ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿ, ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಜಯನಗರ ಆರ್ ಟಿ ಒ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿದ್ದ ನಟಿ ರಾಗಿಣಿಯ ಗೆಳೆಯ ಬಿಕೆ ರವಿಶಂಕರ್ ರನ್ನು ಅಮಾನತುಗೊಳಿಸಿ ಸಾರಿಗೆ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಸಾರಿಗೆ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳಾದಂತ ಎನ್ ಶಿವಕುಮಾರ್ ಅವರು, ದಿನಾಂಕ 03-09-2020ರಿಂದ ಎಸ್ ಡಿ ಎ ಬಿ.ಕೆ.ರವಿಶಂಕರ್ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ. ಇವರ ಬಗ್ಗೆ ದೃಶ್ಯಮಾಧ್ಯಗಳು, ಪತ್ರಿಕೆಗಳಲ್ಲಿ ವರದಿ ಪ್ರಸಾರವಾಗಿದ್ದು, ಅಪರಾಧ ದಳದ ಅಧಿಕಾರಿಗಳಿಂದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿರುವುದಾಗಿ ತಿಳಿದು ಬಂದಿರುತ್ತದೆ.
ಒಬ್ಬ ಸರ್ಕಾರಿ ನೌಕರರಾಗಿ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಹೀಗಾಗಿ ಅವರ ಬಗ್ಗೆ ವಿಚಾರಣೆ ಬಾಕಿ ಉಳಿಸಿ, ಅಮಾನತುಗೊಳಿಸಲಾಗಿದೆ ಎಂಬುದಾಗಿ ಆದೇಶಿಸಿದ್ದಾರೆ.