ಉಡುಪಿ: ಉಡುಪಿಯಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಸರಸಸಲ್ಲಾಪದಲ್ಲಿ ನಿರತರಾಗಿದ್ದ ಅನ್ಯಕೋಮಿನ ಜೋಡಿಯನ್ನು ಸುರತ್ಕಲ್ ಬಳಿ ಬಸ್ ತಡೆದು ಬಜರಂಗದಳದ ಕಾರ್ಯಕರ್ತರು ಪೋಲೀಸರ ವಶಕ್ಕೆ ನೀಡಿದ ಘಟನೆ ವರದಿಯಾಗಿದೆ.
ಹಿಂದು ಹೆಣ್ಣುಮಕ್ಕಳನ್ನು ಪುಸಲಾಯಿಸಿ ಲವ್ ಜಿಹಾದ್ ಮಾಡುತ್ತಿರುವ ಪ್ರಕರಣ ಮತ್ತೆ ಮತ್ತೆ ಮರುಕಳಿಸುತ್ತಿದ್ದು
ಲವ್ ಜಿಹಾದ್ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಆತಂಕವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣ ಕಂಡು ಬಂದರೆ ಮತ್ತೆ ನೇರ ಕಾರ್ಯಾಚರಣೆಯ ನಡೆಸುತ್ತೇವೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.