ಉಜಿರೆ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಇದರ ವತಿಯಿಂದ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳಾಲು ಗ್ರಾಮದ ಅಲಂಗೂರು ನಿವಾಸಿ ಭಾಸ್ಕರ ಗೌಡರ ಮನೆಗೆ ಭೇಟಿ ನೀಡಿ ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ನೀಡಿ ಸಹಾಯಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ದಾಮೋದರ ಗೌಡ ಸುರುಳಿ, ನವೀನ್ ಬಿ.ಕೆ, ಜಯಂತ ಗೌಡ ಓಣಿಯಲು, ಸತೀಶ್ ಗೌಡ ಎಳ್ಳುಗದ್ದೆ,ಟ್ರಸ್ಟ್ ಸಮಿತಿಯ ಸದಸ್ಯರಾದ ಯಶೋಧರ ಅನಂತೋಡಿ, ಪದ್ಮನಾಭ, ವಿಘ್ನನೇಶ್ ಅನಂತೋಡಿ ಉಪಸ್ಥಿತರಿದ್ದರು.
ಕಾಡುಕೋಣ ದಾಳಿಗೆ ಕೂಲಿಕಾರ್ಮಿಕ ಮಹಿಳೆ ಬಲಿ
ಚಿಕ್ಕಮಗಳೂರು : ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕೆ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಹಳೇಕೋಟೆ ಗ್ರಾಮದ ಕಾಫಿ ಬೆಳೆಗಾರರಾದ ಹಳೇಕೋಟೆ ರಮೇಶ್ ಎಂಬವರಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ. ಅಸ್ಸಾಂ…