ಕೇಂದ್ರದ ನಿಯಮ ಪಾಲಿಸದಿದ್ದರೆ ಮೇ.26ರಿಂದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬ್ಲಾಕ್!

ನವದೆಹಲಿ: ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗೆ ಸಂಕಷ್ಟ ಎದುರಾಗಿದೆ. ಕೇಂದ್ರ ಸರ್ಕಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಪರಿಷ್ಕರಿಸಿರುವ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳನ್ನು ಇದುವರೆಗೂ ಒಪ್ಪದ ಟ್ವಿಟರ್ , ಫೇಸ್‌ಬುಕ್, ಇನ್‌ಸ್ಟಾಗ್ರಾಂ ಭಾರತದಲ್ಲಿ ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿದೆ.

ಭಾರತದಲ್ಲಿ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಕುರಿತು ಹೊಸ ನಿಯಮಗಳನ್ನು ಕೇಂದ್ರ ಸರ್ಕಾರ ತಂದಿದೆ. ಈ ಪ್ರಕಾರ ಫೆಬ್ರವರಿ 25 ರಂದು ಸಾಮಾಜಿಕ ಮಾಧ್ಯಮ ದಿಗ್ಗಜರಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಿಗೆ ನೊಟೀಸ್ ನೀಡಲಾಗಿದೆ.

ಜೊತೆಗೆ 3 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ನಿಯಮ ಒಪ್ಪಿಕೊಂಡಿಲ್ಲ. ಇದೇ ಧೋರಣೆ ಮುಂದವರಿದರೆ ಮೇ.26ಕ್ಕೆ ಭಾರತದಲ್ಲಿ ಟ್ವಿಟರ್, ಫೇಸ್‌ಬುಕ್ , ಇನ್‌ಸ್ಟಾಗ್ರಾಂ ಬ್ಲಾಕ್ ಆಗಲಿದೆ.

ಸುದ್ದಿ ತಾಣಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ಕೇಂದ್ರ ಫೆಬ್ರವರಿಯಲ್ಲಿ ಜಾರಿಗೆ ತಂದಿದೆ. ಈ ನಿಯಮವನ್ನು ಅನುಸರಿಸಲು ಮೇ. 26ರ ಅಂತಿಮ ಗಡುವನ್ನು ನೀಡಲಾಗಿದೆ. ಇನ್ನೆರಡು ದಿನದಲ್ಲಿ ಈ ನಿಯಮ ಪಾಲಿಸಲು ನಿರಾಕರಿಸಿದರೆ, ಸಾಮಾಜಿಕ ಮಾಧ್ಯಮ ಕಂಪನಿಗಳ ಸೇವೆ ಬ್ಲಾಕ್ ಆಗಲಿದೆ. ಕಾನೂನು ಪ್ರಕಾರ ಕ್ರಿಮಿನಲ್ ಕ್ರಮಕ್ಕೆ ಎದುರಿಬೇಕಾಗಿದೆ.

ಹೊಸ ನಿಯಮದ ಅಡಿಯಲ್ಲಿ, ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಮಾಹಿತಿ ಮತ್ತು ತಂತ್ರಜ್ಞಾನ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಒಳಗೊಂಡಿರುತ್ತದೆ. ಈ ಸಮಿತಿ ಬಯಸಿದರೆ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯ ನಡೆಸಲು ಸು ಮೋಟು ಅಧಿಕಾರ ನೀಡಲಾಗಿದೆ.

ಭಾರತ ಮೂಲದ ಅಧಿಕಾರಿಗಳ ನೇಮಕ, ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಹೊಸ ನಿಯಮ ಹೇಳುತ್ತದೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 300 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 52 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 326 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 56 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 117 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ