ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮೊಡಂಕಾಪುವಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತಿದ್ದ ವೇಳೆ ಅಬಕಾರಿ ಇಲಾಖೆ ಅಧಿಕಾಗಳು ಒರ್ವನನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಟೋಯೋಟಾ ಇಟೋಸ್ ವಾಹನದಲ್ಲಿ ಸುಮಾರು 50.400ಲೀ ಗೋವಾ ಮದ್ಯ ಸಾಗಣಿಕೆ ಮಾಡುತ್ತಿದ್ದ ಸಂದರ್ಭ ಆರೋಪಿ ಸಂದೀಪ್ ಲೋಬೋ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗೆ ಸೇರಿದ ವೆಲ್ಡಿಂಗ್ ಶಾಪ್ ನಲ್ಲಿ ಸುಮಾರು 107.600 ಮದ್ಯ, ಹಾಗೂ 34ಲೀ.ಬಿಯರ್ ಗೋವಾ ಮದ್ಯ ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಈ ಪೈಕಿ 2ವಾಹನಗಳನ್ನು ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದು ಇದರ ಮೌಲ್ಯ ಸುಮಾರು 22ಲಕ್ಷ ಎಂದು ಅಂದಾಜಿಸಲಾಗಿದೆ.
ಅಬಕಾರಿ ಉಪ ಆಯುಕ್ತರಾದ ಶೈಲಜ ಕೋಟೆ ನೇತೃತ್ವದಲ್ಲಿ ಬಂಟ್ವಾಳ ವಲಯ ಅಬಕಾರಿ ನಿರೀಕ್ಷಕರಾದ ಶೇಕ್ ಇಮ್ರಾನ್,ವಿಜಯಕುಮಾರ್, ಹಾಗೂ ಉಪನಿರೀಕ್ಷಕರಾದ ಜಗನಾಥ ನಾಯ್ಕ, ಹಾಗೂ ಅಬಕಾರಿ ಸಿಬ್ಬಂದಿಗಳು ದಾಳಿ ನಡೆಸಿ ಪ್ರಕರಣ ಬೇದಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತಾರೆ.