ಇಟಾನಗರ: ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾ ತನ್ನ ಭಯೋತ್ಪಾದನೆಯ ಮತ್ತೊಂದು ಮುಖವನ್ನು ತೋರತೊಡಗಿದೆಯೇ? ಹೌದು ಎನ್ನುತ್ತಿದ್ದಾರೆ ಅರುಣಾಚಲ ಪ್ರದೇಶದ ಗಡಿಭಾಗದ ಜನರು. ಅಲ್ಲಿನ ಐವರು ಯುವಕರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಅಪಹರಿಸಿದ್ದಾಗಿ ಮಾಜಿ ಕೇಂದ್ರ ಸಚಿವ, ಪಾಸಿಘಾಟ್ ವೆಸ್ಟ್ ಕ್ಷೇತ್ರದ ಶಾಸಕ ನಿನೊಂಗ್ ಎರಿಂಗ್ ಟ್ವೀಟ್ ಮಾಡಿದ್ದಾರೆ!
ಭಾರತ-ಚೀನಾ ಗಡಿ ಭಾಗದ ಸಮೀಪ ಸೆರಾ 7 ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಅಪ್ಪರ್ ಸಬನ್ಸಿರಿ ಜಿಲ್ಲೆಯ ನಾಚೋ ವೃತ್ತದ ಐವರು ಯುವಕರನ್ನು ಚೀನಾ ಪಿಎಲ್ಎ ಅಪಹರಿಸಿದೆ. ಅಪಹರಣಕ್ಕೆ ಒಳಗಾದವರನ್ನು ತನು ಬಾಕಡ್, ಪ್ರಶಾಂತ್ ರಿಂಗ್ಲಿಂಗ್, ನಗ್ರು ದಿರಿ, ದೊನ್ಗ್ಟು ಎಬಿಯಾ ಮತ್ತು ತೋಚ್ ಸಿಂಗ್ಕಾಮ್ ಎಂಬ ತಾಗಿನ್ ಸಮುದಾಯದ ಯುವಕರು ಎಂದು ಗುರುತಿಸಲಾಗಿದೆ.