ವಿಶ್ವದ ಅತೀ ದುಬಾರಿ ತರಕಾರಿಯನ್ನು ಬೆಳೆದ ಬಿಹಾರದ ರೈತ! ಒಂದು ಕೆ.ಜಿ ತರಕಾರಿಗೆ 1ಲಕ್ಷ ಮೌಲ್ಯ! ರೈತನ ಕಾರ್ಯವನ್ನು ಶ್ಲಾಘಿಸಿ ಟ್ವೀಟ್​ ಮಾಡಿದ ಐಎಎಸ್ ಅಧಿಕಾರಿ!

ಪಾಟ್ನಾ: ಬಿಹಾರದ ರೈತರೊಬ್ಬರು ವಿಶ್ವದ ಅತೀ ದುಬಾರಿ ತರಕಾರಿಯನ್ನ ಬೆಳೆದಿದ್ದಾರೆಂದು ಭಾರೀ ಸುದ್ದಿಯಾಗ್ತಿದೆ. ಈ ಬೆಳೆ ಭಾರತದ ರೈತರಿಗೆ ಗೇಮ್​ ಚೇಂಜರ್​ ಆಗಲಿದೆ ಎಂದು ಐಎಎಸ್​ ಅಧಿಕಾರಿಯೊಬ್ಬರು ಶ್ಲಾಘಿಸಿದ್ದು, ರೈತನ ಸ್ಟೋರಿ ಈಗ ವೈರಲ್ ಆಗ್ತಿದೆ.

ಬಿಹಾರದಲ್ಲಿ ಇದೇ ಮೊದಲ ಬಾರಿಗೆ, ಅಮರೇಶ್​​ ಸಿಂಗ್ ಎಂಬುವವರು ಔರಂಗಾಬಾದ್​​ನಲ್ಲಿ ಪ್ರಯೋಗಾರ್ಥವಾಗಿ ಹಾಪ್​ಶೂಟ್ಸ್​ ಎಂಬ ತರಕಾರಿಯನ್ನ ಬೆಳೆದಿದ್ದಾರೆ. ಈ ತರಕಾರಿ ಇಡೀ ಜಗತ್ತಿನಲ್ಲೇ ಅತೀ ದುಬಾರಿಯಂತೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ತರಕಾರಿ ಒಂದು ಕೆ.ಜಿಗೆ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತದೆ ಎಂದು ವರದಿಯಾಗಿದೆ. 38 ವರ್ಷದ ಅಮರೇಶ್​ ಔರಂಗಾಬಾದ್​ನ ಕರಾಮ್ಡೀ ಗ್ರಾಮದವರಾಗಿದ್ದು, ಹಾಪ್​ ಶೂಟ್ಸ್​ ತರಕಾರಿ ಕೃಷಿ ಶುರು ಮಾಡಿರುವ ಮೊದಲ ರೈತ ಎನಿಸಿಕೊಂಡಿದ್ದಾರೆ.

ಅಮರೇಶ್​​ ಈ ಬೆಳೆ ಬೆಳೆದು ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹು ಎಂಬವರು ರೈತನ ಕಾರ್ಯವನ್ನ ಶ್ಲಾಘಿಸಿ ಟ್ವೀಟ್​ ಮಾಡಿದ್ದು, ಪ್ರಧಾನಿ ಮೋದಿಗೆ ಟ್ಯಾಗ್​ ಮಾಡಿದ್ದಾರೆ.

ಈ ತರಕಾರಿಯ ಒಂದು ಕಿಲೋಗ್ರಾಂ ಬೆಲೆ ಸುಮಾರು 1 ಲಕ್ಷ ರೂಪಾಯಿ. ವಿಶ್ವದ ಅತ್ಯಂತ ದುಬಾರಿ ತರಕಾರಿ ‘ಹಾಪ್-ಶೂಟ್ಸ್​​’ಗಳನ್ನು ಬಿಹಾರ ಮೂಲದ ಅಮರೇಶ್ ಸಿಂಗ್ ಅವರು ಭಾರತದಲ್ಲಿ ಮೊದಲ ಬಾರಿಗೆ ಬೆಳೆದಿದ್ದಾರೆ. ಭಾರತೀಯ ರೈತರಿಗೆ ಇದು ಗೇಮ್ ಚೇಂಜರ್ ಆಗಬಹುದು
ಸುಪ್ರಿಯಾ ಸಾಹು, ಐಎಎಸ್​ ಅಧಿಕಾರಿ

https://twitter.com/supriyasahuias/status/1377111139914444809?ref_src=twsrc%5Etfw%7Ctwcamp%5Etweetembed%7Ctwterm%5E1377111139914444809%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಆದ್ರೆ ಈ ಹಾಪ್​​ಶೂಟ್ಸ್​ ಬೆಲೆ ನಿಜಕ್ಕೂ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಇದೆಯಾ ಅಂತ ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಯಾಕಂದ್ರೆ ಕೆಲ ವರ್ಷಗಳ ಹಿಂದೆ ಹಿಮಾಚಲ ಪ್ರದೇಶದಲ್ಲಿ ಹಾಪ್​ಶೂಟ್ಸ್​ ತರಕಾರಿಯನ್ನ ಬೆಳೆಯಲಾಗ್ತಿತ್ತು. ಆಗ ಕೆ.ಜಿಗೆ ಕೇವಲ 50 ರೂಪಾಯಿ ಸಿಗುತ್ತಿದ್ದರಿಂದ ರೈತರು ಹಾಪ್​ಶೂಟ್ಸ್​ ಕೃಷಿಯನ್ನ ಕೈಬಿಟ್ಟರು ಎಂದು 2019ರಲ್ಲಿ ವರದಿಯಾಗಿತ್ತು. ಅದನ್ನ ಉಲ್ಲೇಖಿಸಿ ಜನರು ಇದರ ಬೆಲೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಆದ್ರೆ ಈ ತರಕಾರಿ 6 ವರ್ಷದ ಹಿಂದೆ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿಗೆ 1000 ಪೌಂಡ್ಸ್(ಸುಮಾರು ₹1 ಲಕ್ಷ)ದಂತೆ ಮಾರಾಟವಾಗ್ತಿತ್ತು. ಇದು ಅತ್ಯಂತ ಅಪರೂಪದ ತರಕಾರಿಯಾಗಿದ್ದು, ವಿಶೇಷವಾಗಿ ಆರ್ಡರ್​ ಮಾಡುವ ಮೂಲಕ ಇದನ್ನ ಖರೀದಿಸಲಾಗುತ್ತದೆ. ಇದರ ಹೂವು, ಕಾಂಡ ಮತ್ತು ಟೆಂಡ್ರೈಲ್ಸ್​ನಿಂದ​ ವಿವಿಧ ಉಪಯೋಗಗಳಿವೆ ಎಂದು ವರದಿಗಳು ಹೇಳುತ್ತವೆ. ಅಲ್ಲದೆ ಲಂಡನ್​​ನಲ್ಲಿ ಹಾಪ್​ಶೂಟ್ಸ್​ ಫೆಸ್ಟಿವಲ್ ತುಂಬಾನೆ ಫೇಮಸ್​.

ಯಾಕಿಷ್ಟು ದುಬಾರಿ ಹಾಪ್​ಶೂಟ್ಸ್​?
Theguardian.com ನಲ್ಲಿನ ಲೇಖನವೊಂದರ ಪ್ರಕಾರ, ಹಾಪ್​ಶೂಟ್ಸ್​ ಕೊಯ್ಲು ಮಾಡುವುದು ತುಂಬಾ ಕಷ್ಟ, ಆದ್ದರಿಂದ ಅದರ ಬೆಲೆ ದುಬಾರಿ ಎನ್ನಲಾಗಿದೆ. ಇದ್ರಲ್ಲಿ ಕಳೆ ತರಹದ ಟೆಂಡ್ರೈಲ್‌ಗಳು ಬೆಳೆಯುತ್ತವೆ. ಇದನ್ನ ಸಂಗ್ರಹಿಸಬೇಕಾದರೆ ಬಹಳ ಹುಡುಕಾಟ ನಡೆಸಿ ಶ್ರಮ ವಹಿಸಬೇಕು. ಮತ್ತು ಅವು ತುಂಬಾ ಚಿಕ್ಕದಾಗಿರೋದ್ರಿಂದ ಒಂದು ಚೀಲ ತುಂಬಲು ನೂರಾರು ಟೆಂಡ್ರೈಲ್‌ಗಳನ್ನ ಒಟ್ಟುಗೂಡಿಸಬೇಕು. ಹೀಗಾಗಿ ಇದರ ಬೆಲೆ ದುಬಾರಿ ಎಂದು ಹೇಳಲಾಗಿದೆ.

ಇನ್ನು ತಮ್ಮ ಬೆಳೆ ಕುರಿತು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಅಮರೇಶ್​, ಪ್ರಧಾನಿ ಮೋದಿ ಅವರು ಹಾಪ್​ ಶೂಟ್ಸ್​ ಕೃಷಿಯನ್ನ ಉತ್ತೇಜಿಸಲು ವಿಶೇಷ ವ್ಯವಸ್ಥೆಯನ್ನ ಮಾಡಿದರೆ, ರೈತರು ಕೆಲವೇ ವರ್ಷಗಳಲ್ಲಿ ಬೇರೆ ಬೆಳೆಗಳಿಂದ ಗಳಿಸುವುದಕ್ಕಿಂತ 10 ಪಟ್ಟು ಹೆಚ್ಚು ಆದಾಯವನ್ನ ಗಳಿಸಬಹುದು ಎಂದಿದ್ದಾರೆ. ವಾರಣಾಸಿಯಲ್ಲಿರುವ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ಲಾಲ್ ಅವರ ಮೇಲ್ವಿಚಾರಣೆಯಲ್ಲಿ ಹಾಪ್-ಶೂಟ್ಸ್​ (ಹ್ಯೂಮುಲಸ್-ಲುಪುಲಸ್) ಕೃಷಿ ನಡೆಸಲಾಗುತ್ತಿದೆ.

ಈ ತರಕಾರಿಯ ಸಸಿಗಳನ್ನು ನಾನು ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆಯಿಂದ ತಂದು ನೆಟ್ಟಿದ್ದೇನೆ. ಶೇ.60ಕ್ಕಿಂತ ಹೆಚ್ಚಿನ ಕೃಷಿ ಯಶಸ್ವಿಯಾಗಿದೆ. ಇದು ಬಿಹಾರದಲ್ಲೂ ಭರ್ಜರಿ ಯಶಸ್ಸು ಗಳಿಸಿ, ಉತ್ತಮ ಕೃಷಿಯಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.

ಯಾವುದಕ್ಕೆ ಬಳಕೆಯಾಗುತ್ತೆ ಹಾಪ್​ಶೂಟ್ಸ್​?
ಈ ತರಕಾರಿಯ ಉಪಯೋಗವೇನು ಎಂಬ ಬಗ್ಗೆ ಮಾಹಿತಿ ನೀಡಿರುವ ಅಮರೇಶ್​ ಸಿಂಗ್, ಹಾಪ್​​ ಶೂಟ್ಸ್​ನ ಹಣ್ಣು, ಹೂವು ಮತ್ತು ಕಾಂಡವನ್ನು ಪಾನೀಯ ತಯಾರಿಕೆ ಹಾಗೂ ಬಿಯರ್ ತಯಾರಿಕೆಯಲ್ಲಿ ಬಳಸುತ್ತಾರೆ. ಹಾಗೇ ಆಯಂಟಿಬಯಾಟಿಕ್ಸ್​ ತಯಾರಿಕೆ ಸೇರಿದಂತೆ ಔಷಧೀಯ ಉದ್ದೇಶಗಳಿಗೂ ಬಳಸಲಾಗುತ್ತದೆ. ಈ ತರಕಾರಿಯ ಕಾಂಡದಿಂದ ತಯಾರಿಸಿದ ಔಷಧಿ ಕ್ಷಯರೋಗ (ಟಿಬಿ) ಚಿಕಿತ್ಸೆಯಲ್ಲಿ ಹೆಚ್ಚಿನ ಪರಿಣಾಮವನ್ನು ಹೊಂದಿದೆ ಅನ್ನೋದು ಕಂಡುಬಂದಿದೆ. ಇದರ ಹೂವನ್ನು ಹಾಪ್-ಕೋನ್ ಅಥವಾ ಸ್ಟ್ರೋಬೈಲ್ ಎಂದು ಕರೆಯಲಾಗುತ್ತದೆ. ಇದನ್ನು ಬಿಯರ್ ತಯಾರಿಕೆಯಲ್ಲಿ ಸ್ಟೆಬಿಲಿಟಿ ಏಜೆಂಟ್ ಆಗಿ ಬಳಸುತ್ತಾರೆ. ಉಳಿದ ಕಾಂಡಗಳನ್ನು ಆಹಾರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಅಂತ ತಿಳಿಸಿದ್ದಾರೆ.

ಯುರೋಪಿಯನ್ ದೇಶಗಳಲ್ಲಿ ಹಾಪ್-ಶೂಟ್ಸ್​ನ ಬಳಕೆ ಹೆಚ್ಚು. ಹಾಪ್​ಶೂಟ್ಸ್​ ಆಯಂಟಿಆಕ್ಸಿಡೆಂಟ್ಸ್​ನ ಮೂಲವಾಗಿರುವ ಹಿನ್ನೆಲೆ ಚರ್ಮವನ್ನು ಕಾಂತಿಯುತ ಮತ್ತು ಯಂಗ್ ಆಗಿಡಲು ಇದನ್ನು ಬಳಸಲಾಗುತ್ತದೆಯಂತೆ. ಈ ತರಕಾರಿಯನ್ನ ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್, ಜರ್ಮನಿ ಮತ್ತು ಇತರ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಹಿಮಾಚಲಪ್ರದೇಶದಲ್ಲಿ ಬೆಳೆಯಲಾಗ್ತಿತ್ತು ಹಾಪ್​ಶೂಟ್ಸ್​
ಈ ಹಿಂದೆ ಭಾರತದಲ್ಲಿ ಹಾಪ್​ಶೂಟ್ಸ್​​ ತರಕಾರಿಯನ್ನ ಹಿಮಾಚಲ ಪ್ರದೇಶದಲ್ಲಿ ಬೆಳೆಯಲಾಗ್ತಿತ್ತು. 1975ರಿಂದ ಲಾಹೌಲ್​ನಲ್ಲಿ ಜನರು ತಮ್ಮ ಜೀವನಾಧಾರಕ್ಕಾಗಿ ಹಾಪ್​ಶೂಟ್ಸ್​ ಬೆಳೆಯುತ್ತಿದ್ದರು. ಆದರೆ ಲಾಹೌಲ್​​ನ ರೈತರು ಸಾಂಪ್ರದಾಯಿಕ ಕೃಷಿಯನ್ನು ಅನುಸರಿಸುತ್ತಿದ್ದ ಹಿನ್ನೆಲೆ ಉತ್ಪಾದನೆಯನ್ನು ಹೆಚ್ಚಿಸಲು ವಿಫಲವಾಗಿದ್ದರು. ಈ ಮಧ್ಯೆ ಬೇರೆ ದೇಶಗಳು ಕಡಿಮೆ ಬೆಲೆಗೆ ಹಾಪ್ಸ್​ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಭಾರತೀಯ ರೈತರು ನಷ್ಟ ಅನುಭವಿಸಿದ್ದರು. ಆಗ ಒಂದು ಕೆ.ಜಿ ಹಾಪ್​ಶೂಟ್ಸ್​ಗೆ ಮಾರುಕಟ್ಟೆಯಲ್ಲಿ ಕೇವಲ 50 ರೂಪಾಯಿ ಸಿಗುತ್ತಿತ್ತು. ಆದ್ರೆ ರೈತರ ಬಂಡವಾಳ ಅದಕ್ಕಿಂತ ಹೆಚ್ಚಿರುತ್ತಿತ್ತು ಎನ್ನಲಾಗಿದೆ. ಹೀಗಾಗಿ ಲಾಭ ಸಿಗದ ಕಾರಣ ಹಾಪ್​ಶೂಟ್ಸ್​ ಕೃಷಿ ಹಿಮಾಚಲಪ್ರದೇಶದಲ್ಲಿ ನಶಿಸಿಹೋಯ್ತು ಎಂದು ವರದಿಗಳು ಹೇಳುತ್ತವೆ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 276 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 297 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 198 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 298 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 156 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 89 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ