ಬೆಂಗಳೂರು: ರಾಜ್ಯರಾಜಧಾನಿ ಕೊರೋನಾ ಆರ್ಭಟಕ್ಕೆ ನಲುಗಿ ಹೋಗಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಾಮಾರಿ ಸ್ಫೋಟಗೊಂಡಿದೆ. ಬೆಂಗಳೂರಿನಲ್ಲಿ ಬರೊಬ್ಬರಿ 1183 ಸೋಂಕಿತರು ಪತ್ತೆಯಾಗಿದ್ದು 24 ಮಂದಿ ಸಿಲಿಕಾನ್ ಸಿಟಿಯಲ್ಲಿ ಬಲಿಯಾಗಿದ್ದು ರಾಜಧಾನಿ ಜನತೆಯನ್ನು ಕಂಗೆಡಿಸಿದೆ. ಇದರ ಬೆನ್ನಲ್ಲೇ ಕರಾವಳಿಯ ಕಡಲತಡಿ ಮಂಗಳೂರು ಹಾಗೂ ಗಣಿನಾಡು ಬಳ್ಳಾರಿಯನ್ನು ಬೆಂಬಿಡದೇ ಕಾಡುತ್ತಿರುವ ಕಿಲ್ಲರ್ ವೈರಲ್ ಇಂದು ರಾಜ್ಯದ 27 ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸಿದೆ.
ರಾಜ್ಯದಲ್ಲಿಂದು1839 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 21549 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಕೊರೋನಾ ಮರಣಮೃದಂಗಕ್ಕೆ 42 ಬಲಿಯಾಗಿದ್ದು ಸಾವಿನ ಸಂಖ್ಯೆ 335 ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಸೋಂಕಿತರ ವಿವರಗಳು: