ಚಾಮರಾಜನಗರ: ಚಾಮರಾಜನಗರದ ಹೊರವಲಯದಲ್ಲಿನ ಯಡಬೆಟ್ಟದ ತಪ್ಪಲ್ಲಿನಲ್ಲಿರುವ ಮೆಡಿಕಲ್ ಕಾಲೇಜಿನ ಕ್ವಾರ್ಟಸ್ ಗೆ ಚಿರತೆಯೊಂದು ನುಗ್ಗಿರುವ ಘಟನೆ ನಡೆದಿದೆ.
ನಿನ್ನೆ ವೈದ್ಯರು ವಾಸ ಮಾಡುತ್ತಿರುವ ಕ್ವಾರ್ಟಸ್‌ನ ಮೊದಲ ಮಹಡಿಗೆ ಚಿರತೆ ಬಂದಿದೆ. ಮೆಡಿಕಲ್ ಕಾಲೇಜು ಡೀನ್ ಡಾ.ಸಂಜೀವ್ ಅವರ ಪತ್ನಿ ಚಿರತೆಯನ್ನು ಕಂಡು ಕಿರುಚಾಡಿದ್ದಾರೆ. ಈ ವೇಳೆ ಅಡುಗೆ ಸಿಬ್ಬಂದಿ ಕೂಡ ಸ್ಥಳದಿಂದ ಓಡಿ ಹೋಗಿದ್ದಾರೆ.
ಈ ವೇಳೆ ವಿಚಲಿತಗೊಂಡ ಚಿರತೆಯೂ ಸಹ ಮಹಡಿಯಿಂದ ಕೆಳಗಿಳಿದು ಓಡಿ ಹೋಗಿದೆ. ಚಿರತೆ ಮಹಡಿಯಿಂದ ಕೆಳಗಿಳಿಯುವ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು, ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಚಿರತೆ ವಸತಿ ನಿಲಯದ ಮೊದಲ ಮಹಡಿಯಲ್ಲಿ ರೂಂ ಒಳಗಡೆ ನುಗ್ಗಲು ಪ್ರಯತ್ನಿಸಿರುವುದು ಕೂಡ ಕಂಡು ಬಂದಿದೆ.