ಚೀನಾಗಿಂತಲೂ ಪುರಾತನ ನಾಗರಿಕತೆ ಭಾರತದ್ದು : ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶ್ರೀನಿವಾಸ್ ಬಳ್ಳಿ

ಬೆಂಗಳೂರು: ಭಾರತ ಸ್ವಾತಂತ್ರ್ಯ ಬಂದಾಗಿನಿಂದ ಹುಟ್ಟಿದ್ದಲ್ಲ, ಅದರ ಹಿಂದೆಯೇ ನಮ್ಮಲ್ಲಿ ಗುರು ಪರಂಪರೆ ಸಮೃದ್ಧವಾಗಿತ್ತು. ಚೀನಾಗಿಂತಲೂ ಪುರಾತನ ನಾಗರಿಕತೆ ನಮ್ಮದು. ಹಾಗಾಗಿ ನಾವು ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ ಎಂದು ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶ್ರೀನಿವಾಸ್ ಬಳ್ಳಿ ಹೇಳಿದರು.

ದಿಶಾಭಾರತ್ ವತಿಯಿಂದ 77 ನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಸಲಾಗುತ್ತಿರುವ ನನ್ನ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಪೋಸ್ಟರ್ ಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶ್ರೀನಿವಾಸ್ ಬಳ್ಳಿ, ಭಾರತಕ್ಕೆ ಯುಗಯುಗಾಂತರ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ನಿರಂತರವಾಗಿ ಪರಕೀಯರ ಆಕ್ರಮಣದ ನಂತರವೂ ಭಾರತ ಗಟ್ಟಿಯಾಗಿ ನಿಂತಿರುವುದು ಅದರ ನೈಜ ಶಕ್ತಿಯನ್ನು ತೋರಿಸಿದೆ. ಈಗ ದೇಶಕ್ಕೊಂದು ದಿಶೆ ಬೇಕಾಗಿದೆ ಹಾಗಿದ್ದಾಗ ಮಾತ್ರ ಅದು ಉಳಿಯಲಿದೆ. ಸದ್ಯ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಹಜವಾಗಿ ಸುಂದರವಾಗಿರುವ ದೇಶವನ್ನು ಹಾಳು ಮಾಡುವ ಉದ್ದೇಶ ಸಹ ಹಲವರಿಗೆ. ಆದರೆ ಭಾರತ ಭಾರತವಾಗಿಯೇ ಉಳಿದಿದೆ. ಇಡೀ ಭಾರತ ಮೇಲೆ ಇತರ ದೇಶಗಳು ಆಕ್ರಮಣ ಮಾಡಿದರೂ ಹಿಮ್ಮೆಟಿಸಿದ ಕೀರ್ತಿ ಭಾರತಕ್ಕಿದೆ ಎಂದು ಹೇಳಿದರು. ಆಹಾರದ ವಿಷಯದಲ್ಲಿ ಸ್ವಾಲಂಭಿಯಾಗಿರುವ ಭಾರತ ಕೋಟ್ಯಂತರ ಕ್ವಿಂಟಲ್ ಅಕ್ಕಿಯನ್ನು ಇತರ ದೇಶಗಳಿಗೆ ಒದಗಿಸುತ್ತಿದ್ದೇವೆ. ಕೊರೋನಾ ಸಮಯದಲ್ಲಿ ಲಸಿಕೆ ಬೇಡಿಕೆಯನ್ನು ಜಗತ್ತಿಗೆ ಪೂರೈಸಿದೆ. ಡಿಜಿಟಲ್ ಕ್ರಾಂತಿಯಾಗಿರುವುದು ಸಹ ನಮ್ಮ ಭಾರತದಲ್ಲಿ. ಮುಂದುವರೆದ ದೇಶಗಳ ಮದ್ಯೆ ಭಾರತ ತಲೆ ಎತ್ತಿ ನಿಂತಿದೆ. ಚಂದ್ರಯಾನ ಮಂಗಳಯಾನ ಆದಿತ್ಯಯಾನವನ್ನು ಪೂರೈಸಿ ಹಲವು ಮುಂದುವರೆದ ದೇಶಗಳ ಮಧ್ಯೆ ತಲೆ ಘನತೆ ಮೆರೆದಿದೆ ಎಂದರು. ಹಿತಮಿತವಾಗಿ ಆಹಾರ ಸ್ವೀಕರಿಸುವಿಕೆ ನಮ್ಮ ಸಮಸ್ಕೃತಿಯಲ್ಲಿಯೇ ಇದೆ. ಯೋಗದ ವಿಷಯದಲ್ಲಿ ಭಾರತ ವಿಶ್ವ ಗುರುವಾಗಿದೆ. ನಮಗೆ ದೊಡ್ಡ ಗುರು ಪರಂಪರೆ ಸಹ ಬೆನ್ನೆಲುಬಾಗಿ ಇದೆ. ಸದ್ಯ ಈ ದೇಶಕ್ಕೊಂದು ದಿಶೆ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ದಿಶೆ ತೋರಿಸುವ ಅಗತ್ಯವಿದೆ. ಅರಿವನ್ನು ತೋರಿಸಬೇಕಿದೆ. ಆ ಕೆಲಸವನ್ನು ದಿಶಾ ಭಾರತ್ ಸಂಸ್ಥೆ ಮಾಡುತ್ತಿದೆ. ಕಳೆದ 20 ವರ್ಷಗಳಿಂದ ಸಾಕಷ್ಟು ಯುವಕರನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದೆ. ಮೈ ಭಾರತ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಂದುವರೆಸಿರುವುದು ಅದರ ಬದ್ಧತೆಗೆ ಸಾಕ್ಷಿಯಾಗಿದೆ. ಹಾಗಾಗಿ ಇಂತಹ ಕಾರ್ಯಕ್ರಮ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದು ಶ್ರೀನಿವಾಸ್ ಬಳ್ಳಿ ಹೇಳಿದರು.

ಮಹಾರಾಣಿ ಕ್ಲಸ್ಟರ್ ಯುನಿವರ್ಸಿಟಿಯ ಇತಿಹಾಸದ ಪ್ರೊಫೆಸರ್ ಡಾ. ವಿ ಅನುರಾಧ ಮಾತನಾಡಿ ಅನಾದಿ ಕಾಲದಲ್ಲಿ 16 ಸಾವಿರ ಮೈಲಿ ದೂರದಿಂದ ಭಾರತಕ್ಕೆ ಬಂದು ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದರು. ದಂತ, ನರ, ಮನಸ್ಸಿನ ವಿಜ್ಞಾನದ ಕುರಿತು ಅಭ್ಯಾಸ ಮಾಡುತ್ತಿದ್ದರು. ನೌಕಾಯಾನ ಶಾಸ್ತ್ರ, ಅಗ್ನಿಯ ಕುರಿತ ಅಧಯ್ಯನ ಸೇರಿ ಯಾವುದೇ ಜ್ಞಾನ ಪರಂಪರೆಯನ್ನು ಸರಿಯಾಗಿ ನೋಡಿದರೆ ಅದರ ಮೂಲ ಭಾರತದಿಂದಲೇ ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯತೆಯನ್ನು ಯುವಕರಲ್ಲಿ ಪ್ರಚುರಪಡಿಸಲು ದಿಶಾ ಭಾರತ ಸಾಕಷ್ಟು ಶ್ರಮಿಸುತ್ತಿದ್ದು, ಇನ್ನಷ್ಟು ಒಳ್ಳೆಯ ಕೆಲಸಗಳು ಸಂಸ್ಥೆಯಿಂದಾಗಲಿ ಎಂದು ಹಾರೈಸಿದರು.ಏನಿದು ಮೈ ಭಾರತ್ ಆನ್ಲೈನ್ ಕ್ಯಾಂಪೇನ್?ಮೈ ಭಾರತ್ ಆನ್ಲೈನ್ ಕ್ಯಾಂಪೇನ್ ಆಗಸ್ಟ್ 01 ರಿಂದ ಆಗಸ್ಟ್ 15 ರವರೆಗೆ ನಡೆಯಲಿದ್ದು ವಿವಿಧ ಸ್ಪರ್ಧೆಗಳು, ವಿವಿಧ ಉಪನ್ಯಾಸಗಳನ್ನು ಇದು ಹೊಂದಿರಲಿದೆ. ವಿದ್ಯಾರ್ಥಿ ಹಾಗೂ ಯುವ ಸಮೂಹದಲ್ಲಿ ದೇಶಭಕ್ತಿಯನ್ನು ಮೂಡಿಸುವ ಸಲುವಾಗಿ ಕಳೆದ ಐದು ವರ್ಷಗಳಿಂದ ದಿಶಾಭಾರತ್ ಮೈ ಭಾರತ್ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

Spread the love
  • Related Posts

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    ಮಂಗಳೂರು: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣವು ಮಂಗಳೂರಿನ ಕಾವೂರು ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಯವರು ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ…

    Spread the love

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    You Missed

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    • By admin
    • September 18, 2024
    • 33 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    • By admin
    • September 18, 2024
    • 18 views
    ಬಿಎಂಎಸ್  ರಿಕ್ಷಾ  ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    • By admin
    • September 16, 2024
    • 24 views
    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    • By admin
    • September 16, 2024
    • 36 views
    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    • By admin
    • September 15, 2024
    • 57 views
    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 48 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ