ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ವಾಪಸ್ ಪಡೆದುಕೊಳ್ಳಲು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತೀರ್ಮಾನಿಸಿದ್ದಾರೆ.
ಆ ಮೂಲಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕೊಟ್ಟ ದೂರನ್ನು ವಾಪಸ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ತಾವು ನೀಡಿದ್ದ ದೂರನ್ನು ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ವಕೀಲ ಕುಮಾರ್ ಪಾಟೀಲ್ ಅವರಿಗೆ ಪತ್ರ ರವಾನಿಸಿದ್ದಾರೆ. ರಮೇಶ್ ವಿರುದ್ಧ ದೂರು ಸಲ್ಲಿಸಿ ಈಗ ಯು ಟರ್ನ್ ತೆಗೆದುಕೊಂಡು ದೂರು ವಾಪಸ್ ಪಡೆಯಲಿದ್ದಾರೆನ್ನಲಾಗಿದೆ.
ಇದೀಗ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಏಕಾಏಕಿ ಯಾಕೆ ಈ ನಿರ್ಧಾರ ತೆಗೆದುಕೊಂಡ್ರು ಅನ್ನೋದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇನ್ನು ದೂರಿನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಹಾಗಾಗಿ ದೂರನ್ನು ವಾಪಸ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಹಾಗಾದ್ರೆ ಮೊದಲು ಈ ವಿಚಾರ ಗೊತ್ತಿರಲಿಲ್ವಾ ಅನ್ನೋ ಮಾತುಗಳು ಚರ್ಚೆಯಾಗುತ್ತಿವೆ.