ಬೆಳ್ತಂಗಡಿ :ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ತಾಲೂಕು ಸಂಚಾಲಕ ಅನಿಲ್ ಪೈ, ಯುವ ಕಾಂಗ್ರೆಸ್ ಬೆಳ್ತಂಗಡಿ ನಗರ ಬ್ಲಾಕ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಮುಂದಿನ ಮೂರು ವರ್ಷಗಳ ಅವಧಿಗಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜ. 12ರಂದು ಆನ್‌ಲೈನ್ ಮೂಲಕ ಚುನಾವಣೆ ನಡೆದಿದ್ದು, ಅನಿಲ್ ಪೈ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಅನಿಲ್ ಪೈ ಅವರು 662 ಮತ ಪಡೆದರೆ, ಅದರಲ್ಲಿ 173 ಮತ ನಿರಾಕರಣೆಯಾಗಿದೆ.
ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…