರೆ ಸರ್ವ ಕಾರ್ಯ ಸಫಲ.

Spread the love
  • Related Posts

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    ಬೆಳ್ತಂಗಡಿ: ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಸಾರಥ್ಯದಲ್ಲಿ 6ನೇ ವರ್ಷದ ದೋಸೆ ಹಬ್ಬ ಹಾಗೂ ಗೋ ಪೂಜಾ ಉತ್ಸವ ಅಕ್ಟೋಬರ್ 20 ಸೋಮವಾರದಂದು ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ…

    Spread the love

    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜಾಗೃತಿ ವೇದಿಕೆ ಹಾಸನ, ಲಯನ್ಸ್ ಕ್ಲಬ್ ಸಕಲೇಶಪುರ, ರೋಟರಿ ಕ್ಲಬ್ ಸಕಲೇಶಪುರ, ಬಂಟರ ಸಂಘ ಸಕಲೇಶಪುರ, ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 14/10/2025ನೇ ಮಂಗಳವಾರ ಬೆಳಿಗ್ಗೆ 10ಗಂಟೆಯಿಂದ…

    Spread the love

    You Missed

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    • By admin
    • October 15, 2025
    • 17 views
    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    • By admin
    • October 13, 2025
    • 18 views
    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಿದಾಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ.

    • By admin
    • October 12, 2025
    • 43 views
    ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಿದಾಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ.

    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಿಂದ ಉಸ್ತುವಾರಿ ಸಚಿವರಿಗೆ ಮನವಿ

    • By admin
    • October 11, 2025
    • 38 views
    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಿಂದ ಉಸ್ತುವಾರಿ ಸಚಿವರಿಗೆ ಮನವಿ

    ಅಗ್ನಿ ಅವಘಡದಿಂದ ಮನೆ ಸುಟ್ಟ ಪ್ರಕರಣ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಿಂದ ತುರ್ತು ಸ್ಪಂದನೆ

    • By admin
    • October 7, 2025
    • 59 views
    ಅಗ್ನಿ ಅವಘಡದಿಂದ ಮನೆ ಸುಟ್ಟ ಪ್ರಕರಣ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಿಂದ ತುರ್ತು ಸ್ಪಂದನೆ

    ನೆರಿಯಾದಲ್ಲಿ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ

    • By admin
    • October 7, 2025
    • 57 views
    ನೆರಿಯಾದಲ್ಲಿ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ