ಕೊಕ್ಕಡ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಹಾಗೂ ಬಿ.ಎಂ.ಎಸ್ ಗ್ರಾಮ ಸಮಿತಿ ಕೊಕ್ಕಡ ಇದರ ಅಶ್ರಯದಲ್ಲಿ ನೋಂದಾವಣೆ ಗೊಂಡ ಕಟ್ಟಡ ಕಾರ್ಮಿಕರಿಗೆ ಗುರುತು ಚೀಟಿ ವಿತರಣೆ ಮತ್ತು ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಹರಿ ಹರ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯರಾದ ಕೃಷ್ಣ ಬಟ್ ಹಿತ್ತಿಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕು ಬಿ.ಎಂ.ಎಸ್ ಅಧ್ಯಕ್ಷರಾದ ಉದಯ ಬಿ. ಕೆ ಯವರು ಮತ್ತು ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ರವರು ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯ ಮತ್ತು ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಕೊಕ್ಕಡ ಬಿ ಎಮ್ ಎಸ್ ಸಂಘ ಗ್ರಾಮ ಸಮಿತಿಯ ವತಿಯಲ್ಲಿ ಮೊದಲ ಹಂತದಲ್ಲಿ ನೋಂದಾವಣೆ ಗೊಂಡ ಕಟ್ಟಡ ಕಾರ್ಮಿಕರ 39 ಗುರುತು ಚೀಟಿಯನ್ನು ಸಾಂಕೇತಿಕವಾಗಿ ತಾಲೂಕು ಸಮಿತಿಯ ಪ್ರಮುಖರು ಮತ್ತು ಸಭಾ ಅತಿಥಿಗಳು ವಿತರಣೆ ಮಾಡಿದರು. ನಂತರ ಸಭಾ ಅದ್ಯಕ್ಷರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕ್ರಷ್ಣ ಭಟ್ ಕೊಕ್ಕಡ ಅವರು ದೇಶ ಹಿತ ಚಿಂತನೆ ಪ್ರತಿ ಸಂಘಟನೆ ಮೊದಲ ದ್ಯೇಯವಾಗಬೇಕಿದೆ. ಇಂದು ನಾವು ಜಗತ್ತು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕಾರಣ ಮಾನವೀಯತೆಯ ಕೊರತೆ ಕಾರಣವಾಗಿದೆ ವೈಯಕ್ತಿಕ ಹಿತಾಸಕ್ತಿಯೊಂದಿಗೆ ಸಮಾಜದ ಹಿತಾಸಕ್ತಿಯ ಕೆಲಸ ಮಾಡುವುದು ಸಂಘದ ದ್ಯೇಯವಾಗಬೇಕಿದೆ ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿರುವ ಭಾರತೀಯ ಮಜ್ದೂರ್ ಸಂಘ ಭಾರತದ ಘನತೆಯನ್ನು ಎತ್ತಿ ಹಿಡಿಯುವ ಸಂಘನೆಯಾಗಿದೆ ಎಂದರು.
ಕೊಕ್ಕಡ ಸಿ. ಎ ಬ್ಯಾಂಕ್ ಅಧ್ಯಕ್ಷರು ಕುಶಾಲಪ್ಪ ಗೌಡ ಪೂವಾಜೆ ಅವರು ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳುವಂತೆ ವಿನಂತಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೊಕ್ಕಡ ಸಿ.ಎ ಬ್ಯಾಂಕ್ ನ ಉಪಾಧ್ಯಕ್ಷರು ಈಶ್ವರ್ ಭಟ್ ಹಿತ್ತಿಲು ಕೊಕ್ಕಡ ಬಿ.ಎಮ್. ಎಸ್. ಗ್ರಾಮ ಸಮಿತಿಯ ಕಾರ್ಯದರ್ಶಿ ವಸಂತ ನಾಯ್ಕ್ ಓಣಿತ್ತರ್ ಜತೆ ಕಾರ್ಯದರ್ಶಿ ಶೇಖರ್ ಗಾಣಗಿರಿ ಉಪಸ್ಥಿತರಿದ್ದರು.ಯೋಗೀಶ್ ಅಲಂಬಿಲ ಸ್ವಾಗತಿಸಿ ಕೇಶವ ಹಲ್ಲಿಂಗೇರಿ ನಿರೂಪಿಸಿ ವಂದಿಸಿದರು.