
ಬೆಳ್ತಂಗಡಿ: ಉಜಿರೆಯ ಪ್ರತಿಷ್ಟಿತ ಬೆನಕ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ದಿನಾಂಕ 08/01/2025ರಂದು ನಡೆಯಲಿದೆ.
ಮೂಳೆ ತಜ್ಞ, ಮೈಕ್ರೋ ಸರ್ಜರಿ ಸ್ಪೆಷಾಲಿಸ್ಟ್ ಬಾ.ರೋಹಿತ್ ಜಿ.ಭಟ್ ನೇತ್ರತ್ವದಲ್ಲಿ ಶಿಬಿರವು ನಡೆಯಲಿದೆ.
ಈ ಶಿಬಿರದಲ್ಲಿ ವಿಶೇಷವಾಗಿ 60ವರ್ಷ ಮೇಲ್ಪಟ್ಟ ವಯಸ್ಕರಿಗೆ ದೂರದ ಊರಿಗೆ ಹೋಗಿ ತಪಾಸಣೆ ಮಾಡಲು ಆಗದಿರುವ ಕಾರಣ ಹಾಗೂ ಬಹುತೇಕರಿಗೆ ಈ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಿಕೊಂಡಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಈ ನಿಟ್ಟಿನಲ್ಲಿ ಎಲ್ಲರಿಗೂ ಉಚಿತ ತಪಾಸಣೆ ನಡೆಯಲಿದೆ