ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮಿತಿಮೀರುತ್ತಿದ್ದು ರಾಜ್ಯದ 30 ಜಿಲ್ಲೆಯಲ್ಲೂ ತನ್ನ ಆಟವನ್ನು ಮುಂದುವರೆಸಿದೆ.
ರಾಜ್ಯದಲ್ಲಿಂದು 3649 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 71069ಕ್ಕೆ ಏರಿಕೆಯಾಗಿದೆ.
ಹೆಮ್ಮಾರಿ ಆರ್ಭಟಕ್ಕೆ 61 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1464ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯರಾಜಧಾನಿಯಲ್ಲಿ1714 ಮಂದಿಗೆ ಸೋಂಕು ದೃಢಪಟ್ಟಿದ್ದು 22ಮಂದಿ ಬಲಿಯಾಗಿದ್ದಾರೆ.
ಬಳ್ಳಾರಿ, ದಕ್ಷಿಣಕನ್ನಡ, ಮೈಸೂರು, ಯಾದಗಿರಿ, ಉತ್ತರಕನ್ನಡ, ಹಾಸನ, ಕೋಲಾರದಲ್ಲಿ ಮೂರಂಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದಲ್ಲಿಂದು1664 ಮಂದಿ ಸೋಂಕಿನಿಂದ ಗುಣಮುಖವಾಗಿ ಬಿಡುಗಡೆ ಗೊಂಡಿದ್ದು ಇದುವರೆಗೆ ರಾಜ್ಯದಲ್ಲಿ ಒಟ್ಟು 24549 ಮಂದಿ ಕೊರೋನಾದಿಂದ ಬಿಡುಗಡೆ ಹೊಂದಿದವರಾಗಿದ್ದಾರೆ.
ಪ್ರಸ್ತುತ 44140 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಐ.ಸಿ.ಯು ನಲ್ಲಿ 583 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರಗಳು: